ಸಿಡ್ನಿ: ಭಾರತದ ಅಗ್ರ ಡಬಲ್ಸ್ ಜೋಡಿಯಾದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ ಪಂದ್ಯದಲ್ಲಿ ಮಂಗಳವಾರ ತೈವಾನ್ನ ಚಾಂಗ್ ಕೊ–ಚಿ ಮತ್ತು ಪೊ ಲಿ–ವೀ ಜೋಡಿಯನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸುತ್ತಿಗೆ ತಲುಪಿತು.

ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಆಟಗಾರರು 25–23, 21–16 ರಿಂದ ತೈವಾನ್ನ ಜೋಡಿಯನ್ನು ಸೋಲಿಸಿದರು. ಭಾರತದ ಜೋಡಿ, ಈ ಮೊದಲು ಸತತವಾಗಿ ನಡೆದ ಹಾಂಗ್ಕಾಂಗ್ ಸೂಪರ್ 500 ಮತ್ತು ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ ಫೈನಲ್ಸ್ ತಲುಪಿದ್ದರು.

ಆದರೆ ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಬೇಗನೇ ಹೊರಬಿದ್ದರು. ಭಾರತದ ಆಟಗಾರ್ತಿಯರು ಮೊದಲ ಸುತ್ತಿನಲ್ಲಿ 10–21, 14–21ರಲ್ಲಿ ಇಂಡೊನೇಷ್ಯಾದ ಎಫ್.ಕುಸುಮಾ ಮತ್ತು ಎಂ.ಪುಸ್ಪಿತಾಸರಿ ಜೋಡಿ ಎದುರು ಸೋಲನುಭವಿಸಿತು.

ಭಾರತದ ಸಿಂಗಲ್ಸ್ ಆಟಗಾರರಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್, ಕಿದಂಬಿ ಶ್ರೀಕಾಂತ್ ಮತ್ತು ಆಯುಷ್ ಶೆಟ್ಟಿ ಅವರು ಬುಧವಾರ ಅಭಿಯಾನ ಆರಂಭಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.