ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಅನ್ಯರ ಬಗ್ಗೆ ಮೊದಲ ಭೇಟಿಯಲ್ಲಿ ತೀರ್ಮಾನವನ್ನು ಮಾಡಬೇಡಿ
Published 10 ಸೆಪ್ಟೆಂಬರ್ 2025, 23:55 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನ್ಯರ ಬಗ್ಗೆ ಮೊದಲ ಭೇಟಿಯಲ್ಲಿ ತೀರ್ಮಾನವನ್ನು ಮಾಡಬೇಡಿ. ಬರಬೇಕಿದ್ದ ಹಣ ಹಿಂತುರುಗಿಬಂದು ಕೈ ಸೇರಲಿದೆ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ದೈನಂದಿನ ಚುಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ.
ವೃಷಭ
ವಾಕ್ ಚಾತುರ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ತೀಕ್ಷ್ಣವಾದ ಮಾತುಗಳು ಬೇರೆಯವರ ದುಃಖಕ್ಕೆ ಕಾರಣವಾಗದಂತೆ ಗಮನಿಸಿ. ಸಿಟ್ಟಿನಿಂದ ಹೊರಬರಲು ಶನೈಶ್ಚರನ ಪ್ರಾರ್ಥನೆ ಮಾಡಿ.
ಮಿಥುನ
ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ಪರೋಪಕಾರದ ಫಲ ಮತ್ತು ಆತ್ಮವಿಶ್ವಾಸ ರಕ್ಷಿಸಲಿದೆ.
ಕರ್ಕಾಟಕ
ಕಾಡುವ ಸಮಸ್ಯೆಯಿಂದಾಗಿ ಯಾರಲ್ಲೂ ನಂಬಿಕೆ ಇಡದಂಥ ಪರಿಸ್ಥಿತಿ ತೋರಿಬರುವುದು. ಮನಸ್ಸಿಗೆ ಅಸಮಾಧಾನ ಆಗುವಂತಹ ಹಲವು ಘಟನೆಯು ಬಾಳಲ್ಲಿ ನಡೆಯಲಿದೆ. ಲಕ್ಷ್ಮಿನರಸಿಂಹನನ್ನು ಆರಾಧಿಸಿ.
ಸಿಂಹ
ದೈನಂದಿನ ಬದುಕಿನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಕಂಡುಬರಲಿದೆ. ಕೃಷಿ ಕೆಲಸಗಾರರಿಗೆ, ಮರಗೆಲಸ ಮಾಡುವವರಿಗೆ ಅವಕಾಶಗಳು ಬಂದರೂ ಸೋಮಾರಿತನ ಅಡ್ಡಬರುವುದು.
ಕನ್ಯಾ
ಕುಟುಂಬದ ಸದಸ್ಯರಲ್ಲಿ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಆಗುವುದು. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ರಾಜಕೀಯ ವ್ಯಕ್ತಿಗಳಿಗೆ ಸಮಯದ ಕೊರತೆ ಕಾಣಲಿದೆ.
ತುಲಾ
ಭಾವುಕರಾಗಿ ವರ್ತಿಸುವ ಸಂದರ್ಭ ಒದಗಿ ಬಂದೀತು. ಮೇಲಧಿ ಕಾರಿಗಳ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಯೋಚನೆ ಬಿಡಬೇಕಾಗುವುದು. ಚಿತ್ರಕಲೆಯಲ್ಲಿರುವ ಉತ್ಸಾಹ ಮಗ್ನರಾಗುವಂತೆ ಪ್ರೇರೇಪಿಸುವುದು.
ವೃಶ್ಚಿಕ
ಆರ್ಥಿಕ ಸ್ಥಿತಿಯು ಸ್ವಲ್ಪಮಟ್ಟಿಗೆ ಏರುತ್ತದೆ. ಶ್ರಮದಿಂದ ದುಡಿಯುವ ತಾಳ್ಮೆ ಮೆಚ್ಚತಕ್ಕದ್ದೇ ಆಗಿರುತ್ತದೆ. ಸಂತಾನ ಭಾಗ್ಯದ ಸುದ್ದಿ ಕೇಳುವಿರಿ. ಶಿಕ್ಷೆಗೆ ಒಳಗಾಗುವ ಲಕ್ಷಣವಿರುವುದರಿಂದ ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸಿ.
ಧನು
ಉದ್ಯೋಗ ಅಥವಾ ವಿದ್ಯಾಭ್ಯಾಸ ಈ ತರಹದ ವಿಷಯದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಕಾಲ ಒದಗಿ ಬರುವುದು. ಸುಂದರ ವಸ್ತು, ಚಿತ್ರ ಅಥವಾ ಸಮಾಜದ ಗಣ್ಯವ್ಯಕ್ತಿಗಳನ್ನು ನೋಡುವ ಭಾಗ್ಯ ಸಿಗುವುದು.
ಮಕರ
ವಿದ್ಯಾಭ್ಯಾಸದ ಕಡೆಗೆ ಕಠಿಣ ಶ್ರಮವಹಿಸಿ ಗಮನಹರಿಸಿ, ಏಕಾಗ್ರತೆ ಕಾಯ್ದುಕೊಳ್ಳಿ. ಧ್ಯಾನ ಹಾಗೂ ಯೋಗದ ಕಡೆ ಗಮನ ಹರಿಸಿ. ಆರೋಗ್ಯಕ್ಕೆ ಮತ್ತು ಲವಲವಿಕೆಯ ಜೀವನಕ್ಕೆ ಬಹಳ ಸಹಾಯವಾಗಲಿದೆ.
ಕುಂಭ
ವೈದ್ಯರಿಗೆ ತುರ್ತು ಕೆಲಸಗಳಿಂದ ಬಿಡುವಿಲ್ಲದಂತಾಗುವುದು. ಆಶ್ರಮ ವಾಸಿಗಳಿಗೆ ಸಹಾಯ ಸಿಗಲಿದೆ. ಮಕ್ಕಳ ಹೊಸ ವ್ಯವಹಾರದಲ್ಲಿ ತಂದೆ–ತಾಯಿಯ ಆಶೀರ್ವಾದ ದೊರೆಯಲಿದೆ.
ಮೀನ
ವಾಸಸ್ಥಾನ ಅಥವಾ ಉದ್ಯೋಗ ಬದಲಾಗುವ ಸಂಭವವಿದೆ. ಆಸಕ್ತಿಕರ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಯೋಜನೆಗಳಿಗೆ ಸಹಕಾರಿಯಾಗಲಿದೆ. ಸ್ಥಿರತೆ ಹಾಗೂ ಅಭಿವೃದ್ಧಿ ಸಾಧಿಸುವ ದಿನವೆನಿಸಲಿದೆ.
ADVERTISEMENT
ADVERTISEMENT