ಮಂಗಳವಾರ, 5 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕ ಅನುಕೂಲ
Published 5 ಆಗಸ್ಟ್ 2025, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಕೆಲವೊಂದು ಸಮಸ್ಯೆಗಳಿಗೆ ಪೊಲೀಸರಿಂದ ಪರಿಹಾರ ತೆಗೆದುಕೊಳ್ಳುವುದು ಉತ್ತಮ.
ವೃಷಭ
ಮನೆಯಲ್ಲಿ ಶಾಂತ ವಾತಾವರಣವಿರುವುದು. ನಿಧಾನಗತಿಯ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಕಾರ್ಮಿಕರಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಿರಿ. ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರ ಜೋರು.
ಮಿಥುನ
ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ಖರ್ಚು–ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದಾರೆ.
ಕರ್ಕಾಟಕ
ದೇವತಾ ಕಾರ್ಯಗಳಿಗೆ ಪ್ರಯಾಣ ಮಾಡಬೇಕಾಗಲಿದೆ. ಕುಟುಂಬ ವರ್ಗದವರಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಸಿವಿಲ್ ಎಂಜಿನಿಯರ್‌ ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ.
ಸಿಂಹ
ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ–ಮಾನಗಳು ಲಭಿಸಲಿವೆ. ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ಸುಲಭವಾಗಿ ಸ್ಥಾನ ಗಳಿಸುವಿರಿ. ಸಮೀಪವರ್ತಿಗಳ ದುರ್ಬುದ್ಧಿಯಿಂದ ವಂಚನಾಕಾರ್ಯ ನಡೆದಾವು.
ಕನ್ಯಾ
ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ನಿಮ್ಮದಾಗಲಿದೆ. ಸತ್ಕಾರ ಸಮಾರಂಭಗಳಲ್ಲಿ ಭಾಗ ವಹಿಸುವಿರಿ. ವಾಹನ ಖರೀದಿಗೆ ಸಕಾಲ. ಬಂಧು ಮಿತ್ರರು ಮನೆಗೆ ಬರಲಿದ್ದಾರೆ.
ತುಲಾ
ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಅನುಕೂಲ ಉಂಟಾಗುವುದು. ತಂದೆ –ತಾಯಿ ಕೋರಿಕೆಯಂತೆ ಮನೆಯಲ್ಲಿ ದೇವತಾ ಕಾರ್ಯ ನಡೆಸುವಿರಿ. ಉದ್ಯೋಗದಲ್ಲಿ ಸಮತೋಲನ ತಪ್ಪಲಿದೆ.
ವೃಶ್ಚಿಕ
ಆಧ್ಯಾತ್ಮಿಕ ವಿಚಾರಗಳ ಪುಸ್ತಕಗಳನ್ನು ಕೊಳ್ಳಲು ಧನ ವಿನಿಯೋಗವಾಗುವುದು. ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ಬರುವುದು. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ.
ಧನು
ಮನೆಯ ಪರಿಸ್ಥಿತಿಗಳ ಸುಧಾರಣೆಯಿಂದ ಗಮನ ಕೊಡಲು ಉತ್ತಮವಾಗುವುದು. ಕೇವಲ ದೇವತಾ ಕೃಪೆಯಿಂದ ಕೆಲಸಗಳನ್ನೂ ಲಾಭಮಯವಾಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಮಕರ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಿರಿ. ಕಂಪ್ಯೂಟರ್ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ನಿವೇಶನ ಮಾರುವ ಪರಿಸ್ಥಿತಿ ಎದುರಾದರೂ ಉತ್ತಮ ಲಾಭ .
ಕುಂಭ
ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಬಗ್ಗೆ ನಿಗಾ ಇರಲಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ಆಘಾತವಾಗಲಿದೆ. ವೆಚ್ಚ ಸರಿ ಸಮವಾಗಿರುವುದು. ಪ್ರಯಾಣ ಮಾಡಬೇಕಾದ ಸಂದರ್ಭಗಳು ಬರಲಿವೆ.
ಮೀನ
ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಹೊಸದನ್ನು ಕಲಿಯುವ ಆಸೆಗಳು ಹೆಚ್ಚಲಿವೆ. ಬೇಡಿಕೆಯ ಅರ್ಜಿಗಳಿಗೆ ಪ್ರೋತ್ಸಾಹ ಸಿಗಲಿದೆ. ಅಧ್ಯಯನಕ್ಕೆ ಸಕಾಲವಾಗಿರುತ್ತದೆ.
ADVERTISEMENT
ADVERTISEMENT