ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬರಹಗಾರರಿಗೆ ಉತ್ತೇಜನದ ಕೊರತೆ ಕಾಣಲಿದೆ
Published 22 ಸೆಪ್ಟೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಪೇಕ್ಷೆ ಪಟ್ಟಿದ್ದ ಹೊಸ ಉದ್ಯೋಗವನ್ನು ಸಂಪಾದಿಸುವಲ್ಲಿ ರಾಜಕೀಯ ವ್ಯಕ್ತಿಗಳ ಮೂಲಕ ಯಶಸ್ಸು ಗಳಿಸುವಿರಿ. ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ. ಕಾರ್ಯಗಳು ಹೆಚ್ಚಲಿವೆ.
ವೃಷಭ
ತಾಂತ್ರಿಕ ವಿದ್ಯಾರ್ಥಿಗಳು ಪರಿಶ್ರಮ ಪಡಬೇಕಾಗುವುದು. ಮನೆಯಲ್ಲಿ ಮದುವೆ ಸಮಾರಂಭಗಳು ನಿಗದಿಯಾಗುವ ಸಾಧ್ಯತೆ ಇದೆ. ಜೀವನದಲ್ಲಿನ ಪ್ರಮುಖ ಬದಲಾವಣೆಯನ್ನು ನಿರೀಕ್ಷಿಸಬಹುದು.
ಮಿಥುನ
ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿ ಹಾಕದೆ ಅವರಿಂದ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳಿ. ಕಲಾವಿದರಿಗೆ ಹಾಗೂ ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣಗಳು ಸಿಗಲಿವೆ.
ಕರ್ಕಾಟಕ
ಚೋರಭೀತಿ ಇರುವುದರಿಂದ ವ್ಯವಹಾರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಬಗ್ಗೆ ಗಮನವಹಿಸಿ. ಏಕಾಗ್ರತೆ ಹಾಗೂ ಧ್ಯಾನದಿಂದ ಮಾನಸಿಕವಾಗಿ ಸದೃಢರಾಗುವಿರಿ.
ಸಿಂಹ
ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಕಹಿಘಟನೆ ನಡೆಯಬಹುದು. ಇತ್ತೀಚಿನ ದಿನದಲ್ಲಿ ಬದಲಾವಣೆಗೊಂಡ ಔಷಧಿ ದೇಹಕ್ಕೆ ಹೊಂದಿಕೊಳ್ಳುವುದೋ, ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಿರಿ.
ಕನ್ಯಾ
ವರಿಷ್ಠ ಅಧಿಕಾರಿಗಳಿಗೆ ವಿಶೇಷ ಅಧಿಕಾರಗಳು ಪ್ರಾಪ್ತವಾಗಲಿವೆ. ಸಂಸ್ಕಾರದ ಕೊರತೆಯಿಂದಾಗಿ ಮಕ್ಕಳು ದಾರಿ ತಪ್ಪಬಹುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಸುತ್ತಾಟವಿರುವುದು.
ತುಲಾ
ತಡವಾದ ಹಾಗೂ ಬಾಕಿಯುಳಿದ ಕಾರ್ಯಕ್ಕೆ ಇಂದು ಹೊಸ ಜೀವ ಬರುವುದು. ಹೊಸ ಆಲೋಚನೆಗಳು ಹೊಳೆಯುತ್ತವೆ. ನಿಮ್ಮೆದುರಿಗಿರುವ ಅವಕಾಶವನ್ನು ಕಳೆದುಕೊಳ್ಳಬಾರದು. ವಿಮಾ ಏಜೆಂಟರಿಗೆ ಒಳ್ಳೆಯ ದಿನ.
ವೃಶ್ಚಿಕ
ವಿದ್ಯಾರ್ಥಿಗಳು ಕಡೆಯ ಕ್ಷಣದಲ್ಲಿ ಮಾಡಿದ ಪ್ರಯತ್ನಕ್ಕೆ ಒಳ್ಳೆಯ ಅಂಕ ಪಡೆಯಬಹುದು. ಸ್ವಂತ ಕೆಲಸಕ್ಕೆ ಸಮಯ ಮೀಸಲಿಡುವುದು ಉತ್ತಮ. ಪರಸ್ಥಳದಿಂದ ಪ್ರಮುಖ ಸುದ್ದಿ ತಲುಪುತ್ತದೆ.
ಧನು
ಕಫ ಪ್ರಕೃತಿಯ ದೇಹ ಹೊಂದಿರುವ ನಿಮಗೆ ಉಸಿರಾಟಕ್ಕೆ ಸಂಬಂಧಿಸಿದಂತೆ ಆರೋಗ್ಯದಲ್ಲಿ ಏರು-ಪೇರು ಅನುಭವಕ್ಕೆ ಬರಲಿದೆ. ಕ್ರೀಡಾಪಟುಗಳಿಗೆ ಇಂದಿನ ಪಂದ್ಯದಲ್ಲಿ ಕೊನೆಕ್ಷಣದ ಜಯ ಪ್ರಾಪ್ತಿಯಾಗುವುದು.
ಮಕರ
ಪ್ರಯೋಜನ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವರು. ಹಣಕಾಸಿನ ವ್ಯಾಮೋಹ ಹೆಚ್ಚಾಗಿ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಭೂ ವ್ಯವಹಾರದಲ್ಲಿ ಆದಾಯ ಇರಲಿದೆ.
ಕುಂಭ
ಶೀಘ್ರಕೋಪಿಗಳಾಗುವ ವ್ಯಕ್ತಿತ್ವಕ್ಕೆ ಬದಲಾವಣೆಯ ಗಾಳಿ ಬೀಸಲಿದೆ. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗರೂಕತೆ ಮುಖ್ಯವಾಗುವುದು. ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳಿರಿ.
ಮೀನ
ಷೇರು ವ್ಯವಹಾರಗಳು ನಿನ್ನೆಯ ನಷ್ಟವನ್ನು ಹೋಗಲಾಡಿಸಿ ಕೂಡಿ ಬರುವುವು. ಬರಹಗಾರರಿಗೆ ಉತ್ತೇಜನದ ಕೊರತೆ ಕಾಣಲಿದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವ ಅಗತ್ಯವಾಗಿರುವುದು.
ADVERTISEMENT
ADVERTISEMENT