ದಿನ ಭವಿಷ್ಯ: ಈ ರಾಶಿಯವರು ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗ್ಗಿ
Published 7 ಆಗಸ್ಟ್ 2025, 21:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪೊಲೀಸ್ ವೃತ್ತಿಯಲ್ಲಿರುವವರು ಕಾರ್ಯಾಚರಣೆಗಾಗಿ ದೂರ ಸಂಚಾರ ಮಾಡಲಿದ್ದೀರಿ . ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗ್ಗಿ. ಗುಮಾಸ್ತ ಕೆಲಸದಲ್ಲಿದ್ದವರಿಗೆ ವಿರಾಮ ಸಿಗುವಂತಾಗಲಿದೆ.
ವೃಷಭ
ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಯುವುದು. ವಿರೋಧಿಗಳ ಅಥವಾ ಸಂಬಂಧಿಕರ ಟೀಕೆಗಳಿಗೆ ಕಿವಿಯೊಡ್ಡಿದರೆ, ಕೇವಲ ಸಮಯ ಹಾಳಾಗುವುದು ಎಂಬುದು ತಿಳಿದಿರಲಿ. ತರಕಾರಿ ಮಾರಾಟಗಾರರಿಗೆ ಸುದಿನ.
ಮಿಥುನ
ಆಪ್ತರಿಂದ ಬರುವ ಸಲಹೆ–ಸೂಚನೆಗಳಿಗೆ ಗಮನ ನೀಡಿ ಪ್ರಯತ್ನದಿಂದ ಕೆಲಸದಲ್ಲಿ ಮುನ್ನುಗ್ಗಿ. ಹೊಸಜೀವನ ಪ್ರಾರಂಭವಾಗುವುದರಿಂದ ದೇವತಾ ಕಾರ್ಯಗಳನ್ನು ಜರುಗಿಸುವ ಬಗ್ಗೆ ಯೋಚಿಸಿ.
ಕರ್ಕಾಟಕ
ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವೈದ್ಯರ ಸಂಪರ್ಕ ಮತ್ತು ಸಹಾಯ ಹಸ್ತ ಸಿಗುವುದು. ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲ ನಿವಾರಿಸಿಕೊಳ್ಳುವಿರಿ. ಪಂಚಾಕ್ಷರಿ ಮಂತ್ರ ಜಪಿಸಿ.
ಸಿಂಹ
ವ್ಯಾಪಾರ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜೊತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು. ರಾಜಕೀಯ ವ್ಯಕ್ತಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ರಾಜಕೀಯ ವಿದ್ಯಮಾನ ಎಚ್ಚರಿಕೆಯಿಂದ ಗಮನಿಸಿರಿ.
ಕನ್ಯಾ
ಸಂಸಾರ ನಿರ್ವಹಣೆ ಸಲಭವೆನಿಸುವುದಿಲ್ಲ. ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ, ಅನಿವಾರ್ಯ. ಹಿತಾಸಕ್ತಿಗಳಿಗೆ ಹೆಚ್ಚು ಗಮನ ಕೊಡಿ. ಮಕ್ಕಳ ಅಗತ್ಯಗಳನ್ನು ಪೂರೈಸಿ.
ತುಲಾ
ಕುಟುಂಬದ ಗೌರವಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳುವುದರ ಬಗ್ಗೆ ನಿಮ್ಮನಡೆ ಇರಲಿ. ಆತ್ಮಾಭಿಮಾನವನ್ನು ಸಂರಕ್ಷಿಸಿಕೊಳ್ಳಿ. ಆಧ್ಯಾತ್ಮಿಕ ಚಿಂತನೆಯು ಜೀವನದ ಧೈರ್ಯವನ್ನು ವೃದ್ಧಿಸುತ್ತದೆ.
ವೃಶ್ಚಿಕ
ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಲಿವೆ. ಸಂಜೆಯ ಸಮಯದ ಪುಟ್ಟದೊಂದು ಪ್ರಯಾಣ ಹುರುಪು ತುಂಬಲಿದೆ.
ಧನು
ಕೋಪದ ಮೇಲೆ ನಿಯಂತ್ರಣವನ್ನು ಸಾಧಿಸದಿದ್ದರೆ ಸಹೋದರರು ಮತ್ತು ಸ್ನೇಹಿತರು ಎದುರಾಳಿಗಳಾಗುವರು. ಸಾಧ್ಯವಾದ ಮಟ್ಟಿಗೆ ಶಾಂತವಾಗಿರಿ. ತೋಟದ ಬೆಳೆಗಳಿಂದ ಉತ್ತಮ ಆದಾಯವಿರುವುದು.
ಮಕರ
ಕೆಲಸಗಳ ಬಗ್ಗೆ ಪುನರವಲೋಕನ ಮಾಡಿ. ಬಂಧು ಮಿತ್ರರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ. ಮನೆ ಕೊಳ್ಳುವ ವಿಷಯ ಇತ್ಯರ್ಥವಾಗುವುದು. ಹಳದಿ ವರ್ಣ ಶುಭದಾಯಕ.
ಕುಂಭ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ಹಳೆಯ ವಾಹನವನ್ನು ಕೊಟ್ಟು ಹೊಸ ವಾಹನ ಖರೀದಿ ಮಾಡುವ ಯೋಚನೆಗೆ ಜೀವ ಬಂದಂತೆ ಆಗುವುದು. ಮಗನ ಕಾರ್ಯಸಿದ್ಧಿಗೆ ಗಣೇಶನಿಗೆ ಪೂಜೆ ಮಾಡಿಸಿ.
ಮೀನ
ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಿಮಗೆ ಬಂದಿದೆ. ಆದರೂ ಮುನ್ನೆಚ್ಚರಿಕೆ ಅಗತ್ಯ. ಆಡಿಟಿಂಗ್ ಕೆಲಸಗಳಿಂದ ವರಮಾನ ಗಳಿಸುವಿರಿ. ಹಣದ ವಿಚಾರದಲ್ಲಿ ಮಿತವ್ಯಯಿಗಳಾಗಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.