ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ವೈವಾಹಿಕ ಮಾತುಕತೆಗಳಲ್ಲಿ ಹಿತಕರ ಬೆಳವಣಿಗೆ ಇರುವುದು
Published 4 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತನ ಮೇಲಿದ್ದ ಸಂಶಯ, ಅಪನಂಬಿಕೆಯ ಮನಸ್ಥಿತಿಗೆ ಪುಷ್ಟಿ ಸಿಗುವ ಸನ್ನಿವೇಶಗಳು ನಡೆಯಲಿವೆ. ರೈಲ್ವೆ ಕಾರ್ಮಿಕರಿಗೆ ವೇತನದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ತರಕಾರಿ ಬೆಳೆಗಾರರಿಗೆ ದುಪ್ಪಟ್ಟು ಲಾಭಕರ.
ವೃಷಭ
ಹೆಚ್ಚಿನ ಅಧ್ಯಯನಕ್ಕೆ ಮನೆಯವರಿಂದ ಉತ್ತೇಜನ ದೊರೆಯುತ್ತದೆ. ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ಭೀತಿಗಳಿಂದ ಹೊರಬರುವ ಪ್ರಯತ್ನ ನಡೆಸಿ. ಸುಬ್ರಹ್ಮಣ್ಯನ ಸೇವೆ ಮಾಡುವುದರಿಂದ ಶುಭ .
ಮಿಥುನ
ವೈವಾಹಿಕ ಮಾತುಕತೆಗಳಲ್ಲಿ ಹಿತಕರ ಬೆಳವಣಿಗೆ ಇರುವುದು. ಪುತ್ರರೊಡನೆ ಕೆಲಸದ ಬಗ್ಗೆ ಸಮಾಲೋಚನೆಯನ್ನು ನಡೆಸಿ. ಜವಳಿ ವ್ಯಾಪಾರಿಗಳಿಗೆ ಆದಾಯದಲ್ಲಿ ಕೊರತೆ ಕಾಣಬಹುದು.
ಕರ್ಕಾಟಕ
ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಜ್ಞಾನಾರ್ಜನೆಯಾಗುತ್ತದೆ. ಜಾಣ್ಮೆಯಿಂದ ವ್ಯವಹರಿಸುವ ಫಲವಾಗಿ ಸಮಾಜದಲ್ಲಿ ಗೌರವ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯವಿದೆ.
ಸಿಂಹ
ಯಶಸ್ಸಿನ ಮೇಲೆ ಗಮನವಹಿಸುವುದಕ್ಕಿಂತ ಪರಿಶ್ರಮದ ಮೇಲೂ ಗಮನಹರಿಸಿ. ಪತಿ-ಪತ್ನಿಯರಲ್ಲಿ ಆದಷ್ಟು ತಾಳ್ಮೆ, ಸಮಾಧಾನ ಇರುವುದು ಒಳ್ಳೆಯದು. ಅಬಕಾರಿ ಗುತ್ತಿಗೆದಾರರಿಗೆ ಉತ್ತಮ ಆದಾಯವಿರುವುದು.
ಕನ್ಯಾ
ಅತಿ ಸೋಮಾರಿತನವು ಆವರಿಸಿಕೊಳ್ಳಲಿದೆ. ಅಭಿವೃದ್ಧಿಗೆ ಅಡೆತಡೆಗಳು ಉಂಟಾಗಬಹುದು. ಹೊಸ ಮಾರ್ಗವನ್ನು ಕಾರ್ಯರೂಪಕ್ಕೆ ತರುವುದರಿಂದ ಕಾರ್ಯದಲ್ಲಿ ಜಯ ದೊರೆಯುವುದು.
ತುಲಾ
ಮನೆಯಲ್ಲಿ ದೊಡ್ಡವರಾದ್ದರಿಂದ ಹೆಚ್ಚಿನ ಕಾರ್ಯಭಾರ ಮತ್ತು ಸೌಲಭ್ಯಗಳನ್ನು ಪಡೆಯುವಿರಿ. ತೆರೆಮರೆಯ ಸಂಧಾನದ ಮಾತುಕತೆಗಳು ಯಶಸ್ವಿಯಾಗಲಿವೆ. ಆಲೋಚಿಸಿದ ದಾರಿಯಲ್ಲಿಯೇ ಸಾಗುವುದು ಉತ್ತಮ.
ವೃಶ್ಚಿಕ
ಮನೆಯ ಸಮೀಪದಲ್ಲಿರುವ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಾದಿಗಳ ವ್ಯವಸ್ಥೆಯ ಜವಾಬ್ದಾರಿ ನಿಮ್ಮದಾಗಬಹುದು. ತೆರಿಗೆ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
ಧನು
ಷೇರು ಖರೀದಿ ಅಥವಾ ನಿವೇಶನಗಳಿಗೆ ಮುಂಗಡ ಪಾವತಿ ಮಾಡುವ ಮುನ್ನ ಹತ್ತು ಬಾರಿ ಆಲೋಚಿಸಿ, ನಂತರದಲ್ಲಿ ತೀರ್ಮಾನಕ್ಕೆ ಬನ್ನಿ. ನೀರಿಗೆ ಸಂಬಂಧಪಟ್ಟ ಅಪಾಯಗಳು ಸಂಭವಿಸುವ ಸಾಧ್ಯತೆ ಇರುವುದು.
ಮಕರ
ಇತರರನ್ನು ನೋಯಿಸಲೆಂದು ಮಾತನಾಡಿದ್ದರೂ ಇತರರ ಬೇಸರಕ್ಕೆ ಕಾರಣವಾಗಬಹುದು. ಮನದ ಆಸೆ ಪೂರೈಸಿಕೊಳ್ಳಲು ಹಣ ಖರ್ಚು ಮಾಡುವಿರಿ. ತಲೆ ನೋವು ಕಾಣಿಸಿಕೊಳ್ಳಬಹುದು.
ಕುಂಭ
ಇತರರ ಬಗ್ಗೆ ಅನುಕಂಪ ತೋರುವ ನೀವು, ನಿಮ್ಮ ಬಗ್ಗೆಯೂ ಗಮನವಿರಿಸಿಕೊಳ್ಳಬೇಕೆಂದು ಮರೆಯದಿರಿ. ಅನುಭವವೇ ಇಲ್ಲದೆ ಮಾಡಿದ ಅಡುಗೆ ತೃಪ್ತಕರವಾಗಿರುತ್ತದೆ. ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮೀನ
ನಿರಂತರ ಸೇವೆಗಾಗಿ ಮಕ್ಕಳ ಪ್ರತಿಜ್ಞೆಗಳು ಬಹಳ ಹೆಮ್ಮೆ ಪಡುವಂತೆ ಮಾಡುತ್ತವೆ. ಕಂಪನಿಯ ಹೊಸ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಹೆಗ್ಗಳಿಕೆ ನಿಮ್ಮದಾಗಲಿದೆ.
ADVERTISEMENT
ADVERTISEMENT