ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕುಟುಂಬದ ಆಂತರಿಕ ಸಮಸ್ಯೆಯೊಂದು ಸಾಮರಸ್ಯದಿಂದ ಬಗೆಹರಿಯಲಿದೆ
Published 26 ಜನವರಿ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಚೇರಿಯ ಕೆಲಸಗಳನ್ನು ಶೀಘ್ರವೇ ಮುಗಿಸಿ, ಮನೆಯಲ್ಲಿ ತಂಗಿಯ ಅಥವಾ ತಮ್ಮನ ಮದುವೆಯ ಕೆಲಸದ ಒತ್ತಡ ಹಾಗೂ ಜವಾಬ್ದಾರಿ ಹೆಚ್ಚಲಿದೆ. ಕುಟುಂಬದ ಆಂತರಿಕ ಸಮಸ್ಯೆಯೊಂದು ಸಾಮರಸ್ಯದಿಂದ ಬಗೆಹರಿಯಲಿದೆ.
ವೃಷಭ
ಈ ದಿನದ ಕೆಲಸ ಪ್ರಾರಂಭಕ್ಕೆ ಆತ್ಮಸ್ಥೆರ್ಯ ಬಹಳ ಮುಖ್ಯ. ಯಾವುದೇ ಒತ್ತಡಕ್ಕೆ ಮಣಿಯದೆ ಮುನ್ನುಗ್ಗಿ, ಜಯ ನಿಮ್ಮದಾಗಲಿದೆ. ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.
ಮಿಥುನ
ಹವ್ಯಾಸಿ ಕಲಾವಿದರಾದ ನೀವು ಕತೆ ಕವನಗಳ ಬರವಣಿಗೆಯಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಯಾವಕಾಶ ತೆಗೆದುಕೊಂಡು ಯೋಚಿಸಿ ನಿರ್ಧಾರ ಕೈಗೊಳ್ಳಿ.
ಕರ್ಕಾಟಕ
ಇಂದು ನಿಮಗೆ ಕಷ್ಟದ ದಿನ ಎನಿಸಬಹುದು. ಅದರೆ ಇದೇ ನಿಮಗೆ ನಾಳಿನ ಸುಖಕ್ಕೆ ನಾಂದಿಯಾಗಲಿದೆ. ತಾಳ್ಮೆ ಜಯದ ಮಂತ್ರವಾಗಿರಲಿದೆ. ಹರಿತವಾದ ಆಯುಧಗಳ ಬಳಕೆಯ ವಿಷಯದಲ್ಲಿ ಜಾಗ್ರತೆ ವಹಿಸಿ.
ಸಿಂಹ
ಈ ದಿನ ನಿಮ್ಮ ಪ್ರತಿಭೆಯ ತೀಕ್ಷ್ಣತೆಯು ಸಂಬಂಧಪಟ್ಟವರ ಗಮನ ಸೆಳೆಯಲಿದೆ. ನಿಮ್ಮ ಎಲ್ಲ ಪ್ರಾಮಾಣಿಕ ಪ್ರಯತ್ನಗಳು ಯಶಸ್ಸು ಕಾಣುವ ಹಾದಿಯಲ್ಲಿರುವುದು. ನೆರೆಹೊರೆಯವರ ವೈಷಮ್ಯಗಳು ಅನುಭವಕ್ಕೆ ಬರಲಿವೆ.
ಕನ್ಯಾ
ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ. ಇಂದಿನ ನಿಮ್ಮ ಶ್ರಮ ಮುಂದಿನ ದಿನಕ್ಕೆ ಒಂದು ಅಡಿಪಾಯವಾಗಲಿದೆ. ವಿವಾದದ ಗೊಡವೆಗಳಿಂದ ದೂರ ಉಳಿಯುವುದರಿಂದ ಗೌರವ ಕಾಪಾಡಿಕೊಳ್ಳಹುದು.
ತುಲಾ
ಅಧಿಕಾರಸ್ಥರು ಹಾಗೂ ನಿಮ್ಮ ಹಿರಿಯ ನೌಕರರ ಜತೆ ನಿಮ್ಮ ಸ್ನೇಹ ಸಂಬಂಧ ಹೆಚ್ಚಾಗಿ ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳುವ ಬಗ್ಗೆ ಗಮನವಿರಲಿ.
ವೃಶ್ಚಿಕ
ಔದ್ಯೋಗಿಕ ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕ ಫಲಗಳು ಪಡೆದುಕೊಳ್ಳಲು ಕಷ್ಟವಾಗಬಹುದು. ನಿಮ್ಮ ಪ್ರತಿಭೆ ಗುರುತಿಸಿಲ್ಲ ಎಂಬ ನಿಮ್ಮ ನೋವು ಇಂದೇ ಕೊನೆಯಾಗಲಿದೆ. ಉಡುಗೊರೆ ಲಭ್ಯವಾಗುವ ಸಾಧ್ಯತೆಯಿದೆ.
ಧನು
ಎದುರಾಗಿರುವ ಸದ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅದು ನಿಮ್ಮನ್ನು ಸಂತಸಗೊಳಿಸಲಿದೆ. ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ, ನಿಮ್ಮ ಮನೋಭಿಲಾಷೆ ಈಡೇರಲಿದೆ.
ಮಕರ
ಹಿರಿಯ ಮಗನ ಸಹಾಯದಿಂದ ಗಣ್ಯರ ಪರಿಚಯ ಹಾಗೂ ಸಹಾಯ ದೊರೆತು ನಿಮ್ಮ ಹೊಸ ಯೋಜನೆಗಳಿಗೆ ಅನುಕೂಲವಾಗಲಿದೆ. ನಿಮ್ಮ ಅದೃಷ್ಟವನ್ನು ಇಂದು ಪರೀಕ್ಷಿಸಿಕೊಳ್ಳಬಹುದು. ಆರೋಗ್ಯ ವೃದ್ಧಿಯಾಗಲಿದೆ.
ಕುಂಭ
ಹೊಸ ಪೀಠೋಪಕರಣಗಳ ಖರೀದಿಗೆ ಇಂದು ಧನವ್ಯಯವಾಗಲಿದೆ. ರಾಜಕೀಯ ವಲಯದ ಕಾರ್ಯಕರ್ತರಿಗೆ ಮುನ್ನಡೆಯುವ ಅವಕಾಶಗಳು ತಪ್ಪುವ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿ ಮುತುವರ್ಜಿ ವಹಿಸಿ.
ಮೀನ
ಸಂತೋಷ ಕೂಟಗಳಲ್ಲಿ ನಿಮ್ಮ ಗೌರವ ಹೆಚ್ಚಿಸಿಕೊಳ್ಳುವ ಬಗ್ಗೆ ಗಮನವಿರಲಿ. ನಿಮ್ಮ ಆಪ್ತರು ನಿಮ್ಮ ಸಕಾಲಿಕ ನೆರವಿಗಾಗಿ ನಿಮಗೆ ಧನ್ಯವಾದ ಹೇಳಲಿದ್ದಾರೆ.