ಶನಿವಾರ, 9 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಕೆಲಸ ಕಾರ್ಯಗಳನ್ನು ಮುಂದೂಡುವ ವಿಚಾರ ಸರಿಯಲ್ಲ
Published 9 ಆಗಸ್ಟ್ 2025, 21:18 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಷ್ಟವಿಲ್ಲದ ಕೆಲಸವನ್ನು ಅನಿವಾರ್ಯಕ್ಕಾದರೂ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಬೇರೇ ಉದ್ಯಮಕ್ಕೆ ಕೈ ಸೇರಿಸುವಂತೆ ಸ್ನೇಹಿತನಿಂದ ಒತ್ತಡ ಬರಬಹುದು. ಆರ್ಥಿಕ ವಿಷಯ ಸರಿಯಾಗಿ ವಿಮರ್ಶಿಸಿ ಉತ್ತರಿಸಿ.
ವೃಷಭ
ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಲ್ಲಿ ಪತ್ನಿಯ ಸಲಹೆ ಸ್ವೀಕರಿಸುವುದು ಮತ್ತು ತಂದೆಯ ಸಹಾಯವನ್ನು ಕೋರುವುದು ಅಸಹಜವಲ್ಲ. ದೇವರ ಕೃಪೆಯಿಂದ ಜಯ ಸಾಧಿಸುವಿರಿ.
ಮಿಥುನ
ವಿಚಾರಗಳನ್ನು ಭಿನ್ನ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ, ಕೆಡಕು ಬಯಸಿದವರು ನಮಗೆ ಸಹಾಯ ಮಾಡಿದಂತೆಯೇ ಕಾಣುವುದು. ಅದರಿಂದಾಗಿ ಮನಸ್ಸಿನ ನೆಮ್ಮದಿ ಇರುತ್ತದೆ. ಶಾಂತಿಯಿಂದ ಕೆಲಸ ಸಾಧಿಸಿ.
ಕರ್ಕಾಟಕ
ಹಿಂದಿನ ನಿಮ್ಮ ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ, ಹೊಸ ಅವಕಾಶಗಳು ನಿಮ್ಮನ್ನು ಆರಿಸಿ ಬರಲಿದೆ. ಮಹಾಗಣಪತಿಯ ಪ್ರಾರ್ಥನೆ, ಕೆಲಸದಲ್ಲಿ ನೂತನ ಪದ್ಧತಿ ಅಳವಡಿಸಿಕೊಂಡರೆ ಜಯ ಕಾಣುವಿರಿ.
ಸಿಂಹ
ನಿಮ್ಮ ದೈನಂದಿನ ರೀತಿ ರಿವಾಜುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ವೇಗವಾಗಿ ಕೆಲಸ ಮಾಡಬೇಕಾಗುತ್ತದೆ. ಬದಲಾವಣೆಯ ಅಥವಾ ಮೇಲ್ದರ್ಜಿಯ ಹೆಸರಿನಲ್ಲಿ ನಿಮ್ಮತನವನ್ನು ಬಿಡುವುದು ಸರಿಯಲ್ಲ.
ಕನ್ಯಾ
ಆಪ್ತರೊಬ್ಬರ ನೆರವು ದೊರೆತು ಮಗನ ವಿದ್ಯಾಭ್ಯಾಕ್ಕೆ ಸಹಾಯ ವಾಗಲಿದೆ. ಕುಟುಂಬದವರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಸಹ ಪತ್ತೆಯಾಗುವುವು, ಸಂತೋಷ ವೃದ್ಧಿಯಾಗಲಿದೆ.
ತುಲಾ
ಕೆಲಸ ಕಾರ್ಯಗಳನ್ನು ಮುಂದೂಡುವ ವಿಚಾರ ಸರಿಯಲ್ಲ, ಶೀಘ್ರದಲ್ಲಿ ಪೂರ್ತಿಗೊಳಿಸಿಕೊಳ್ಳಲು ನಿರ್ಧಾರ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ತೋರಿ. ಉದ್ವೇಗದ ವಾತಾವರಣ ಎದುರಾಗಬಹುದು.
ವೃಶ್ಚಿಕ
ಸಂತೋಷದ ನಡುವೆಯೂ ಒತ್ತಡದಿಂದಿರುವುದು ನಿಮ್ಮ ಜಾಯಮಾನ. ಸಕ್ರಿಯ ಹಾಗೂ ಕಾರ್ಯ ಮಗ್ನತೆಯ ದಿನವು ಇದಾಗಿದೆ. ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯು ಅತ್ಯಧಿಕವಾಗಿರಲಿದೆ
ಧನು
ಖರ್ಚು-ವೆಚ್ಚಗಳಲ್ಲಿ ಹಿಡಿತವಿರಲಿ. ಇತರರು ನಿಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗರೂಕತೆ ವಹಿಸಬೇಕಾಗುವುದು. ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ ಸತ್ಫಲ ಉಂಟಾಗುವುದು.
ಮಕರ
ಬೆಲೆ ಬಾಳುವ ವಸ್ತುಗಳ ಖರೀದಿಯನ್ನು ಮಾಡುವಿರಿ. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಬರುವುವು. ಖಾಸಗೀ ಸಂಸ್ಥೆಯಿಂದ ಹಣ ಪಡೆದು ಸ್ವಂತ ಉದ್ಯಮ ಆರಂಭಿಸುವ ಸಂಭವವಿದೆ.
ಕುಂಭ
ಮನೆಯಲ್ಲಿ ಸಂತಸದ ವಾತಾವರಣದಿಂದ ಹಿರಿಯರಿಗೆ ನೆಮ್ಮದಿ.ಹೊಸ ಸ್ಥಳದ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಿರಿ. ವೈದ್ಯ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕ ಗೌರವ ಸಿಗಲಿದೆ.
ಮೀನ
ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆಕಾಣುವ ಸಾಧ್ಯತೆ ಇದೆ. ಅಕ್ಕ ಪಕ್ಕದವರಿಗೆ ಸಹಾಯ ನೀಡಬೇಕಾಗುವುದು. ಶ್ರೀ ಆಂಜನೇಯನ ದರ್ಶನದಿಂದ ಎಲ್ಲಾ ಕಾರ್ಯಗಳು ನೆರವೇರುವುದು.
ADVERTISEMENT
ADVERTISEMENT