ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
07/04/2024 - 13/04/2024
ವಾರ ಭವಿಷ್ಯ: 14-4-2024ರಿಂದ 20-4-2024ರವರೆಗೆ– ಈ ರಾಶಿಯವರ ಸಂಗಾತಿಗೆ ಉದ್ಯೋಗ
Published 13 ಏಪ್ರಿಲ್ 2024, 18:31 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಎಲ್ಲರೂ ನಿಮಗೆ ಗೌರವ ಕೊಡಬೇಕೆಂಬ ಬಲವಾದ ಆಸೆ ನಿಮಗಿರುತ್ತದೆ. ಹಣಕಾಸಿನ ಸ್ಥಿತಿಯು ಮಂದಗತಿ ಯಲ್ಲಿರುತ್ತದೆ. ಸೋದರಿಯರಿಂದ ನಿಮ್ಮ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ಆಸ್ತಿಮಾಡುವ ವಿಚಾರ ದಲ್ಲಿ ಅನುಕೂಲಕರವಾದ ವಾತಾವರಣ ಈಗ ದೊರೆ ಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಬಹಳ ಯಶಸ್ಸು ಇರುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ಕೆಲವು ತೊಂದರೆಗಳು ಕಾಣಿಸಬಹುದು. ಸಂಗಾತಿಯು ವಸ್ತ್ರ ಗಳನ್ನು ಕೊಳ್ಳಲು ಹೆಚ್ಚು ಹಣ ಪಡೆಯುವರು. ಕೃಷಿ ಯಿಂದ ಅನಿರೀಕ್ಷಿತ ಲಾಭ ಒದಗಬಹುದು. ತಂದೆಯ ಆಸ್ತಿ ಅಥವಾ ವ್ಯವಹಾರಗಳು ನಿಮಗೆ ಒದಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಹಿತಶತ್ರುಗಳು ಹೆಚ್ಚಾಗುವ ಲಕ್ಷಣಗಳಿವೆ. ಕೃಷಿ ಮಾಡುವವರಿಗೆಸಹಾಯಧನಗಳು ಸಿಗುತ್ತವೆ. ವಿದೇಶಿ ವ್ಯಾಪಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗುತ್ತದೆ.ರೈತರಿಗೆ ಕೃಷಿಯಿಂದ ಆದಾಯ ವಿರುತ್ತದೆ.
ವೃಷಭ
ಎಲ್ಲರ ಸಮೂಹದಲ್ಲಿ ನಿಮ್ಮ ವ್ಯಕ್ತಿತ್ವದ ಚಾಪನ್ನು ಮೂಡಿಸಲು ಪ್ರಯತ್ನಪಡುವಿರಿ. ಧನದಾಯವು ತೃಪ್ತಿಕರವಾಗಿರುತ್ತದೆ. ನಿಮ್ಮ ಚಟುವಟಿಕೆಗಳಿಗೆ ನಿಮ್ಮ ತಾಯಿ ಸಹಕಾರ ನೀಡುವವರು. ಹಿರಿಯರ ಆರೋಗ್ಯ ಕ್ಕಾಗಿ ಹಣ ಖರ್ಚಾಗುವುದು. ವಿದ್ಯಾರ್ಥಿಗಳಿಗೆ ಈಗ ಮಧ್ಯಮ ಫಲಿತಾಂಶವಿರುವುದು. ಅನಾರೋಗ್ಯ ಪೀಡಿ ತರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣ ಬಹುದು. ಸಂಗಾತಿಗೆ ಕೃಷಿ ಭೂಮಿ ಕೊಳ್ಳುವ ಯೋಗ ವಿದೆ. ಸರ್ಕಾರಿ ಕಚೇರಿಯ ಕೆಲಕಾರ್ಯಗಳು ಸರಾಗ ವಾಗಿ ಆಗುತ್ತದೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗ ಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ವಿದೇಶಗಳಲ್ಲಿ ತಮ್ಮ ಸಂಸ್ಥೆಯನ್ನು ತೆರೆಯಬೇಕೆಂದಿರುವವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ದೇಹಧಾರ್ಢ್ಯತೆಯನ್ನು ಕಲಿಸುವ ಗುರುಗಳಿಗೆ ಮತ್ತು ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.
ಮಿಥುನ
ಬುದ್ಧಿವಂತಿಕೆ ಈ ವಾರ ನಿಮ್ಮ ಪ್ರಮುಖ ಆಸ್ತ್ರವಾಗಿರುತ್ತದೆ. ಬಹಳ ಸಂತೋಷ ಮುಖಿಯಾಗಿ ಎಲ್ಲರಲ್ಲೂ ಹೊಂದಿಕೊಳ್ಳುವಿರಿ. ಸಂಗೀತಗಾರರಿಗೆ ಹೆಚ್ಚು ಅನುಕೂಲತೆಗಳು ದೊರೆಯುತ್ತವೆ. ಶೀಘ್ರಗತಿ ಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಆಸ್ತಿಕೊಳ್ಳುವ ವಿಚಾರಗಳಲ್ಲಿ ಸ್ವಲ್ಪಆಲೋಚನೆಯನ್ನು ಮಾಡಿ ಮುಂದುವರೆಯಿರಿ.ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ಮೂಳೆ ಸಂಬಂಧದ ನೋವುಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ಕಡೆಯಿಂದ ನಿಮಗೆ ಧನಸಹಾಯವಾಗುತ್ತದೆ, ಅವರ ಜೊತೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭಗಳು ಬರುತ್ತವೆ. ವಾಹನ ಚಲಾವಣೆ ಮಾಡುವಾಗ ಬಹಳ ಎಚ್ಚರವಿರಲಿ. ಸೇನೆಯಲ್ಲಿ ಕೆಲಸಮಾಡುವವರಿಗೆ ಅನಿರೀಕ್ಷಿತ ಆದಾಯ ಹೆಚ್ಚುವ ಸಾಧ್ಯತೆ ಇದೆ. ಕ್ರೀಡಾ ಪಟುಗಳಿಗೆ ಉತ್ತಮ ಪ್ರದರ್ಶನವನ್ನು ತೋರುವ ಯೋಗವಿದೆ.
ಕರ್ಕಾಟಕ
ಮನಸ್ಸಿನಲ್ಲಿ ಚಿಂತೆ ಕಾಡುತ್ತಿರುತ್ತದೆ. ನೀವು ಅಂದುಕೊಂಡಂತೆ ಕೆಲವು ಕೆಲಸಗಳು ಆಗುವುದಿಲ್ಲ. ನಿಮ್ಮ ನಡವಳಿಕೆಗಳಲ್ಲಿ ಸ್ವಲ್ಪ ಆಲಸಿತನವಿರುತ್ತದೆ. ಈಗ ಸ್ಥಿರಾಸ್ತಿಯನ್ನು ಖರೀದಿಮಾಡುವ ಬಗ್ಗೆ ಮುಂದು ವರೆಯುವುದು ಅಷ್ಟು ಒಳಿತಲ್ಲ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಕೆಲವರಿಗೆ ಕಣ್ಣಿನಲ್ಲಿ ನೋವು ಅಥವಾ ನೀರು ಕಾಣಿಸಿಕೊಳ್ಳಬಹುದು. ಅನಿ ರೀಕ್ಷಿತವಾಗಿ ಸಂಗಾತಿಗೆ ಕೃಷಿ ಭೂಮಿ ದೊರೆಯುವ ಯೋಗವಿದೆ. ರಾಜಕೀಯ ನಾಯಕರುಗಳಿಗೆ ಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ. ವಿದೇಶಿ ವ್ಯವಹಾರ ಗಳು ಹೆಚ್ಚು ಹೆಚ್ಚು ನಡೆದರೂ ಸಹ ಕೆಲವೊಮ್ಮೆ ಕಾನೂನಿನ ತೊಡಕುಗಳುಬರಬಹುದು. ವೃತ್ತಿಯಲ್ಲಿ ವೇತನಏರಿಕೆ ಆಗುವ ಸಂದರ್ಭವಿದೆ ಅಥವಾ ಹೊಸ ಉದ್ಯೋಗ ದೊರೆಯಬಹುದು. ಮಣ್ಣಿನ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚು ಲಾಭವಿರುತ್ತದೆ.
ಸಿಂಹ
ಸಮಾಜದ ಹಿರಿಯರೊಡನೆ ಬೆರೆಯಲು ಪ್ರಯತ್ನ ಪಡುವಿರಿ. ಧನಾದಾಯವು ಕಡಿಮೆ ಇದ್ದು ಖರ್ಚುಕಡಿಮೆ ಮಾಡಬೇಕಾಗುತ್ತದೆ. ಧಾರ್ಮಿಕ ಕೆಲಸ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ನಿಮ್ಮ ಬಂಧು ಗಳ ನಡುವೆ ವಿಶ್ವಾಸ ಕಡಿಮೆಯಾಗಿರುತ್ತದೆ. ಆಸ್ತಿ ವಿಚಾರದಲ್ಲಿ ಅನುಕೂಲವಾಗುವಂತಿದ್ದರೂ ಹಣ ಹೊಂದಿಸಲು ಕಷ್ಟವಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಭಿವೃದ್ಧಿ ಇರುತ್ತದೆ. ಸಂಗಾತಿಯ ಕಡೆಯವರಿಂದ ನಿಮಗೆ ಸಾಕಷ್ಟು ಸಹಾಯಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಅಭಿ ವೃದ್ಧಿಯನ್ನು ಕಾಣಬಹುದು. ವಿದೇಶಿವ್ಯಾಪಾರಮಾಡು ವವರಿಗೆ ಇದ್ದ ಕಾನೂನಿನ ತೊಡಕುಗಳು ದೂರವಾಗು ತ್ತವೆ. ತಂದೆಯಿಂದ ಅಥವಾ ಹಿರಿಯರಿಂದ ಹಣಕಾಸು ನಿರ್ವಹಣೆಯ ಬಗ್ಗೆ ಸಲಹೆ ಬರಬಹುದು. ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.
ಕನ್ಯಾ
ವಿಪರೀತ ಆತ್ಮಸ್ಥೈರ್ಯ ನಿಮ್ಮಲ್ಲಿ ಇರುತ್ತದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ಜನ ಸಮೂಹದಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆ ಇರಲಿ, ಇಲ್ಲವಾದಲ್ಲಿ ಸಾಕಷ್ಟು ಮುಜುಗರಕ್ಕೆ ಒಳಗಾ ಗುವ ಸಾಧ್ಯತೆಗಳಿವೆ. ನಿಮ್ಮ ಚಟುವಟಿಕೆಗಳು ಮಂದ ಗತಿಯಲ್ಲಿರುತ್ತವೆ. ಸಂಸಾರದಲ್ಲಿ ಇರುವ ಸುಖ ಅನು ಭವಿಸುವುದನ್ನು ಬಿಟ್ಟುಸಣ್ಣಪುಟ್ಟ ವಿಚಾರಗಳಿಗೆ ಕೆರ ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವು ದಿಲ್ಲ. ಕ್ರೀಡಾ ಕಲಿಕೆಯನ್ನು ಮಾಡುತ್ತಿರುವವರಿಗೆ ಸಾಕಷ್ಟು ಯಶಸ್ಸು ಇರುತ್ತದೆ. ಮೂಳೆ ಮುರಿತ ಆಗಿರು ವವರು ಹೆಚ್ಚು ಎಚ್ಚರವಾಗಿರುವುದು ಒಳ್ಳೆಯದು. ಸಂಗಾತಿಯಿಂದ ಸ್ವಲ್ಪ ಧನ ಸಹಾಯವನ್ನು ನಿರೀಕ್ಷಿಸ ಬಹುದು. ಕೈಸಾಲಕೊಟ್ಟಲ್ಲಿ ವಾಪಸ್ ಬರುವುದುಕಷ್ಟ. ನೀವು ಸಾಲಪಡೆದವರಿಂದ ತೀರಿಸುವ ಬಗ್ಗೆ ತಗಾದೆ ಗಳು ಶುರುವಾಗಬಹುದು. ಹಿರಿಯರು ಕೆಲವು ವಿಷ ಯಗಳಲ್ಲಿ ಸಹಕಾರ ನೀಡಲು ನಿರಾಕರಿಸಬಹುದು.
ತುಲಾ
ವಿಪರೀತವಾದ ಆತ್ಮ ಅಭಿಮಾನ ಅಥವಾ ಆತ್ಮಗೌರವವಿರುತ್ತದೆ. ಧನದಾಯವು ಮಂದಗತಿಯ ಲ್ಲಿರುತ್ತದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಸಂಗಾತಿ ಮತ್ತು ಅವರ ಕಡೆಯವರ ನೆರಳು ಕಾಣುತ್ತಿರುತ್ತದೆ. ಕೊಳ್ಳಬೇಕೆಂದಿದ್ದ ಕೃಷಿ ಭೂಮಿಯ ದಾಖಲೆಯಲ್ಲಿ ವ್ಯತ್ಯಾಸಗಳು ಕಂಡು ಬರಬಹುದು. ಮಕ್ಕಳಿಂದ ನಿರೀ ಕ್ಷಿತ ಗೌರವ ದೊರಕುವುದಿಲ್ಲ. ವಾತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕೆಲವರನ್ನು ಕಾಡಬಹುದು. ಸಂಗಾತಿ ಮತ್ತು ಅವರ ಕಡೆಯವರು ನಿಮ್ಮ ಕಷ್ಟಗಳಿಗೆ ಧನ ಸಹಾಯ ಮಾಡುವರು. ಸಂಗಾತಿಯಿಂದ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ಹಿರಿಯರ ವ್ಯಾಪಾರಗಳಲ್ಲಿ ನಿಮಗೆ ಪಾಲು ದೊರೆಯುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ವೈಯಕ್ತಿಕ ಪರಿಹಾರಗಳಿಗಾಗಿ ಕೆಲವು ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ.
ವೃಶ್ಚಿಕ
ಆರಂಭದಲ್ಲಿ ಆಲಸಿ ನಡವಳಿಕೆಗಳು ನಿಮ್ಮಲ್ಲಿ ಇರುತ್ತವೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ರುತ್ತದೆ. ಬಹಳ ಶ್ರಮ ವಹಿಸಿ ಕೆಲಸ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಕೆಲಸಕಾರ್ಯಗಳಿಗೆ ನಿಮ್ಮ ಜೊತೆ ಇರುವವರು ಅಡ್ಡಿ ಮಾಡಬಹುದು. ವಿದೇಶದ ಲ್ಲಿರುವ ವರು ಅವರ ಕನಸಿನ ಆಸ್ತಿಯನ್ನು ಈಗ ಮಾಡಿಕೊಳ್ಳ ಬಹುದು. ಸರ್ಕಾರಿಸಾಲಗಳನ್ನು ಪಡೆದುಉಳಿದಸಾಲ ಗಳನ್ನು ತೀರಿಸಬಹುದು. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ಸಂಗಾತಿಯ ಸಂಪಾದನೆ ಯಲ್ಲಿ ಹೆಚ್ಚಳವನ್ನು ಕಾಣಬಹುದು. ಸಂಗಾತಿಯಿಂದ ನಿಮಗೆ ಬಳುವಳಿಯೊಂದು ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಿರಿಕಿರಿ ಇದ್ದರೂ ಸಹ ಕಿರಿಯ ಅಧಿಕಾರಿಗಳ ಕೃಪಾಶೀರ್ವಾದ ನಿಮಗೆದೊರೆಯುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ನಿರೀ ಕ್ಷಿತ ಸಹಾಯ ದೊರೆಯುತ್ತದೆ.
ಧನು
ಸ್ನೇಹಿತರ ಮಧ್ಯೆ ಉತ್ತಮ ಗೌರವ ದೊರೆತರೂ ಅಹಂಕಾರ ಪಡುವುದಿಲ್ಲ. ಹಣದ ಒಳಹರಿವು ಕಡಿಮೆ ಇದ್ದರೂ ಸಹ ಇದ್ದಿದರಲ್ಲಿ ತೂಗಿಸಿಕೊಂಡು ಹೋಗು ವಿರಿ. ಬಂಧುಗಳ ನಡುವಿನ ಜಗಳಗಳನ್ನು ಬಿಡಿಸಲು ಪ್ರಯತ್ನ ಪಡುವಿರಿ. ನವೀನ ರೀತಿಯ ಗ್ರಹಲಂಕಾರ ವಸ್ತುಗಳನ್ನು ಖರೀದಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಬಹಳ ಯಶಸ್ಸು ಇರುತ್ತದೆ. ಭಾಷಾ ಕಲಿಕೆ ಮಾಡುವ ವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳಿಂದ ನಿಮಗೆ ಸಾಕಷ್ಟು ಗೌರವ ದೊರೆಯುತ್ತದೆ. ಮಹಿಳೆಯರು ಎತ್ತ ರದ ಸ್ಥಳಗಳನ್ನು ಏರುವಾಗ ಎಚ್ಚರದಿಂದಿರಿ. ನಿಮ್ಮ ಅಭಿವೃದ್ಧಿಗೆ ಸಂಗಾತಿಯು ಪೂರಕವಾಗಿರುತ್ತಾರೆ. ಸರ್ಕಾರದಿಂದ ಅನಿರೀಕ್ಷಿತ ಧನಾಗಮನ ಇರುತ್ತದೆ. ತಂದೆಯ ವ್ಯವಹಾರಗಳಲ್ಲಿ ಅವಕಾಶ ದೊರೆತು ವ್ಯವ ಹಾರದ ಒಳಸುಳಿಗಳನ್ನು ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ. ವೃತ್ತಿಯಲ್ಲಿಸ್ಥಿರತೆ ಇರುತ್ತದೆ. ಫ್ಯಾಶನ್ ಡಿಸೈನ್ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
ಮಕರ
ನ್ಯಾಯದಂತೆ ನಡೆದು ನ್ಯಾಯಕ್ಕೆ ಹೆಚ್ಚು ಬೆಲೆ ಕೊಡುವಿರಿ. ಜೀವನಕ್ಕೆ ಹೆಚ್ಚು ಶಿಸ್ತು ರೂಪಿಸಿಕೊಳ್ಳು ವಿರಿ. ಮಾತನಾಡುವಾಗ ಕಠಿಣತೆ ಇದ್ದರೂ ಅದರಲ್ಲಿ ಮೋಸವಿರುವುದಿಲ್ಲ. ಎಲ್ಲ ಬಂಧುಗಳ ವಿಶ್ವಾಸವನ್ನು ಗಳಿಸುವಿರಿ. ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ಆಸ್ತಿ ಅಥವಾ ಅನಿವೇಶನ ದೊರಕುವ ಸಾಧ್ಯತೆ ಇದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಟ್ಟು ಅಧ್ಯಯನ ಮಾಡಿ ಉತ್ತಮ ಫಲಿತಾಂಶಕ್ಕೆದಾರಿಮಾಡಿಕೊಳ್ಳುವರು.ಕೃಷಿಉತ್ಪನ್ನಗಳನ್ನು ಮಾರಾಟಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಅನಿರೀಕ್ಷಿತ ಲಾಭಗಳಿ ರುತ್ತವೆ. ತಂದೆಯಿಂದ ವ್ಯವಹಾರಗಳಿಗೆ ಸಹಾಯ ಮತ್ತು ಸಹಕಾರಗಳು ದೊರೆಯುತ್ತವೆ. ವೃತ್ತಿಯಲ್ಲಿ ವೇತನ ಏರಿಕೆಯನ್ನು ಕಾಣಬಹುದು. ಕೃಷಿಯಿಂದ ಹೆಚ್ಚು ಲಾಭವಿರುತ್ತದೆ. ಕೃಷಿ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ತಾಯಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.
ಕುಂಭ
ಯುವಕರು ಅತಿಯಾದ ಮಾತನಾಡಿ ಸಾಕಷ್ಟು ಪೇಚಿಗೆ ಸಿಲುಕುವ ಸಾಧ್ಯತೆಗಳಿವೆ. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ತಮ್ಮ ನಡವಳಿಕೆಗಳಿಂದ ಹಿರಿಯರು ಗೌರವ ಸಂಪಾದನೆ ಮಾಡುವರು. ಕೃಷಿ ಭೂಮಿಯನ್ನು ಕೊಳ್ಳಲು ತಯಾರಿ ನಡೆಸಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ.ವ್ಯವ ಹಾರಗಳಲ್ಲಿ ಹಿರಿಯರಿಗೆಆದ್ಯತೆದೊರೆಯುತ್ತದೆ.ಕಣ್ಣಿನ ತೊಂದರೆಇಲ್ಲವೇಬಾಯಿಯತೊಂದರೆಕಾಡಬಹುದು. ಸಂಗಾತಿಯ ನೆರವಿನಿಂದ ನಿಮ್ಮ ಸರ್ಕಾರಿ ಕಚೇರಿಯ ಕೆಲಸಕಾರ್ಯಗಳು ಸರಾಗವಾಗಿಆಗುತ್ತದೆ.ವ್ಯವಹಾರ ದಲ್ಲಿ ಲಾಭಗಳುಬಂದರೂ ನಿಮಗೆ ತಲುಪುವುದುಸ್ವಲ್ಪ ನಿಧಾನವಾಗಬಹುದು. ತಂದೆಯಿಂದ ವ್ಯವಹಾರದ ಒಳ ಸುಳಿಗಳನ್ನು ಈಗ ತಿಳಿದುಕೊಳ್ಳಬಹುದು. ವೃತ್ತಿ ಯಲ್ಲಿ ಗೌರವ ಹೆಚ್ಚುತ್ತದೆ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ.
ಮೀನ
ವಿದೇಶ ಯಾನದ ಯೋಗವಿದೆ, ಮಾತಿನಲ್ಲಿ ಅತಿಯಾದ ಗತ್ತು ಇರುತ್ತದೆ.ಮಾತನಾಡುವಾಗ ಬಹಳ ಎಚ್ಚರಿಕೆ ಇರಲಿ. ಇಲ್ಲವಾದಲ್ಲಿ ನಿಮ್ಮ ಮಾತೇ ನಿಮಗೆ ವಾಪಸ್ಸು ಬರಬಹುದು. ಧನದಾಯವು ತೃಪ್ತಿಕರವಾಗಿ ರುತ್ತದೆ. ನಿಮ್ಮ ವ್ಯಾವಹಾರಿಕ ನಡವಳಿಕೆಗಳಿಗೆ ನಿಮ್ಮ ಹಿರಿಯರು ತಡೆ ಒಡ್ಡ ಬಹುದು. ಒಡಹುಟ್ಟಿದವರಿಂದ ಕೆಲವುವಿಷಯಗಳಲ್ಲಿ ಸಾಕಷ್ಟುಪ್ರತಿರೋಧ ಬರುತ್ತದೆ. ವ್ಯವಹಾರಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುತ್ತದೆ. ಇಚ್ಛೆ ಪಟ್ಟ ಭೂಮಿ ಖರೀದಿ ಮಾಡುವ ಯೋಗವಿದೆ. ಈಗ ವಿದ್ಯಾರ್ಥಿಗಳಿಗೆ ಫಲಿತಾಂಶ ಸ್ವಲ್ಪಉತ್ತಮವಾಗುತ್ತದೆ. ತಲೆನೋವು ಮತ್ತು ಉಸಿರಾಟದ ಸಮಸ್ಯೆಗಳು ಇರು ವವರು ಎಚ್ಚರ ವಹಿಸಿರಿ. ನಿಮ್ಮ ಹೆಚ್ಚಿನ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗುವುದು ಕಡಿಮೆ. ಒಡವೆ ವಸ್ತುಗಳನ್ನು ಕೊಳ್ಳುವಾಗ ಸಾಕಷ್ಟು ಎಚ್ಚರದಿಂದಿರಿ ಮೋಸ ಹೋಗುವ ಸಾಧ್ಯತೆಗಳಿವೆ. ಒಡವೆಗಳನ್ನು ತಯಾರಿಸುವವರಿಗೆ ಬೇಡಿಕೆ ಕಡಿಮೆಯಾಗಬಹುದು.