ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ಮಾರುಕಟ್ಟೆಯಿಂದ ಲಾಭ ಸಿಗಲಿದೆ
Published 28 ಸೆಪ್ಟೆಂಬರ್ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿರಂತರ ಉತ್ಸಾಹ, ಹುಮ್ಮಸ್ಸಿನಿಂದಾಗಿ ಹೊಸ ಅವಕಾಶಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕೆಲಸದಲ್ಲಿ ಹರಿತ ಆಯುಧಗಳನ್ನು ಬಳಸುವಾಗ ಜಾಗ್ರತೆ ವಹಿಸಿ.
ವೃಷಭ
ಯಶಸ್ಸಿಗೆ ಕಾರಣರಾದವರನ್ನು ಮತ್ತು ಹೆಗಲು ಕೊಟ್ಟವರನ್ನು ಕಾರ್ಯ ಮುಗಿಯುವವರೆಗೆ  ಜೊತೆಯಲ್ಲಿ ಇರಿಸಿಕೊಳ್ಳಿ. ಅಧಿಕ ಪ್ರಯತ್ನದಿಂದ ನಿವೇಶನ ಅಥವಾ ಕೃಷಿ ಭೂಮಿ ಖರೀದಿಸುವ ಕನಸು ನನಸಾಗಲಿದೆ.
ಮಿಥುನ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಕಾರ್ಯಕ್ಷೇತ್ರದಲ್ಲಿ ಯಾರೋ ಮಾಡಿದ ತಪ್ಪಿಗೆ ನೀವು ಹೆಗಲುಕೊಡಬೇಕಾದಂತೆ ಆಗಲಿದೆ.
ಕರ್ಕಾಟಕ
ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಪ್ರಾಪ್ತಿ. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲ ಅಥವಾ ಆಶ್ರಯ ಸಿಗುವುದು. ಬಾಲ್ಯದ ಸ್ನೇಹಿತರ ಭೇಟಿಯಿಂದ ನೆನಪುಗಳು ಮರುಕಳಿಸಲಿವೆ.
ಸಿಂಹ
ಮಧ್ಯಾಹ್ನದ ನಂತರದಲ್ಲಿ ಷೇರು ವ್ಯವಹಾರಗಳಿಂದ ನಿರೀಕ್ಷಿಸಿದ ಲಾಭ ಬರುವುದು. ಮನೆಗೆ ಹೊಸ ಆಲಂಕಾರಿಕ ವಸ್ತುಗಳನ್ನು ಖರೀದಿಸುವುದರಿಂದ ಹಣ ವ್ಯಯ ಆಗಲಿದೆ. ಶುಭ ಫಲಗಳಿಗಾಗಿ ವಿಷ್ಣು ಸಹಸ್ರ ನಾಮ ಸ್ತೋತ್ರ ಪಠಿಸಿರಿ.
ಕನ್ಯಾ
ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿ ಅಥವಾ ವಸ್ತು  ಎಚ್ಚರದಿಂದ ತಪ್ಪಿದಲ್ಲಿ ಕಣ್ಮರೆಯಾಗುವುದು. ಲೆಕ್ಕಪತ್ರಗಳು ಪರಿಶ್ರಮ ವಹಿಸಿ ಪೂರೈಸಿದಲ್ಲಿ ಯಶಸ್ಸಿನ ಹಾದಿ ಸುಗಮವಾಗುವುದು.
ತುಲಾ
ಸಂಬಂಧಿಗಳ ಮನೆಯಲ್ಲಿ ಪರಿಚಯವಾದ ವ್ಯಕ್ತಿಗಳು ನಿಮ್ಮ ಹತ್ತಿರದ ಸಂಬಂಧವಾಗಿ ಬದಲಾಗುವ ಎಲ್ಲಾ ಲಕ್ಷಣಗಳೂ ಇವೆ. ಗುರಿ ಸಾಧಿಸಲು ಕೆಲಸಗಳನ್ನು ಶೀಘ್ರವಾಗಿ, ಪರಿಪೂರ್ಣವಾಗಿ ಮಾಡಿರಿ.
ವೃಶ್ಚಿಕ
ಮಂಗಳಕರ ಕಾರ್ಯಕ್ರಮ ನಡೆಯುವಾಗ ಜಾಗ್ರತೆ ವಹಿಸಿ. ಅತಿಯಾದ ಆಲಸ್ಯ, ಅಕಾಲದ ನಿದ್ದೆಯನ್ನು ನಿರ್ವಹಣೆ ಮಾಡುವ ಬಗ್ಗೆ ಯೋಚಿಸುವುದು ಆರೋಗ್ಯಕರ.
ಧನು
ಯಾರಾದರೂ ಹಿತವಲ್ಲದಿದ್ದರೂ ಸಲಹೆ ಕೊಡಲು ಬಂದರೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಸುಮ್ಮನೆ ಕೇಳಿಸಿಕೊಳ್ಳಿ. ಇಂದು ಧಾರ್ಮಿಕ ಕಾರ್ಯಕ್ರಮದ ಕರೆ ಇದ್ದಲ್ಲಿ ತಪ್ಪದೇ ಭೇಟಿ ನೀಡಿ.
ಮಕರ
ವಿದ್ಯೆ ಹೇರಳವಾಗಿದ್ದರೂ ವಿನಯದ ಕೊರತೆ ಇದ್ದಲ್ಲಿ ಪಾಂಡಿತ್ಯಕ್ಕೆ ಬೆಲೆ ಸಿಗದೆ ಹೋಗಬಹುದು. ವೈರುಧ್ಯಗಳನ್ನು ಮೀರಿ ವ್ಯವಹರಿಸಿದಲ್ಲಿ ಸಂಬಂಧವು ಉಳಿಯಲಿದೆ. ಹಾಕಿದ ಯೋಜನೆಗಳು ಸಫಲವಾಗಲಿವೆ.
ಕುಂಭ
ಯುವಕ ಯುವತಿಯರಿಗೆ ಸುತ್ತಮುತ್ತ ನಡೆಯುವ ಕೆಲವು ಘಟನೆಗಳಿಂದ ದೇಶಭಕ್ತಿಯು ಗರಿಗೆದರಬಹುದು. ವಿಶೇಷ ಕುಶಲತೆಯನ್ನು ಹೊಂದಿದ ಅಂಗವಿಕಲರಿಗೆ ಪ್ರಶಸ್ತಿ ಸಿಗಬಹುದು.
ಮೀನ
ಕಣ್ಣಿಗೆ ಹಿತವೆನ್ನಿಸುವುದ್ದೆಲ್ಲವನ್ನು ತಿನ್ನುವ ಪ್ರವೃತ್ತಿಯಿಂದ ಜೀರ್ಣಾಂಗ ವ್ಯೂಹ ಕಾರ್ಯನಿರ್ವಹಿಸದೆ ಇರುವುದು  ಗಮನಕ್ಕೆ ಬರಲಿದೆ. ಈಶ್ವರನ ಕೃಪೆಯಿಂದ ನಡೆಯುತ್ತಿರುವ ಕೆಲಸದಲ್ಲಿ ಔನ್ನತ್ಯವು ನಿಶ್ಚಿತವಾದದ್ದು.
ADVERTISEMENT
ADVERTISEMENT