ಸೀರೆ ಎಂದರೆ ನಾರಿಯರಿಗೆ ಪ್ರಾಣ. ಎಷ್ಟೇ ಮಾರ್ಡನ್ ಆದ್ರೂ ಶುಭ ಸಂದರ್ಭಗಳಲ್ಲಿ ಧರಿಸುವುದು ಸೀರೆಯನ್ನೇ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆಯೋ ಅಥವಾ ಹೆಣ್ಣಿನಿಂದ ಸೀರೆಯ ಅಂದ ಹೆಚ್ಚುತ್ತದೆಯೋ ಗೊತ್ತಿಲ್ಲ. ಸೀರೆ ಒಂದು ರೀತಿಯ ಎಮೋಷನ್. ಅದರಲ್ಲೂ ಅಮ್ಮನ ಸೀರೆ ಅಂದ್ರೆ ಎಲ್ಲಾ ಹೆಣ್ಣು ಮಕ್ಕಳಿಗೂ ಅಚ್ಚುಮೆಚ್ಚು. ಅಮ್ಮನ ಸೀರೆಗಳನ್ನು ಮತ್ತೆ, ಮತ್ತೆ ಉಟ್ಟು ಸಂಭ್ರಮಿಸುವುದು ಇತ್ತೀಚಿನ ಟ್ರೆಂಡ್. ಈಗಿನ ಕಾಲದಲ್ಲಿ ಸೀರೆ ಉಡುವುದು ಹೆಣ್ಣು ಮಕ್ಕಳಿಗೆ ಸ್ವಲ್ಪ ಕಷ್ಟ. ಯಾವೆಲ್ಲಾ ಬಗೆಯ ಸೀರೆಗಳು ಇವೆ ಎಂಬುದು ನಮಗೆ ತಿಳಿದಿದೆ. ಆದ್ರೆ ಸೀರೆ ಉಡುವ ಸ್ಟೈಲ್ ಬಗ್ಗೆ ನಿಮಗೆ ಗೊತ್ತಾ?. ಸೀರೆ ಉಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ, ಸಂಪ್ರದಾಯದಿಂದ ಸಂಪ್ರದಾಯಕ್ಕೆ ವಿಭಿನ್ನವಾಗಿರುತ್ತದೆ. ಹಾಗಾದರೆ ಸಂಪ್ರದಾಯಿಕ ಸೀರೆ ಉಡುವ ಶೈಲಿಯಿಂದ ಹಿಡಿದು ಮಾರ್ಡನ್ವರೆಗೂ ಯಾವೆಲ್ಲಾ ಶೈಲಿಗಳಿವೆ ತಿಳಿಯೋಣ..

ಕೊಡವರ ಶೈಲಿ: ಕೊಡಗಿನವರು ಸೀರೆ ಧರಿಸುವ ವಿಧಾನವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೊಡವ ಸ್ಟೈಲ್ನಲ್ಲಿ ಸೀರೆ ಉಡುವ ಮಹಿಳೆಯರು ಸೀರೆಯ ನೆರಿಗೆಗಳನ್ನು ಹಿಂಬದಿಯಲ್ಲಿ ಇಟ್ಟು, ಸೀರೆಯ ಪಲ್ಲು ಅಥವಾ ಸೆರಗನ್ನು ಬಲಭುಜದ ಮೇಲ್ಭಾಗಕ್ಕೆ ತಂದು ಪಿನ್ ಮಾಡಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಕೆಲಸ ಮಾಡಲು, ಓಡಾಡಲು ಸುಲಭವಾಗುತ್ತದೆ ಎಂದು ಈ ರೀತಿ ಉಡುವುದನ್ನು ಆರಂಭಿಸಿದ್ದರು. ಕಾಲ ಕ್ರಮೇಣ ಅದು ಕೊಡವರ ಸಂಪ್ರದಾಯಿಕ ಶೈಲಿಯಾಗಿದೆ ಎನ್ನಲಾಗುತ್ತದೆ. ಮದುವೆ ಹಾಗೂ ಶುಭ ಸಂದರ್ಭಗಳಲ್ಲಿ ಕೆಂಪು ಕಲರ್ ಸೀರೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ.

ಗೌಳಿಗರ ಶೈಲಿ: ಗೌಳಿಗರು ಉತ್ತರ ಕನ್ನಡ ಭಾಗದಲ್ಲಿ ಹೆಚ್ಚು ನೆಲೆಸಿದ್ದಾರೆ. ರಾಜ್ಯದ ಬೇರೆ ಭಾಗಗಳಲ್ಲೂ ಇದ್ದಾರೆ. ಗೌಳಿಗರ ಹೆಣ್ಣು ಮಕ್ಕಳು ಸೀರೆ ಉಡುವ ಶೈಲಿಯೇ ಚೆಂದ. 9 ಅಥವಾ 12 ಗಜದ ಸೀರೆಯನ್ನು ಉಡುವ ಇವರು, ಕಚ್ಚೆ ಕಟ್ಟುತ್ತಾರೆ. ಈ ರೀತಿ ಸೀರೆ ಉಡುವುದರಿಂದ ಹೈನುಗಾರಿಕೆ, ಕೃಷಿ ತೋಟಗಳಲ್ಲಿ ಕೆಲಸ ಮಾಡಲು ಸುಲಭ ಎನ್ನಲಾಗುತ್ತದೆ. ಗೌಳಿ ಸಮುದಾಯದಲ್ಲಿ ಹೆಚ್ಚಾಗಿ ಕಾಟನ್ ಸೀರೆ ಬಳಕೆಯಲ್ಲಿದೆ. ಕುಪ್ಪಸ (ಬ್ಲೌಸ್) ಕೂಡ ಯಾವುದೇ ಡಿಸೈನ್ ಇರುವುದಿಲ್ಲ. ಸೀರೆಗಳಲ್ಲಿಯೂ ಯಾವುದೇ ಡಿಸೈನ್ ಇರುವುದಿಲ್ಲ ಇದ್ದರೆ ಬಾರ್ಡರ್ ಮಾತ್ರ ಇರುತ್ತದೆ ಅಷ್ಟೇ.

ಮೈಸೂರು ಶೈಲಿ ಅಥವಾ ನವಿ ಶೈಲಿ; ಮೈಸೂರು ಶೈಲಿ ಸೀರೆ ಉಡುವುದು ಎಂದರೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳು, ಮಹಿಳೆಯರು ಉಡುವ ಶೈಲಿ. ಮುಂಭಾಗದಲ್ಲಿ ನೆರಿಗೆ ಇರಿಸಿ, ಪಲ್ಲುವನ್ನು ಬಲ ಹೆಗಲನಿಂದ ಹಿಂದಕ್ಕೆ ಮೊಣಕಾಲಿಗಿಂತ ಕೆಳಕ್ಕೆ ಬಿಟ್ಟು ಪಿನ್ ಮಾಡುವುದು. ಇದು ಮೈಸೂರು ಸೀಲ್ಕ್ ಸೀರೆಗಳಿಗೆ ಹೆಚ್ಚು ಸೂಕ್ತ. ಇದು ದೈನಂದಿನ ಚುಟುವಟಿಕೆಗಳಿಗೂ ಸಹಕಾರಿ ಎಂದರೆ ತಪ್ಪಾಗಲಾರದು. ಸೀರೆ ಎಂದರೆ ತಕ್ಷಣ ನಮಗೆ ನೆನಪಾಗುವ ಶೈಲಿ ಇದು.

ಮರಾಠಿ ಅಥವಾ ನೌವಾರಿ ಶೈಲಿ: ಈ ರೀತಿಯ ಸೀರೆಗಳು ಸಾಮಾನ್ಯವಾಗಿ 9 ಗಜಕ್ಕಿಂತ ಜಾಸ್ತಿನೇ ಇರುತ್ತದೆ. ಮರಾಠಿಗರು ಧೋತಿ ರೀತಿ ಮೊದಲು ಸೀರೆ ಉಟ್ಟು ಅದರ ಪಲ್ಲುವನ್ನು ಭುಜ ಮೇಲೆ ತಂದು ಪಿನ್ ಮಾಡುತ್ತಾರೆ. ಮದುವೆ ಸಮಯದಲ್ಲಿ ಈ ಸೀರೆಯ ಜತೆಗೆ ಮತ್ತೊಂದು ದುಪ್ಪಟವನ್ನು ಕೈಗಳ ಮೇಲೆ ಹಾಕಿಕೊಳ್ಳುತ್ತಾರೆ. ಚಿತ್ರವನ್ನು ಗಮನಿಸಿ ನಿಮಗೆ ತಿಳಿಯುತ್ತದೆ.

ಬಂಗಾಳಿ ಶೈಲಿ; ಬಂಗಾಳಿ ಶೈಲಿಯಲ್ಲಿ ನೆರಿಗೆಗಳು ಇಲ್ಲದಿರುವುದೇ ವಿಶೇಷ. ಸೀರೆಯನ್ನು ಸುತ್ತಿ, ಪಲ್ಲುವನ್ನು ಉದ್ದನೇ ರೀತಿಯಲ್ಲಿ ಬಿಟ್ಟು, ಅಲ್ಲಿಂದ ಭುಜದ ಮೇಲಕ್ಕೆ ತಂದು ಅಲ್ಲಿ ಪಿನ್ ಮಾಡುವುದು. ಇದು ವಿಭಿನ್ನವಾಗಿದ್ದರೂ ವಿಶಿಷ್ಟವಾಗಿ ಕಾಣುತ್ತದೆ. ದುರ್ಗಾ ಪೂಜೆ ಸಮಯದಲ್ಲಿ ಮಹಿಳೆಯರು ಈ ರೀತಿಯಾಗಿ ಸೀರೆ ಉಟ್ಟು ದೇವಿಯನ್ನು ಪೂಜಿಸುತ್ತಾರೆ. ಈ ವೇಳೆಯೇ ಈ ಶೈಲಿಯ ಸೀರೆ ಉಡುವುದನ್ನು ಹೆಚ್ಚಿನದಾಗಿ ನೋಡಬಹುದು.

ಗುಜರಾತಿ ಶೈಲಿ: ಗುಜರಾತಿನಲ್ಲಿ ಉಡುವ ಸೀರೆಯ ಪದ್ಧತಿಯೇ ಬೇರೆ. ಸಾಮಾನ್ಯವಾಗಿ ನೆರಿಗೆಗಳನ್ನು ಮುಂಭಾಗದಲ್ಲಿ ಇರಿಸಿ, ಪಲ್ಲುವನ್ನು ಹಿಂದಿನಿಂದ ಭುಜದ ಮುಂಭಾಗಕ್ಕೆ ತಂದು ಪ್ಲೀಟ್ಸ್ ರೆಡಿ ಮಾಡಿ ಪಿನ್ ಮಾಡುತ್ತಾರೆ ಈ ಶೈಲಿಯಲ್ಲಿ ಎದೆಯ ಭಾಗವನ್ನು ಸೀರೆಯ ಪಲ್ಲು ಕವರ್ ಮಾಡುತ್ತದೆ. ಪಲ್ಲು ಡಿಸೈನ್ ಕೂಡ ಚೆನ್ನಾಗಿ ಕಾಣುತ್ತದೆ.

ಹಾಲಕಿ ವಕ್ಕಲಿಗ ಶೈಲಿ: ಕರ್ನಾಟಕದ ಬುಡಕಟ್ಟು ಮಹಿಳೆಯರು ಉಡುವ ಸೀರೆ ಪದ್ಧತಿ ಇದು. ಈ ಶೈಲಿಯಲ್ಲಿ ಸೀರೆಯನ್ನು ಕಾಲಗಳ ಮಧ್ಯೆ ಸಿಕ್ಕಿಸಿ, ಪಲ್ಲುವನ್ನು ಹಿಂದಿನಿಂದ ದೇಹದ ಮುಂಭಾಗಕ್ಕೆ ತೆಗೆದು ಹಾಕಿಕೊಳ್ಳುತ್ತಾರೆ. ಕೆಲವೊಂದು ವೇಳೆ ಕುತ್ತಿಗೆಗೆ ಸುತ್ತಿಕೊಳ್ಳುತ್ತಾರೆ. ಇದು ಧೋತಿನಂತೆ ಕಾಣುತ್ತದೆ. ಆದರೆ ಧೋತಿ ಮಾದರಿಯ ಸೀರೆ ಶೈಲಿ ಅಲ್ಲ. ಬುಡಕಟ್ಟು ಮಹಿಳೆಯರು ಈ ರೀತಿ ಸೀರೆ ಉಡುವುದು ದೈನಂದಿನ, ಕೃಷಿ ಚಟುವಟಿಕೆಗಳಿಗೆ ಸುಲಭವಾಗಲೇಂದು ಎನ್ನಲಾಗಿದೆ.

ಮಾರ್ಡನ್ ಸೀರೆಗಳು: ಸಾಮಾನ್ಯವಾಗಿ ಮೈಸೂರು ಶೈಲಿಯಲ್ಲಿಯೇ ಸೀರೆ ಉಡುತ್ತೇವೆ. ಆದರೆ ಇದೀಗ ಕಾಲ ಬದಲಾಗಿದೆ. ಸೀರೆ ಉಡುವುದು ಕಷ್ಟ ಎನ್ನುವವರಿಗೆ ರೆಡಿಮೇಡ್ ಸೀರೆಗಳು ಬಂದಿವೆ. ಫ್ಯಾಂಟ್- ಶರ್ಟ್ ಹಾಕಿಕೊಳ್ಳುವುದಕ್ಕಿಂತ ವೇಗವಾಗಿ ಸೀರೆ ಉಡಬಹುದು. 2 ನಿಮಿಷದಲ್ಲಿಯೇ ಸೀರೆ ಉಟ್ಟು ನಿಮ್ಮ ನೆಚ್ಚಿನ ಪಾರ್ಟಿ-ಫಂಕ್ಷನ್ಗಳಿಗೆ ಹೋಗಬಹುದು. ಇದು ಸಹ ಸಖತ್ ಟ್ರೆಂಡ್ ಸೃಷ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.