ಪ್ರಾಯೋಗಿಕವಾಗಿ ಸಾಕಷ್ಟು ಕೊಡುಗೆ
ದೇಶದಲ್ಲಿ ಮಾನಸಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನಾಯಕತ್ವದ ಕೆಲಸವನ್ನು ವಿಭಾಗ ಹಿಂದಿನಿಂದಲೂ ನಿರ್ವಹಿಸುತ್ತಿದೆ. ಮನೋವಿಜ್ಞಾನದಲ್ಲಿ ಅಪಾರ ಮಂದಿಗೆ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿಗಳನ್ನು ನೀಡಿದೆ. ಹಲವು ಮಾನಸಿಕ ಪರೀಕ್ಷೆ, ಸಾಮರ್ಥ್ಯ ಪರೀಕ್ಷೆಗಳನ್ನು ಮತ್ತು ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ ಹಾಗೂ ಪ್ರಮಾಣೀಕರಿಸಿದೆ. ಈ ಪರಿಕರಗಳನ್ನು ಶೈಕ್ಷಣಿಕ ಸಂಶೋಧನೆಯಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಅಲ್ಲದೆ, ಪ್ರಾಯೋಗಿಕವಾಗಿಯೂ ಸಾಕಷ್ಟು ಕೊಡುಗೆಯನ್ನು ವಿಭಾಗ ನೀಡಿದೆ.