ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಬಸ್‌-ಲಾರಿ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ

Published 25 ಡಿಸೆಂಬರ್ 2023, 6:24 IST
Last Updated 25 ಡಿಸೆಂಬರ್ 2023, 6:24 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಎಂ.ಎಚ್. ಪಟ್ಟಣ ಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹಲವರಿಗೆ ಗಾಯಗಳಾಗಿವೆ.

ಭಾನುವಾರ ಬೆಳಿಗ್ಗೆ ಗುಬ್ಬಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಎಂಎಚ್ ಪಟ್ಟಣ ಕೆರೆಯ ಬಳಿ ಎಡಭಾಗಕ್ಕೆ ಚಲಿಸುವ ಬದಲು ನೇರವಾಗಿ ಚಲಿಸಿ ತುಮಕೂರು ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಯಾವುದೇ ಪ್ರಾಣಪಾಯವಾಗಿಲ್ಲದಿದ್ದರೂ, ಲಾರಿ ಮತ್ತು ಬಸ್‌ ಚಾಲಕರಿಗೆ ಹಾಗೂ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ.

ಅಪಘಾತವಾದ ಸ್ಥಳದಲ್ಲಿ ರಸ್ತೆ ವಿಭಜಕವಿದ್ದು ತುಮಕೂರು ಕಡೆ ಸಾಗುವ ವಾಹನಗಳು ಎಡಭಾಗಕ್ಕೆ ಚಲಿಸಬೇಕಿದೆ. ಆದರೆ ಆ ಜಾಗದಲ್ಲಿ ವ್ಯವಸ್ಥಿತ ಸೂಚನಾ ಫಲಕ ಹಾಗೂ ಎಚ್ಚರಿಕೆಯ ದೀಪ ಅಳವಡಿಸದಿರುವುದರಿಂದ ವಾಹನ ಚಾಲಕರಿಗೆ ಗೊಂದಲ ಉಂಟಾಗುವುದರಿಂದಲೇ ಹೆಚ್ಚು ಅಪಘಾತ ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT