ಚಂದನವನದ ತಾರೆ ಅಂಕಿತಾ ಅಮರ್ ಅವರು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಅಂಕಿತಾ ಅಮರ್ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲಂ ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಈ ಕುರಿತು ನಟಿ ಅಂಕಿತಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಕೆಲ ದಿನಗಳ ಹಿಂದೆ ಕೇರಳದಲ್ಲಿ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆದಿತ್ತು.
ಕೃಪೆ: ಇನ್ಸ್ಟಾಗ್ರಾಮ್
ನಟಿ ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.
ಕೃಪೆ: ಇನ್ಸ್ಟಾಗ್ರಾಮ್
‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಅನಾಮಿಕಾ ಪಾತ್ರವು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ.
ಕೃಪೆ: ಇನ್ಸ್ಟಾಗ್ರಾಮ್
ಪ್ರಶಸ್ತಿ ಪಡೆದ ಅಂಕಿತಾ ಅಮರ್ , ‘ಕೃಷ್ಣ ಸುಂದರಿ' ನನ್ನ ಕೈಯಲ್ಲಿ ಇದ್ದರೂ ಕೂಡ ಇದೊಂದು ಕನಸಿನಂತೆ ಅನುಭವವಾಗುತ್ತಿದೆ. ಕನ್ನಡದ ಕಣ್ಮಣಿಗಳಿಗೆ, ಈ ಚಿತ್ರದ ನಿರ್ದೇಶಕರಿಗೆ, ಚಿತ್ರತಂಡಕ್ಕೆ ಕೃತಜ್ಞತೆ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
‘ಶಾರದಾಂಬೆಯ ಕೃಪೆಯಿಂದ ಗಾಜಿನ ಬಳೆಯಷ್ಟೇ ಅಲ್ಲ, ಉಡೋದಕ್ಕೆ ಅಂಬೆ ಸೀರೆ ಸಿಕ್ಕಿರುವುದಕ್ಕೆ ಖುಷಿ ಇದೆ' ಎಂದು ಅಂಕಿತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಅಂಕಿತಾ ಅಮರ್ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.