ಬೆಂಗಳೂರು: 2024ರ ಡಿಸೆಂಬರ್ 24ರಂದು ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್ಕುಮಾರ್, ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಡಿಸೆಂಬರ್ 25ಕ್ಕೆ ಶಿವರಾಜ್ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಗೀತಾ ಶಿವರಾಜ್ಕುಮಾರ್ ತಿಳಿಸಿದ್ದರು.

ಇಂದು (ಜ.1) ಸ್ವತಃ ಶಿವರಾಜ್ಕುಮಾರ್ ಅವರೇ ವಿಡಿಯೊ ಮುಖಾಂತರ ಹೊಸ ವರ್ಷದ ಶುಭಾಶಯ ಕೋರುತ್ತಾ ತಾವು ಆರೋಗ್ಯವಾಗಿರುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

‘ಅಭಿಮಾನಿಗಳ ಪ್ರಾರ್ಥನೆಯಿಂದ ಎಲ್ಲ ವರದಿಗಳು ನೆಗೆಟಿವ್ ಬಂದಿದೆ. ಪೆಥಾಲಜಿ ವರದಿಯೂ ಬಂದಿದ್ದು, ಅದರಲ್ಲೂ ನೆಗೆಟಿವ್ ಬಂದಿದೆ. ಈ ಮೂಲಕ ಶಿವರಾಜ್ಕುಮಾರ್ ಅವರಿಗೆ ಕ್ಯಾನ್ಸರ್ ಇಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ’ ಎಂದು ಗೀತಾ ಶಿವರಾಜ್ಕುಮಾರ್ ಹೇಳಿದರು.

‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಎಲ್ಲರಿಗೂ ಇರುತ್ತದೆ. ಈ ಭಯವನ್ನು ನೀಗಿಸಲು ಅಭಿಮಾನಿಗಳು, ಸಹ ಕಲಾವಿದರು, ಕುಟುಂಬದವರು, ಸ್ನೇಹಿತರು ಇರುತ್ತಾರೆ. ಬೆಂಗಳೂರಿನಲ್ಲಿದ್ದಾಗ ನನ್ನ ಆರೋಗ್ಯವನ್ನು ನೋಡಿಕೊಂಡ ವೈದ್ಯಕೀಯ ಸಿಬ್ಬಂದಿ ಧೈರ್ಯ ನೀಡಿದರು. ಆ ಧೈರ್ಯದಲ್ಲೇ ಶೂಟಿಂಗ್ ಮಾಡಿದ್ದೆ. ಅದು ಯಾವ ಜೋಶ್ನಲ್ಲಿ ‘45’ ಸಿನಿಮಾವನ್ನು ಮಾಡಿದೆನೋ ಗೊತ್ತಿಲ್ಲ. ಕೀಮೊ ಮಾಡಿಸುತ್ತಿರುವಾಗಲೇ ‘45’ ಸಿನಿಮಾದ ಕ್ಲೈಮ್ಯಾಕ್ಸ್ ಸಾಹಸ ದೃಶ್ಯಗಳನ್ನು ಮಾಡಿದೆ. ಶಸ್ತ್ರಚಿಕಿತ್ಸೆಗೆ ಹೊರಡುವ ಸಂದರ್ಭದಲ್ಲಿ ಆತಂಕ ಜಾಸ್ತಿಯಾಗಿತ್ತು. ಎಲ್ಲರೂ ಧೈರ್ಯ ತುಂಬಿದರು. ಗೀತಾ ಇಲ್ಲದೆ ಶಿವಣ್ಣ ಇಲ್ಲವೇ ಇಲ್ಲ. ಗೀತಾ, ಮಕ್ಕಳು, ಮಧು ಬಂಗಾರಪ್ಪ, ದೇವರ ರೀತಿಯಲ್ಲಿದ್ದ ವೈದ್ಯರಾದ ಮನೋಹರನ್ ಎಲ್ಲರೂ ಚೆನ್ನಾಗಿ ನೋಡಿಕೊಂಡರು. ನನಗೆ ಮಾಡಿರುವುದು ಕಿಡ್ನಿ ಟ್ರಾನ್ಸ್ಪ್ಲಾಂಟ್ ಅಲ್ಲ ಮೂತ್ರಕೋಶವನ್ನು ತೆಗೆದು ಹೊಸ ಮೂತ್ರಕೋಶ ಹಾಕಿದ್ದಾರೆ. ಜನರ ಆಶೀರ್ವಾದವನ್ನು ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ. ಒಂದು ತಿಂಗಳು ಪೂರ್ಣ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಮಾರ್ಚ್ನಿಂದ ನಿರಂತರ ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸುತ್ತೇನೆ. ‘ಐ ವಿಲ್ ಬಿ ಬ್ಯಾಕ್’. ದುಪ್ಪಟ್ಟು ಶಕ್ತಿಯೊಂದಿಗೆ ಡ್ಯಾನ್ಸ್, ಫೈಟ್ನೊಂದಿಗೆ ಮರಳುತ್ತೇನೆ’ ಎಂದಿದ್ದಾರೆ ಶಿವರಾಜ್ಕುಮಾರ್.
.ಶಿವರಾಜ್ ಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಅಮೆರಿಕ ವೈದ್ಯರು.ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ನಟ ಶಿವರಾಜ್ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.