ಮುಂಬೈ: ಬಿಗ್ ಬಾಸ್ ಹಿಂದಿ ಸೀಸನ್ 17ರ ಟ್ರೋಫಿಯನ್ನು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಗೆದ್ದಿದ್ದಾರೆ. ತೀವ್ರ ಪೈಪೋಟಿ ನೀಡಿದ್ದ ನಟ ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್ ಆಗಿದ್ದಾರೆ.

ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಹಿಂದಿ ಕಾರ್ಯಕ್ರಮ ಈಗಾಗಲೇ 16 ಸೀಸನ್‌ಗಳನ್ನು ಮುಗಿಸಿ, ಎರಡು ಒಟಿಟಿ ಸೀಸನ್‌ಗಳನ್ನು ಕಂಡಿದೆ. ಹಿಂದಿನ ಸೀಸನ್‌ನಲ್ಲಿ ರ್‍ಯಾಪರ್ ಎಂಸಿ ಸ್ಟ್ಯಾನ್ ಟ್ರೋಫಿ ಗೆದ್ದುಕೊಂಡಿದ್ದರು.

ಈ ಬಾರಿ ಸುಶಾಂತ್ ರಜಪೂತ್ ಸಿಂಗ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ದಂಪತಿ, ನಟಿ ಪ್ರಿಯಾಂಕಾ ಚೋಪ್ರಾ ಸಂಬಂಧಿ ಮನ್ನಾರ ಚೋಪ್ರಾ ಸೇರಿದಂತೆ ಹಲವು ಜನಪ್ರಿಯ ಮುಖಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದವು.

ಫೈನಲ್‌ಗೆ ಐವರು ಆಯ್ಕೆಯಾಗಿದ್ದು, ಮುನಾವರ್ ಫಾರೂಕಿ, ಅಂಕಿತಾ ಲೋಖಂಡೆ, ಮನ್ನಾರ ಚೋಪ್ರಾ, ಅಭಿಷೇಕ್ ಕುಮಾರ್, ಅರುಣ್ ಮಾಶೆಟ್ಟಿ ನಡುವೆ ಪೈಪೋಟಿ ನಡೆದಿತ್ತು. ಅತಿ ಹೆಚ್ಚು ವೋಟ್ ಪಡೆಯುವ ಮೂಲಕ ಮುನಾವರ್ ಫಾರೂಕಿ ಟ್ರೋಫಿ ಎತ್ತಿಹಿಡಿದಿದ್ದಾರೆ.

ಗೆದ್ದ ಮುನಾವರ್ ಫಾರೂಕಿಗೆ ₹50 ಲಕ್ಷ ನಗದು ಹಾಗೂ ಕಾರನ್ನು ಬಹುಮಾನವಾಗಿ ನೀಡಲಾಗಿದೆ. ಈ ಹಿಂದೆ ನಟಿ ಕಂಗನಾ ರನೌಟ್ ನಡೆಸಿಕೊಂಡು ಬಂದಿದ್ದ ‘ಲಾಕಪ್’ ರಿಯಾಲಿಟಿ ಶೋದ ಟ್ರೋಫಿಯನ್ನೂ ಮುನಾವರ್ ಗೆದ್ದುಕೊಂಡಿದ್ದರು.

ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಗಳಿಸಿರುವ ಮುನಾವರ್, ತಮ್ಮ ಹಾಸ್ಯದಿಂದಲೇ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಒಂದು ಬಾರಿ ಜೈಲು ವಾಸವನ್ನೂ ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.