ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ನಟ ಚಿಕ್ಕಣ್ಣ ಮಾತನಾಡಿ ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿರುವ ನಟ ಚಿಕ್ಕಣ್ಣ, ‘ರಾಜಹುಲಿ’ ಚಿತ್ರಕ್ಕೆ ‘ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ‘ ಬಂದಿದ್ದ ವೇಳೆ ‘ಅಪ್ಪು ಅವರು ನನ್ನನ್ನು ಕರೆದು ಆ ಸಿನಿಮಾವನ್ನು ನೋಡಿದ್ದೇನೆ ಅದರಲ್ಲಿ ಚೆನ್ನಾಗಿ ನಟನೆ ಮಾಡಿದ್ದೀಯಾ ಎಂದು ಬೆನ್ನು ತಟ್ಟಿದ್ದರು’.

ಪುನೀತ್ ರಾಜ್ಕುಮಾರ್ ಅವರ ಜತೆ ತುಂಬಾ ಆತ್ಮೀಯವಾಗಿದ್ದೆ. ‘ಅಂಜನಿಪುತ್ರ’ ಚಿತ್ರದ ಒಂದೊಂದು ದೃಶ್ಯಕ್ಕೂ ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೆವು. ಕಾರಣ, ನಾವಿಬ್ಬರು ಕ್ಯಾಮೆರಾ ಹಿಂದೆ ತುಂಬಾ ಹಾಸ್ಯಾಸ್ಪವಾಗಿ ಮಾತಾಡುತ್ತಿದ್ದೇವು. ಹಾಗಾಗಿ ಚಿತ್ರೀಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತಿತ್ತು ಎಂದು ಅಪ್ಪು ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
.ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಧುರಂದರ್ ಚಿತ್ರಕ್ಕೆ ನಿಷೇಧ: ₹90 ಕೋಟಿ ನಷ್ಟ.
ಹಣವನ್ನು ದುಂದುವೆಚ್ಚ ಮಾಡಬಾರದು ಎಂದು ಅಪ್ಪು ನನಗೆ ಬುದ್ಧಿ ಹೇಳುತ್ತಿದ್ದರು. ನಾನು ಅವರಿಗೆ ಅಲ್ಲೂ ತಮಾಷೆ ಮಾಡುತ್ತಿದ್ದೆ. ಯಾವುದೊ ಒಂದು ಚಿತ್ರದಲ್ಲಿ ನಾನು ಚೆನ್ನಾಗಿ ಡ್ಯಾನ್ಸ್ ಮಾಡಿದ್ದೆ ಅದನ್ನು ಅಪ್ಪು ಇಷ್ಟ ಪಟ್ಟಿದ್ದರು. ನಾನು ಅವರನ್ನು ಬಾಸ್ ಎಂದು ಕರೆದರೆ ಅವರು ಕೂಡ ನನ್ನನ್ನು ಬಾಸ್ ಎಂದು ಕರೆಯುತ್ತಿದ್ದರು ಎಂದು ಚಿಕ್ಕಣ್ಣ ಅವರು ಪುನೀತ್ ರಾಜ್ಕುಮಾರ್ ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

ಅಪ್ಪು ಅವರು ಫೈಟಿಂಗ್ ಚಿತ್ರೀಕರಣಕ್ಕೆ ಡೂಪ್ಗಳನ್ನು ಬಳಸುತ್ತಿರಲಿಲ್ಲ. ಅಂಥಹ ಮಹಾನ್ ವ್ಯಕ್ತಿ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿತ್ತು ಎಂದು ನಟ ಚಿಕ್ಕಣ್ಣ ಅವರು ಪುನೀತ್ ರಾಜ್ಕುಮಾರ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.