ಹೈದರಾಬಾದ್: ಗುತ್ತಿಗೆಗೆ ನೀಡಿದ್ದ ಹೋಟೆಲ್ ಅನ್ನು ಅವಧಿಗೂ ಮುನ್ನವೇ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರು ತೆಲುಗು ನಟರಾದ ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ, ನಿರ್ಮಾಪಕ ಡಿ.ಸುರೇಶ್ ಸೇರಿದಂತೆ ಅವರ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ನ್ಯಾಯಾಲಯದ ನಿರ್ದೇಶನದಂತೆ ನಟರು ಸೇರಿದಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪಿತೂರಿ, ಅತಿಕ್ರಮಣ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿ ಜನವರಿ 11ರಂದು ಫಿಲ್ಮ್ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

2014ರಲ್ಲಿ ದಗ್ಗುಬಾಟಿ ಕುಟುಂಬವು ಫಿಲ್ಮ್ನಗರದ ಫ್ಲ್ಯಾಟ್ನಲ್ಲಿ ಭೂಮಿಯನ್ನು ಗುತ್ತಿಗೆಗೆ ನೀಡಿತ್ತು. ನೋಂದಾಯಿತ ಗುತ್ತಿಗೆ ಪತ್ರ ನೀಡಿದ ನಂತರ ಅಲ್ಲಿ ಹೋಟೆಲ್ ತೆರೆಯಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.

ಗುತ್ತಿಗೆ ಪತ್ರದ ಅವಧಿ ಚಾಲ್ತಿಯಲ್ಲಿದ್ದರು ಕೂಡಾ ವೆಂಕಟೇಶ್ ಸೇರಿದಂತೆ ದಗ್ಗುಬಾಟಿ ಕುಟುಂಬಸ್ಥರು ಹೋಟೆಲ್ ತೆರವುಗೊಳಿಸಲು ಪ್ರಯತ್ನಿಸಿದ್ದರು. ನಂತರ ಅವರ ವಿರುದ್ಧ ತಡೆಯಾಜ್ಞೆಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದೆವು, ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿದೆ. ಹೀಗಿದ್ದರೂ ದಗ್ಗುಬಾಟಿ ಕುಟುಂಬಸ್ಥರು ಹೋಟೆಲ್ ಅನ್ನು ಕೆಡವಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ದೂರುದಾರ ನಾಂಪಲ್ಲಿ ಕೋರ್ಟ್ ಮೊರೆಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.