ಸದ್ಯ ಹುಲಿಗಳೆಷ್ಟಿವೆ?
ಇತ್ತೀಚಿನ ವರದಿಗಳ ಪ್ರಕಾರ ಪ್ರಪಂಚದಾದ್ಯಂತ ಅರಣ್ಯಗಳಲ್ಲಿ ಅಂದಾಜು 5,574 ಕಾಡು ಹುಲಿಗಳಿವೆ. ಅದರಲ್ಲಿ ಶೇ 75 ರಷ್ಟು ಭಾರತದಲ್ಲೇ ಇವೆ ಎಂಬುದು ವಿಶೇಷ. 2022ರ ಗಣತಿ ಪ್ರಕಾರ ಭಾರತದಲ್ಲಿ 3,682 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ ಅತಿಹೆಚ್ಚು (785) ಇದ್ದು, ಕರ್ನಾಟಕ (563) ಎರಡನೇ ಸ್ಥಾನದಲ್ಲಿದೆ.