ಪಾಕಿಸ್ತಾನದಲ್ಲಿ ಮತ್ತೆ ಕ್ಷೋಭೆ ಉಂಟಾಗಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಶೆಹಬಾಜ್ ಶರೀಫ್ ಸರ್ಕಾರದ ನಿದ್ದೆ ಕೆಡಿಸಿದ್ದಾರೆ. ಸರ್ಕಾರಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಸೇನೆ ಬೆಚ್ಚಿಬಿದ್ದಿದೆ. ಇಮ್ರಾನ್ ಮಾತಿಗೆ ದೇಶದ ಜನ ಎಷ್ಟರ ಮಟ್ಟಿಗೆ ಗೌರವ ಕೊಡುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸರಳುಗಳ ಹಿಂದೆ ಇದ್ದರೂ ಇಮ್ರಾನ್ ಪಾಕಿಸ್ತಾನದ ಅತ್ಯಂತ ಪ್ರಬಲ ನಾಯಕರಾಗಿದ್ದಾರೆ ಎನ್ನುವುದನ್ನು ಈಗಿನ ಬೆಳವಣಿಗೆಗಳು ತೋರುತ್ತಿವೆ. ಸದ್ಯಕ್ಕೆ ಭಾರಿ ಹಿಂಸಾಚಾರ ತಪ್ಪಿದ್ದರೂ ಈಗಿನ ವಿದ್ಯಮಾನಗಳು ಸರ್ಕಾರಕ್ಕೆ ಮತ್ತು ಸೇನೆಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ