ಜಾಗತಿಕವಾಗಿ ವಿಮಾನಯಾನ ಜನರ ನಡುವೆ ಈಗ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ವಿಮಾನಗಳಲ್ಲಿ ಸಂಚರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ವಿಮಾನಗಳ ಹಾರಾಟದಲ್ಲೂ ಗಣನೀಯವಾಗಿ ಹೆಚ್ಚಳವಾಗಿದೆ. ಇದರ ನಡುವೆಯೇ, ವಿಮಾನಗಳು ಅಪಘಾತಕ್ಕೀಡಾಗುತ್ತಿರುವುದು ಹೆಚ್ಚುತ್ತಿದೆ. 2023ಕ್ಕೆ ಹೋಲಿಸಿದರೆ, 2024ರಲ್ಲಿ ವಿಮಾನ ಅಪಘಾತಗಳು ಹೆಚ್ಚಾಗಿವೆ ಎಂದು ಐಎಟಿಎ ವಾರ್ಷಿಕ ಸುರಕ್ಷತಾ ವರದಿ–2024 ಹೇಳಿದೆ. ವಿಮಾನಗಳ ಅಪಘಾತ ಹೇಗಾಗುತ್ತವೆ? ಪ್ರಮುಖ ಕಾರಣಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ

ಮಹಾ ವಿಮಾನ ದುರಂತವೊಂದು ದೇಶದಲ್ಲಿ ನಡೆದಿದೆ. ಕಳೆದ ವರ್ಷಾಂತ್ಯ, ಈ ವರ್ಷಾರಂಭದಿಂದಲೂ ಜಗತ್ತಿನ ವಿವಿಧ ಕಡೆಗಳಲ್ಲಿ ವಿಮಾನಗಳು ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. 2024ರ ಡಿಸೆಂಬರ್ 29ರಂದು ದಕ್ಷಿಣ ಕೊರಿಯಾದಲ್ಲಿ ಜೆಜು ಏರ್ ಇಂಟರ್ನ್ಯಾಷನಲ್ ವಿಮಾನವು ಮೌನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 179 ಮಂದಿ ಮೃತಪಟ್ಟಿದ್ದರು. ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕನ್ ಏರ್ಲೈನ್ಸ್ನ ವಿಮಾನ ಮತ್ತು ಅಮೆರಿಕ ಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವೆ ಈ ವರ್ಷದ ಜನವರಿ 29ರಂದು ಪರಸ್ಪರ ಡಿಕ್ಕಿ ಸಂಭವಿಸಿ 60ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಬಳಿಕ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವುದು ಅಹಮದಾಬಾದ್ನ ದುರಂತ.

ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಅಪಘಾತಕ್ಕೆ, ಹಕ್ಕಿಗಳ ಗುಂಪು ಡಿಕ್ಕಿ ಹೊಡೆದುದು ಕಾರಣ ಎಂದು ಹೇಳಲಾಗಿದೆ. ಹಕ್ಕಿಗಳ ಡಿಕ್ಕಿಯಿಂದ ಎಂಜಿನ್ಗೆ ಹಾನಿಯಾಗಿತ್ತು. ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಪೈಲಟ್ ಯತ್ನಿಸಿದ್ದರು. ಲ್ಯಾಂಡಿಂಗ್ ಗೇರ್ ತೆರೆದುಕೊಳ್ಳಲಿಲ್ಲ. ಹೀಗಾಗಿ ವಿಮಾನವು ರನ್ವೇಯಿಂದ ಜಾರಿ ಕಾಂಪೌಂಡ್ಗೆ ಅಪ್ಪಳಿಸಿದ್ದರಿಂದ ಭಾರಿ ದುರಂತ ಸಂಭವಿಸಿತ್ತು. ಎರಡನೇ ಪ್ರಕರಣದಲ್ಲಿ ಉಲ್ಲೇಖಿಸಿದಂತೆ ವಿಮಾನ ಮತ್ತು ಹೆಲಿಕಾಪ್ಟರ್ ನಡುವೆ ಸಂಭವಿಸಿದ ಡಿಕ್ಕಿ ಅವಘಡಕ್ಕೆ ಕಾರಣ.

ಭಾರತ ಸೇರಿದಂತೆ ಜಗತ್ತಿನಲ್ಲಿ ಸಂಭವಿಸಿದ ವಿಮಾನ ಅಪಘಾತಗಳ ಇತಿಹಾಸ ಕೆದಕುತ್ತಾ ಹೋದರೆ, ವಿಮಾನ ಅಪಘಾತ ಕಾರಣವಾಗುವ ಹಲವು ಅಂಶಗಳು ಸಿಗುತ್ತವೆ. ವೈಮಾನಿಕ ಕ್ಷೇತ್ರದ ತಜ್ಞರು ವಿಮಾನಗಳ ಅಪಘಾತಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾರೆ.

ಪೈಲಟ್/ಮಾನವ ಲೋಪ

ಈಗಿನ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ಹೆಚ್ಚು ಸುರಕ್ಷಿತ ಎಂಬ ಅಭಿಪ್ರಾಯ ಇದೆ. ಹಾಗಿದ್ದರೂ ಪೈಲಟ್ಗಳು ಅಥವಾ ವಿಮಾನದ ಸಿಬ್ಬಂದಿ, ಎಟಿಸಿ ಸಿಬ್ಬಂದಿ/ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಡುವ ಪ್ರಮಾದದಿಂದ ಅಪಘಾತಗಳು ಸಂಭವಿಸಬಹುದು. ವಿಮಾನ ನಿರ್ವಹಣಾ ಕಂಪ್ಯೂಟರ್ಗಳನ್ನು (ಎಫ್ಎಂಸಿ) ಸಮರ್ಪಕವಾಗಿ ಪ್ರೋಗ್ರಾಮ್ ಮಾಡದೇ ಇದ್ದರೆ ಅಥವಾ ಪೈಲಟ್ಗಳ ಲೆಕ್ಕಾಚಾರ ತಪ್ಪಾದರೆ ಅಪಘಾತ ಸಂಭವಿಸುತ್ತವೆ ಎಂದು ಹೇಳುತ್ತಾರೆ ತಜ್ಞರು

ತಾಂತ್ರಿಕ ವೈಫಲ್ಯ

ಇದು ದುರಂತಗಳಿಗೆ ಮತ್ತೊಂದು ಪ್ರಮುಖ ಕಾರಣ. ಅಂದಾಜಿನ ಪ್ರಕಾರ, ಶೇ 20ರಷ್ಟು ಅಪಘಾತಗಳು ಈ ಕಾರಣಕ್ಕೆ ಆಗುತ್ತವೆ. ಹಾರಾಟದ ನಡುವೆ ಎಂಜಿನ್ ವಿಫಲವಾಗುವುದು, ಲ್ಯಾಂಡಿಂಗ್ ಗೇರ್ ಸಮಸ್ಯೆ, ಹೈಡ್ರಾಲಿಕ್ಸ್ ವ್ಯವಸ್ಥೆಯಲ್ಲಿ ದೋಷ, ಇನ್ನಿತರ ತಾಂತ್ರಿಕ ಸಮಸ್ಯೆಗಳು ಭಾರಿ ಅನಾಹುತವನ್ನು ಉಂಟು ಮಾಡಬಹುದು

ಪ್ರತಿಕೂಲ ಹವಾಮಾನ

ಭಾರಿ ಮಳೆ, ಬಿರುಗಾಳಿ, ಮಂಜು ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕೂಡ ಅಪಘಾತಕ್ಕೆ ಕಾರಣ ಆಗಬಹುದು. ಪ್ರತಿಕೂಲ ಹವೆಯ ಸಂದರ್ಭದಲ್ಲೂ ಪೈಲಟ್ಗಳಿಗೆ ವಿಮಾನ ಚಾಲನೆಗೆ ಅನುಕೂಲ ಕಲ್ಪಿಸುವಂತಹ ಆಧುನಿಕ ವ್ಯವಸ್ಥೆಗಳಿದ್ದರೂ (ಉಪಗ್ರಹ ಆಧಾರಿತ ಪಥದರ್ಶಕ, ಭ್ರಮಣ ದರ್ಶಕ ಇತ್ಯಾದಿ) ಕೆಲವು ಬಾರಿ ಇವು ಉಪಯೋಗಕ್ಕೆ ಬಾರದಿರಬಹುದು. ನೇಪಾಳದಲ್ಲಿ ಸಂಭವಿಸಿದ ಕೆಲವು ಅಪಘಾತಗಳ ಹಿಂದಿನ ಕಾರಣ ಪ್ರತಿಕೂಲ ಹವಾಮಾನವಾಗಿತ್ತು. ಕಳೆದ ತಿಂಗಳು ಇಂಡಿಗೊ ವಿಮಾನವೊಂದು ಪಠಾಣ್ಕೋಟ್ ಆಗಸದಲ್ಲಿ ಹಾರಾಡುತ್ತಿರುವಾಗ ಆಲಿಕಲ್ಲು ಬಡಿದು ಮತ್ತು ಪ್ರಕ್ಷುಬ್ಧ ಹವಾಮಾನದ (ಟರ್ಬುಲೆನ್ಸ್) ಮಧ್ಯೆ ಸಿಲುಕಿಕೊಂಡಿತ್ತು. ಲಾಹೋರ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಯಲು ಪಾಕಿಸ್ತಾನ ಅವಕಾಶ ಕೊಡದೇ ಇದ್ದುದರಿಂದ ನಂತರ ವಿಮಾನದ ಪೈಲಟ್ ಶ್ರೀನಗರದ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದರು. ವಿಮಾನದ ಮೂತಿಗೆ ಹಾನಿಯಾಗಿತ್ತು

ವಿಧ್ವಂಸಕ ಕೃತ್ಯ

ಭಯೋತ್ಪಾದನೆ ಅಥವಾ ವಿಧ್ವಂಸಕ ಕೃತ್ಯ ಸಂಘಟಿಸಲು ವಿಮಾನಗಳನ್ನು ಅಪಹರಿಸಿ, ಅವುಗಳನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸುವ ಅಪಾಯವೂ ಇದೆ. ಆಲ್ಕೈದಾ ಸಂಘಟನೆಯ ಉಗ್ರರು 2001ರಲ್ಲಿ (9/11) ಅಮೆರಿಕದಲ್ಲಿ ಎರಡು ವಿಮಾನಗಳನ್ನು ಅಪಹರಣ ಮಾಡಿ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳಿಗೆ ಡಿಕ್ಕಿ ಹೊಡೆಸಿದ್ದು ಇದಕ್ಕೆ ಉದಾಹರಣೆ

ಹಕ್ಕಿಗಳ ಡಿಕ್ಕಿ

ವಿಮಾನ ವೇಗವಾಗಿ ಹಾರಾಟ ನಡೆಸುತ್ತಿರುವಾಗ ಎದುರಿಂದ ಏನಾದರೂ ವಸ್ತು ಬಡಿದರೆ ಅದು ದುರಂತಕ್ಕೆ ಕಾರಣವಾಗಬಹುದು. ಎತ್ತರದ ಆಗಸದಲ್ಲಿ ಹಾರಾಡುವ ಹಕ್ಕಿಗಳು ವಿಮಾನಕ್ಕೆ ಡಿಕ್ಕಿ ಹೊಡೆದು ವಿಮಾನಕ್ಕೆ ಹಾನಿ ಮಾಡಿರುವ, ಎಂಜಿನ್ ವೈಫಲ್ಯಕ್ಕೆ ಕಾರಣವಾಗಿರುವ ಉದಾಹರಣೆಗಳು ಹಲವು ಇವೆ

ರನ್ವೇ ಸಂಬಂಧಿಸಿದ ಕಾರಣಗಳು

ರನ್ವೇಗೆ ಹಾನಿಯಾಗಿದ್ದರೆ ಅಥವಾ ವಿಮಾನ ಇಳಿಯುವ ಸಂದರ್ಭದಲ್ಲಿ ರನ್ವೇನಲ್ಲಿ ಜಾನುವಾರುಗಳೋ ಅಥವಾ ಬೇರೆ ವಿಮಾನ ಇರುವುದೋ ಅಥವಾ ಇತರೆ ಯಾವುದೇ ದೊಡ್ಡ ವಸ್ತು ಇರುವುದು ಪೈಲಟ್ ಗಮನಕ್ಕೆ ಬಾರದೇ ಇದ್ದರೆ ಅಪಘಾತ ಸಂಭವಿಸುವುದು ಖಚಿತ

ಟೇಕ್ ಆಫ್ ಸಂದರ್ಭದಲ್ಲಿ ವಿಮಾನದ ಬಾಲ ರನ್ವೇ ಉಜ್ಜುವುದು, ಇಳಿದ ಸಂದರ್ಭದಲ್ಲಿ ವಿಮಾನ ನಿಯಂತ್ರಣಕ್ಕೆ ಸಿಗದೆ ರನ್ವೇನಿಂದ ಜಾರುವುದು, ಸರಾಗವಾಗಿ ವಿಮಾನ ಇಳಿಯಲು ಸಾಧ್ಯವಾಗದಿರುವುದು ಅಥವಾ ಹಾರ್ಡ್ ಲ್ಯಾಂಡಿಂಗ್ ಕೂಡ ಅಪಘಾತಕ್ಕೆ ಕಾರಣಗಳಾಗಬಹುದು

ಕಪ್ಪು ಪೆಟ್ಟಿಗೆ ಬಹುಮುಖ್ಯ

ಅಪಘಾತಕ್ಕೆ ಏನು ಕಾರಣ ಎನ್ನುವುದನ್ನು ವಿಮಾನದಲ್ಲಿರುವ ಬ್ಲ್ಯಾಕ್ಬಾಕ್ಸ್ ಅಥವಾ ಕಪ್ಪು ಪೆಟ್ಟಿಗೆಯಲ್ಲಿರುವ ದತ್ತಾಂಶಗಳು ಹೇಳುತ್ತವೆ. ಫ್ಲೈಟ್ ಡೇಟಾ ರೆಕಾರ್ಡರ್ ಎಂದು ಕರೆಯಲಾಗುವ ಕಿತ್ತಳೆ ಬಣ್ಣದ ಈ ಸಾಧನದಲ್ಲಿ ವಿಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಅಂದರೆ, ಅಪಘಾತಕ್ಕೂ ಮೊದಲು ವಿಮಾನದ ವೇಗ, ಎತ್ತರ, ಮಾರ್ಗ ನಕ್ಷೆ ಸೇರಿದಂತೆ ಎಲ್ಲ ತಾಂತ್ರಿಕ ವಿವರಗಳೂ ದಾಖಲಾಗುತ್ತಿರುತ್ತವೆ. ಬೆಂಕಿ, ಸ್ಫೋಟ ಸೇರಿದಂತೆ ಯಾವುದೇ ಸ್ವರೂಪದ ಅವಘಡ ನಡೆದಿದ್ದರೂ ಹಾನಿಗೀಡಾಗದ ರೀತಿಯಲ್ಲಿ ಈ ಬ್ಲ್ಯಾಕ್ ಬಾಕ್ಸ್ ಅನ್ನು ರೂಪಿಸಲಾಗುತ್ತಿರುತ್ತದೆ. ಸಾಮಾನ್ಯವಾಗಿ ಒಂದು ವಿಮಾನದಲ್ಲಿ ಎರಡು ಬ್ಲ್ಯಾಕ್ ಬಾಕ್ಸ್ಗಳನ್ನು ಅಳವಡಿಸಲಾಗಿರುತ್ತದೆ

ಭಾರತದ ಪ್ರಮುಖ ವಿಮಾನ ದುರಂತಗಳು

2020, ಆ.7: ಕೋಝಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯಿಂದ ಒದ್ದೆಯಾಗಿದ್ದ ರನ್ವೇಯಿಂದ ಜಾರಿ ಕಂದಕಕ್ಕೆ ಬಿದ್ದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 1344; ವಿಮಾನದಲ್ಲಿದ್ದ 190 ಮಂದಿ ಪೈಕಿ ಇಬ್ಬರು ಪೈಲಟ್ಗಳು ಸೇರಿ 21 ಮಂದಿ ಸಾವು

2010, ಮೇ 22: ದುಬೈನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 812 (ಬೋಯಿಂಗ್ 737-800), ರನ್ವೇಯಿಂದ ಕಂದಕಕ್ಕೆ ಬಿದ್ದು, 158 ಮಂದಿ ಸಾವಿಗೀಡಾಗಿದ್ದರು. ಪ್ರಕರಣವು ಎತ್ತರದ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣಗಳ ಭದ್ರತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತ್ತು

2000, ಜು.17: ಅಲಯೆನ್ಸ್ ಏರ್ ವಿಮಾನ 7412 (ಬೋಯಿಂಗ್ 737-200) ಬಿಹಾರದ ಪಟ್ನಾದಲ್ಲಿ ಇಳಿಯುವ ವೇಳೆ ನಡೆದ ತಪ್ಪಿನಿಂದ ವಸತಿ ಪ್ರದೇಶದ ಮೇಲೆ ಬಿದ್ದಿತ್ತು. ನೆಲದ ಮೇಲಿದ್ದ ಐದು ಮಂದಿಯೂ ಸೇರಿ ಒಟ್ಟು 60 ಮಂದಿ ಸಾವಿಗೀಡಾಗಿದ್ದರು.

1996, ನ. 12: ಸೌದಿ ವಿಮಾನ 763 (ಬೋಯಿಂಗ್ 747) ಮತ್ತು ಕಜಕಸ್ತಾನ್ ಏರ್ಲೈನ್ಸ್ ವಿಮಾನ 1907 (ಇಲ್ಯೂಶಿನ್ ಇಲ್–76) ಹರಿಯಾಣದ ಚರ್ಖಿ ದಾದ್ರಿ ಎಂಬಲ್ಲಿ ಆಗಸದಲ್ಲಿ ಡಿಕ್ಕಿ ಹೊಡೆದಿದ್ದವು. ಅದರ ಫಲವಾಗಿ 349 ಮಂದಿ ಮೃತರಾಗಿದ್ದರು. ಸಂವಹನದ ಕೊರತೆಯಿಂದ ಅಪಘಾತ ಸಂಭವಿಸಿತ್ತು. ಪ್ರಕರಣದ ನಂತರ ದೇಶದ ಪ್ರಯಾಣಿಕ ವಿಮಾನಗಳಲ್ಲಿ ಸಂಚಾರ ಘರ್ಷಣೆ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಕಡ್ಡಾಯಗೊಳಿಸಲಾಗಿತ್ತು.

1990, ಫೆ. 14: ಇಂಡಿಯನ್ ಏರ್ಲೈನ್ಸ್ ವಿಮಾನ 605 (ಏರ್ಬಸ್ ಎ320) ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ರನ್ವೇ ಮೇಲೆ ಇಳಿಯುವ ಮುಂಚೆಯೇ ನೆಲಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 146 ಮಂದಿಯಲ್ಲಿ 92 ಮಂದಿ ಮೃತರಾಗಿದ್ದರು. ಆಗತಾನೇ ಏರ್ಬಸ್ ಎ320 ಹೊಸದಾಗಿ ಭಾರತಕ್ಕೆ ಬಂದಿತ್ತು. ಅದರ ಡಿಜಿಟಲ್ ಕಾಕ್ಪಿಟ್ ಬಗ್ಗೆ ಪೈಲಟ್ಗೆ ಅಷ್ಟು ತಿಳಿವಳಿಕೆ ಇಲ್ಲದಿದ್ದುದೇ ಅಪಘಾತಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿತ್ತು.

1988, ಅ.19: ಮುಂಬೈನಿಂದ ಅಹಮದಾಬಾದ್ಗೆ ಬಂದ ಇಂಡಿಯನ್ ಏರ್ಲೈನ್ಸ್ ವಿಮಾನ 113 (ಬೋಯಿಂಗ್ 737-200), ರನ್ವೇ ಸ್ಪಷ್ಟವಾಗಿ ಕಾಣಿಸದೆ ಇಳಿಯುವ ಮುನ್ನವೇ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ವಿಮಾನದಲ್ಲಿದ್ದ 135 ಮಂದಿಯ ಪೈಕಿ 133 ಮಂದಿ ಸಾವಿಗೀಡಾಗಿದ್ದರು. ವಾತಾವರಣದ ಸಮರ್ಪಕ ಮಾಹಿತಿ ನೀಡದಿದ್ದುದು, ವಿಮಾನ ಹಾರಾಟ ನಿಯಂತ್ರಣ ವ್ಯವಸ್ಥೆಯ ವೈಫಲ್ಯ ಮತ್ತು ಪೈಲಟ್ ಮಾಡಿದ ತಪ್ಪಿನಿಂದ ಅಪಘಾತ ಸಂಭವಿಸಿದೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

1978, ಜ.1: ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 855 (ಬೋಯಿಂಗ್ 747), ಮುಂಬೈನಿಂದ ಹೊರಟ ಕೆಲವೇ ಕ್ಷಣಗಳಲ್ಲಿ (101 ಸೆಕೆಂಡ್ಗಳಲ್ಲಿ) ಅರಬ್ಬಿ ಸಮುದ್ರಕ್ಕೆ ಬಿದ್ದಿತ್ತು. ವಿಮಾನದಲ್ಲಿ 213 ಮಂದಿಯೂ ಮೃತರಾಗಿದ್ದರು. ತಪ್ಪು ಮಾರ್ಗದರ್ಶನ ಮತ್ತು ರಾತ್ರಿ ವೇಳೆಯ ಸಂಚಾರದಿಂದ ಮಾರ್ಗದ ಬಗ್ಗೆ ಗೊಂದಲ ಉಂಟಾಗಿದ್ದು ಅವಘಡಕ್ಕೆ ಕಾರಣ ಎನ್ನಲಾಗಿತ್ತು

1973, ಮೇ 31: ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ 440 (ಬೋಯಿಂಗ್ 737–200) ರನ್ವೇ ಮುಟ್ಟುವ ಮುನ್ನವೇ ಪ್ರತಿಕೂಲ ಹವಾಮಾನದಿಂದ ರನ್ವೇ ಸ್ಪಷ್ಟವಾಗಿ ಕಾಣಿಸದೆ ಅಧಿಕ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 65 ಮಂದಿ ಪೈಕಿ 48 ಮಂದಿ ಸಾವಿಗೀಡಾಗಿದ್ದರು. ಮೃತರಲ್ಲಿ ಪ್ರಸಿದ್ಧ ರಾಜಕಾರಣಿ ಮೋಹನ್ ಕುಮಾರಮಂಗಳಂ ಕೂಡ ಸೇರಿದ್ದರು. ನಂತರದಲ್ಲಿ, ದೇಶದಲ್ಲಿ ಹವಾಮಾನದ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಉತ್ತಮಗೊಳ್ಳಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿತ್ತು.

ವಿಶ್ವದ ಕೆಲವು ಪ್ರಮುಖ ವಿಮಾನ ದುರಂತಗಳು

2020, ಜ.8: ಉಕ್ರೇನ್ ಏರ್ಲೈನ್ಸ್ ವಿಮಾನವು ಇರಾನ್ ರಾಜಧಾನಿ ಟೆಹರಾನ್ನಿಂದ ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ಪತನಗೊಂಡಿತ್ತು. ವಿಮಾನದಲ್ಲಿದ್ದ 176 ಮಂದಿ ಸಾವಿಗೀಡಾಗಿದ್ದರು. ತಾನೇ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಸರ್ಕಾರ ನಂತರ ಒಪ್ಪಿಕೊಂಡಿತ್ತು

2019, ಮಾ.10: ಇಥಿಯೋಪಿಯಾ ಏರ್ಲೈನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಅಡೀಸ್ ಅಬಾಬಾದಿಂದ ಟೇಕ್ ಆಫ್ ಆದ ಆರು ನಿಮಿಷಗಳ ನಂತರ ಪತನಗೊಂಡಿತ್ತು. ವಿಮಾನದಲ್ಲಿದ್ದ 157 ಮಂದಿ ಮೃತಪಟ್ಟಿದ್ದರು

2018 ಅ.29: ಲಯನ್ ಏರ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಜಕಾರ್ತಾದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು. ಅದರಲ್ಲಿದ್ದ 189 ಮಂದಿ ಸಾವಿಗೀಡಾಗಿದ್ದರು

2018 ಮೇ 18: ಹವಾನಾದ ಜೋಸ್ ಮಾರ್ಟಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬೋಯಿಂಗ್ 737 ವಿಮಾನವು ಪತನಗೊಂಡಿತ್ತು. ವಿಮಾನದಲ್ಲಿದ್ದವರ ಪೈಕಿ 112 ಮಂದಿ ಸಾವಿಗೀಡಾದರೆ, ಒಬ್ಬರು ಮಾತ್ರ ಬದುಕುಳಿದಿದ್ದರು

2018 ಏ.11: ಅಲ್ಜೀರಿಯಾದ ರಾಜಧಾನಿ ಅಲ್ಜೀರ್ಸ್ನಿಂದ ಹೊರಟ ಸೇನಾ ವಿಮಾನ ಪತನಗೊಂಡು 257 ಮಂದಿ ಮೃತಪಟ್ಟಿದ್ದರು

2016, ನ.28: ಬ್ರೆಜಿಲ್ನ ಕ್ಲಬ್ವೊಂದರ ಫುಟ್ಬಾಲ್ ತಂಡವನ್ನು ಒಯ್ಯುತ್ತಿದ್ದ ವಿಮಾನವು ಇಂಧನ ಖಾಲಿ ಆಗಿದ್ದರಿಂದಾಗಿ ಕೊಲಂಬಿಯಾದ ಮೆಡೆಲ್ಲಿನ್ ಬಳಿ ಪತನಗೊಂಡಿತ್ತು. ಆಟಗಾರರು ಸೇರಿ 71 ಮಂದಿ ಮೃತಪಟ್ಟಿದ್ದರು

2015, ಅ.31: ರಷ್ಯನ್ ಏರ್ಲೈನ್ ಕೊಗಲಿಮೇವಿಯಾ ಕಾರ್ಯಾಚರಿಸುವ ಏರ್ಬಸ್ ಎ321 ವಿಮಾನವು ಶರ್ಮ್ ಅಲ್ ಶೇಖ್ನಿಂದ ಟೇಕ್ ಆಫ್ ಆದ 22 ಗಂಟೆಗಳ ನಂತರ ಪತನಗೊಂಡಿತ್ತು. ಅದರಲ್ಲಿದ್ದ 224 ಮಂದಿ ಮೃತರಾಗಿದ್ದರು. ಸಿರಿಯಾ ಮೇಲೆ ರಷ್ಯಾ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಈ ಕೃತ್ಯ ಎಸಗಿದ್ದಾಗಿ ಇಸ್ಲಾಮಿಕ್ ಸ್ಟೇಟ್ ಹೇಳಿಕೊಂಡಿತ್ತು

2014 ಜು.17: ಮಲೇಷ್ಯಾ ಏರ್ಲೈನ್ಸ್ನ ಎಂಎಚ್17 ಪೂರ್ವ ಉಕ್ರೇನ್ನ ಗ್ರಾಬೋವ್ ಸನಿಹ ಪತನಗೊಂಡಿತ್ತು. ಅದರಲ್ಲಿದ್ದ 298 ಮಂದಿ ಸಾವಿಗೀಡಾಗಿದ್ದರು. ರಷ್ಯಾ ಬೆಂಬಲಿತ ಬಂಡುಕೋರರು ಘಟನೆಗೆ ಕಾರಣ ಎನ್ನುವ ಆರೋಪಗಳು ಕೇಳಿಬಂದವು

2014, ಮಾ. 8: ಕೌಲಾಲಂಪುರದಿಂದ ಬೀಜಿಂಗ್ಗೆ ಹೊರಟಿದ್ದ ಮಲೇಷ್ಯಾ ಏರ್ಲೈನ್ಸ್ನ ಎಂಎಚ್370 ವಿಮಾನವು ಕಣ್ಮರೆಯಾಗಿತ್ತು. ಅದರಲ್ಲಿ 239 ಜನರಿದ್ದರು ಕಣ್ಮರೆಯು ವಿಮಾನಯಾನ ಇತಿಹಾಸದಲ್ಲಿ ಒಂದು ನಿಗೂಢವಾಗಿಯೇ ಉಳಿದಿದೆ

ಆಧಾರ: ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ (ಐಎಟಿಎ) ವಾರ್ಷಿಕ ಸುರಕ್ಷತಾ ವರದಿ–2024, ರಾಯಿಟರ್ಸ್, ಪಿಐಬಿ ಪ್ರಕಟಣೆ ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.