ಬೆಂಗಳೂರು: ತಂತ್ರಜ್ಞಾನ ಬೆಳೆದಂತೆಲ್ಲಾ ವೈಯಕ್ತಿಕ ದತ್ತಾಂಶ ಸುರಕ್ಷತೆ ಬಹುದೊಡ್ಡ ಸವಾಲಾಗಿದೆ. ಅದರಲ್ಲೂ ವಿಶ್ವ ನಾಯಕರು ವಿದೇಶ ಪ್ರವಾಸದ ಸಂದರ್ಭದಲ್ಲಿ ಇವುಗಳನ್ನು ಕಾಪಾಡುವುದೇ ಭದ್ರತಾ ಸಿಬ್ಬಂದಿಗೆ ಬಹು ದೊಡ್ಡ ಸವಾಲು.

ಕಳೆದ ಆಗಸ್ಟ್ನಲ್ಲಿ ಅಲಸ್ಕಾದಲ್ಲಿ ನಡೆದ ರಷ್ಯಾ ಮತ್ತು ಅಮೆರಿಕ ಮಾತುಕತೆ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಲದ ಕಣವನ್ನೂ ಬಿಡದೆ ಅವರ ಭದ್ರತಾ ಸಿಬ್ಬಂದಿ ಸಂಗ್ರಹಿಸಿ ಸ್ವದೇಶಕ್ಕೆ ತೆಗೆದುಕೊಂಡು ಹೋಗಿದ್ದು ಸುದ್ದಿಯಾಗಿತ್ತು.

ಚೀನಾ ಭೇಟಿ ಸಂದರ್ಭದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಕುಳಿತಿದ್ದ ಕುರ್ಚಿ, ಮುಟ್ಟಿದ ಮೇಜು, ಗಾಜಿನ ಲೋಟ, ಚಮಚ ತಟ್ಟೆ ಎಲ್ಲವನ್ನೂ ಅವರ ಸಿಬ್ಬಂದಿ ಒರೆಸಿ ಬೆರಳಚ್ಚು ಸಿಗದಂತೆ ಮಾಡಿದ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಇದರ ಜತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲೇ ಹೋದರೂ ಅವರಿಗಾಗಿಯೇ ಇರುವ ವಿಶಿಷ್ಟ ಸೌಲಭ್ಯದ, ಉತ್ಕೃಷ್ಟ ಭದ್ರತಾ ಸೌಲಭ್ಯ ಹೊಂದಿರುವ ಕಾರುಗಳು ಸದ್ಯ ಸುದ್ದಿಯಲ್ಲಿದೆ. ಪುಟಿನ್ ಅವರು ಡಿ. 4 ಹಾಗೂ 5ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗಾಗಿ ರಷ್ಯಾ ನಿರ್ಮಿತ ಅರುಸ್ ಸೆನೆಟ್ ಕಾರು ಭಾರತಕ್ಕೆ ಬಂದಿಳಿದಿದೆ. ಇದರಲ್ಲಿ ಲಭ್ಯವಿರುವ ಭದ್ರತಾ ಸೌಕರ್ಯ, ವಿಲಾಸಿ ಸೌಲಭ್ಯ ಹಾಗೂ ಅದರ ಸಾಮರ್ಥ್ಯ ಬಹು ಚರ್ಚಿತ ವಿಷಯವಾಗಿದೆ.

ಪುಟಿನ್ ಅವರು ಕಳೆದ ವರ್ಷ ಅರುಸ್ ಕಾರನ್ನು ಕಿಮ್ ಜಾಂಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದೇ ಬ್ರಾಂಡ್ನ ಕಾರಿನಲ್ಲಿ ಪುಟಿನ್ ಭಾರತದಲ್ಲಿ ಸಂಚರಿಸಲಿದ್ದಾರೆ. ಉಕ್ರೇನ್ ವಿರುದ್ಧ ಸಮರ ಸಾರಿದ ನಂತರ ಇದೇ ಮೊದಲ ಬಾರಿಗೆ ಪುಟಿನ್ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಅಧ್ಯಕ್ಷರ ವಿಶೇಷ ಕಾರು ಭಾರತದ ರಸ್ತೆಗಳಲ್ಲಿ ಸಂಚರಿಸಲಿದೆ. ಹಾಗಿದ್ದರೆ ಪುಟಿನ್ ಅವರ ಉರಸ್ ಸೆನೆಟ್ಗೂ ಟ್ರಂಪ್ ಅವರ ‘ಬೀಸ್ಟ್’ನ ವಿಶೇಷತೆ ಇಲ್ಲಿದೆ.

ಪುಟಿನ್ ಅವರ ಅಧಿಕೃತ ಕಾರಿನ ಹೆಸರೇನು?

ರಷ್ಯಾ ಅಧ್ಯಕ್ಷ ಪುಟಿನ್ ಅವರಿಗಾಗಿ ಅರುಸ್ ಸೆನೆಟ್ ಎಂಬ ಲಿಮೋಸಿನ್ ಕಾರನ್ನು ಆ ದೇಶ ನೀಡಿದೆ. ಈ ಕಾರು 2018ರಲ್ಲಿ ಅಧ್ಯಕ್ಷರಿಗಾಗಿ ನಿಯೋಜನೆಗೊಂಡಿತು. ಅದಕ್ಕೂ ಮೊದಲು ಜರ್ಮನಿಯ ಮರ್ಸಿಡೀಸ್ ಬೆಂಜ್ನ ಎಸ್–600 ಕಾರಿನಲ್ಲಿ ಅಧ್ಯಕ್ಷರು ಪ್ರಯಾಣಿಸುತ್ತಿದ್ದರು. ‘ಮಾಸ್ಕೊ ಮೊದಲು’ ಎಂಬ ರಷ್ಯಾ ಅಭಿಯಾನದಿಂದಾಗಿ ಸ್ವದೇಶಿ ನಿರ್ಮಿತ ವಿಲಾಸಿ ಕಾರು ಈಗ ರಷ್ಯಾ ಅಧ್ಯಕ್ಷರ ಅಧಿಕೃತ ವಾಹನವಾಗಿದೆ.

ಅರುಸ್ ಸೆನೆಟ್ ಅನ್ನು ರಷ್ಯಾದ ರೋಲ್ಸ್ ರಾಯ್ಸ್ ಎಂದೇ ಕರೆಯಲಾಗುತ್ತದೆ. ಇದನ್ನು ಅರುಸ್ ಮೋಟಾರ್ಸ್ ತಯಾರಿಸುತ್ತದೆ. ಕಾರ್ಟೆಜ್ ಯೋಜನೆಯ ಭಾಗವಾದ ಈ ಕಾರು ಅತ್ಯಂತ ಉತ್ಕೃಷ್ಟ ಭದ್ರತೆ ಹಾಗೂ ವಿಲಾಸಿ ಸೌಲಭ್ಯಗಳನ್ನು ಹೊಂದಿದೆ.

ಅರುಸ್ ಸೆನೆಟ್ನ ವಿಶೇಷತೆಗಳು

ಎಂಜಿನ್: 4.4 ಲೀಟರ್ನ ಟ್ವಿನ್ ಟರ್ಬೊ ವಿ8 ಹೈಬ್ರಿಡ್ ಸೌಕರ್ಯ ಹೊಂದಿದೆ. 598 ಅಶ್ವಶಕ್ತಿ

ಕಾರ್ಯಕ್ಷಮತೆ: ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗ ತಲುಪಲು 6 ಸೆಕೆಂಡುಗಳು ಈ ಕಾರಿಗೆ ಸಾಕು. ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 249 ಕಿ.ಮೀ.

ಏಳು ಮೀಟರ್ ಉದ್ದ ಇರುವ ಈ ಕಾರು ವಿಆರ್10 ಗುಂಡು ಹಾರಿಸುವ ಗುಣವನ್ನು ಹೊಂದಿದೆ. ಜತೆಗೆ ಗುಂಡು ನಿರೋಧಕ, ಗ್ರನೇಡ್ ಸಿಡಿದರೂ ಕಾರಿಗೆ ಏನೂ ಆಗದಂತೆ ವಿನ್ಯಾಸ ಮಾಡಲಾಗಿದೆ. ಟೈರ್ ಪಂಚರ್ ಆದರೂ ಈ ಕಾರು ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಇದರ ಗಾಜು 6 ಇಂಚಿನಷ್ಟಿದೆ. ತುರ್ತು ನಿರ್ಗಮನ, ಅಗ್ನಿ ನಿರೋಧಕ ವ್ಯವಸ್ಥೆ ಇದರಲ್ಲಿದೆ. ರಾಸಾಯನಿಕ ದಾಳಿಯಿಂದಲೂ ಒಳಗಿರುವವರನ್ನು ಅರುಸ್ ಸೆನೆಟ್ ರಕ್ಷಿಸಲಿದೆ. ಸಂಪರ್ಕಕ್ಕೆ ಮಿನಿ ಕಮಾಂಡ್ ಸೆಂಟರ್ ಇದರೊಳಗಿದೆ.

ವಾರ್ಷಿಕ 120 ಕಾರುಗಳನ್ನು ಮಾತ್ರ ಈ ಕಂಪನಿ ಅಭಿವೃದ್ಧಿಪಡಿಸುತ್ತದೆ ಎಂದು ಕಂಪನಿಯ ವರದಿಯಲ್ಲಿದೆ. ಇದರ ಬೆಲೆ ರೂಪಾಯಿಯಲ್ಲಿ ₹2.5 ಕೋಟಿ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ಚೀನಾ ಭೇಟಿ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರ ಅಧಿಕೃತ ಕಾರಿನಲ್ಲಿ ಸಂಚರಿಸಿದ್ದರು. ಇದನ್ನು ಸ್ವತಃ ಮೋದಿ ಅವರೇ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದರು.

ಅಮೆರಿಕದ ಅಧ್ಯಕ್ಷರ ‘ದಿ ಬೀಸ್ಟ್’ ಹೇಗಿದೆ?

ಅಮೆರಿಕ ಅಧ್ಯಕ್ಷರಿಗಾಗಿಯೇ ಇರುವ ಲಿಮೋಸಿನ್ ಮಾದರಿಯ ಕಾರನ್ನು ‘ದಿ ಬೀಸ್ಟ್’ ಎಂದು ಬರೆಯಲಾಗುತ್ತದೆ. ಬೀಸ್ಟ್ ಎಂದರೆ ನಿಘಂಟುವಿನಲ್ಲಿ ಮೃಗ, ಪಶು ಎಂದಿದೆ.

ಅಮೆರಿಕದ ಪ್ರತಿಷ್ಠಿತ ಕ್ಯಾಡಿಲಾಕ್ ಕಂಪನಿಯು ಈ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಗರಿಷ್ಠ ಭದ್ರತೆ, ವೇಗ ಹಾಗೂ ವಿಲಾಸಿತನಕ್ಕೆ ಇದು ಹೆಸರುವಾಸಿಯಾಗಿದೆ. ‘ದಿ ಬೀಸ್ಟ್’ ಅನ್ನು ವಿಶೇಷವಾಗಿ ಕ್ಯಾಡಿಲಾಕ್ ವಿನ್ಯಾಸಗೊಳಿಸಿದೆ.

ಜನರಲ್ ಮೋಟಾರ್ಸ್ ಕಂಪನಿಯು ಕ್ಯಾಡಿಲಾಕ್ ಕಾರನ್ನು ಉತ್ಪಾದಿಸುತ್ತದೆ. ಷವರ್ಲೆ ಕೋಡಿಯಾಕ್ ಎಂಬ ಟ್ರಕ್ ಚಾಸಿಸ್ ಅನ್ನೇ ಆಧಾರವಾಗಿಟ್ಟುಕೊಂಡು ಈ ಕಾರು ಅಭಿವೃದ್ಧಿಗೊಂಡಿದೆ. ಈ ಹಿಂದೆ ಜೋ ಬೈಡನ್ ಅವಧಿಯಿಂದ ಈ ಕಾರನ್ನು ಅಧ್ಯಕ್ಷರು ಬಳಸುತ್ತಿದ್ದಾರೆ.

ಅಧ್ಯಕ್ಷರ ವಿದೇಶ ಪ್ರವಾಸದ ಸಂದರ್ಭದಲ್ಲಿ ಅಮೆರಿಕದ ವಾಯುಸೇನೆಯ ಸಿ–17 ಸರಕು ವಿಮಾನದಲ್ಲಿ ಇದನ್ನು ಸಾಗಿಸಲಾಗುತ್ತದೆ.

‘ದಿ ಬೀಸ್ಟ್‘ ನಲ್ಲಿ 6.6 ಲೀಟರ್ನ ವಿ8 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಕಾರು ಸುಮಾರು 9 ಸಾವಿರ ಕೆ.ಜಿ. ಇದೆ. ಇದರಲ್ಲಿ ಶಸ್ತ್ರಾಸ್ತ್ರ, ಭದ್ರತೆ, ಗುಪ್ತಚರ ವ್ಯವಸ್ಥೆ ಇದೆ. ದಾಳಿಯನ್ನು ಎದುರಿಸುವ ಸಂದರ್ಭದಲ್ಲಿ ಇದು ರೋಲಿಂಗ್ ಬಂಕರ್ ಆಗಲಿದೆ. ಇದು ಗಂಟೆಗೆ ಗರಿಷ್ಠ 112 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.

ಈ ಕಾರಿಗೆ 8 ಇಂಚಿನ ರಕ್ಷಾಕವಚ ಮತ್ತು 3 ಇಂಚಿನ ಗಾಜನ್ನು ನೀಡಲಾಗಿದೆ. ರಾತ್ರಿ ಸಂಚಾರದಲ್ಲಿ ತೊಂದರೆಯಾಗದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಅಶ್ರುವಾಯು ಸಿಂಪಡಿಸುವ ವ್ಯವಸ್ಥೆ ಇದರಲ್ಲಿದೆ. ಪೆಂಟಗನ್ ಹಾಗೂ ಅಮೆರಿಕದ ಉಪಾಧ್ಯಕ್ಷರೊಂದಿಗೆ ನೇರ ಸಂವಹನ ನಡೆಸುವ ವ್ಯವಸ್ಥೆ ಇದರಲ್ಲಿದೆ. ಅಧ್ಯಕ್ಷರ ರಕ್ತ ಗುಂಪಿಗೆ ಹೊಂದುವ ತುರ್ತು ರಕ್ತ ಪೂರೈಕೆ ವ್ಯವಸ್ಥೆ ಇದರಲ್ಲಿದೆ. ‘ದಿ ಬೀಸ್ಟ್’ನಲ್ಲಿ ಏಳು ಪ್ರಯಾಣಿಕರು ಸಂಚರಿಸಬಹುದು.
.ಎಐ, ಡ್ರೋನ್, ಸ್ನೈಪರ್, ಜಾಮರ್... ಹೀಗಿದೆ ಭಾರತದಲ್ಲಿ ಪುಟಿನ್ಗೆ ಭದ್ರತೆ.ನಾಳೆ ಭಾರತಕ್ಕೆ ರಷ್ಯಾ ಅಧ್ಯಕ್ಷ: ಇಲ್ಲಿದೆ ಪುಟಿನ್ ಭೇಟಿಯ ಪ್ರಮುಖಾಂಶಗಳು...
ಅರುಸ್ ಸೆನೆಟ್ – ದಿ ಬೀಸ್ಟ್

ವಿಲಾಸಿತನ, ವೇಗ ಹಾಗೂ ಭದ್ರತೆಯಲ್ಲಿ ಪುಟಿನ್ ಅವರ ಅರುಸ್ ಸೆನೆಟ್ ಅಧಿಕ ಮನ್ನಣೆ ಪಡೆದಿದೆ. ‘ದಿ ಬೀಸ್ಟ್’ನದ್ದು ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ.

ಎಂಜಿನ್ ವಿಭಾಗದಲ್ಲೂ ಅರುಸ್ ಸೆನೆಟ್ 4.4 ಲೀಟರ್ನ ಟ್ವಿನ್ ಟರ್ಬೊ ವಿ8 ಎಂಜಿನ್ ಹೊಂದಿದೆ. ಮತ್ತೊಂದೆಡೆ ‘ದಿ ಬೀಸ್ಟ್’ ಟ್ರಕ್ನ ಚಾಸಿಸ್ ಮೇಲೆ ಅಭಿವೃದ್ಧಿಪಡಿಸಲಾಗಿದ್ದು, 6 ಲೀಟರ್ನ ವಿ8 ಎಂಜಿನ್ ಹೊಂದಿದೆ.

ಅರುಸ್ ಸೆನೆಟ್ ಸೀಮಿತ ಸಂಖ್ಯೆಯ ಕಾರುಗಳನ್ನು ಹೊಂದಿದೆ. ಆದರೆ ‘ದಿ ಬೀಸ್ಟ್’ ಅಮೆರಿಕ ಅಧ್ಯಕ್ಷರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಾಗರಿಕರು ಈ ಮಾದರಿಯ ಕಾರನ್ನು ಖರೀದಿಸುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.