ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆ ಬಿಗಿ ಮಾಡಲಾಗಿದೆ. ಐದು ಹಂತಗಳ ಭದ್ರತೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
.ಪುಟಿನ್ ಬಳಸುವ ಅರುಸ್ ಸೆನೆಟ್ ಅಥವಾ ಟ್ರಂಪ್ರ ‘ದಿ ಬೀಸ್ಟ್’: ಯಾವುದು ಹೆಚ್ಚು?.
ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆಯಲ್ಲಿ ಉನ್ನತ ಮಟ್ಟದ ತರಬೇತಿ ಪಡೆದ ಸಿಬ್ಬಂದಿ, ಭಾರತದ ರಾಷ್ಟ್ರೀಯ ಭದ್ರತಾ ದಳದ (NSG) ಕಮಾಂಡೊಗಳು, ಸ್ನೈಪರ್, ಡ್ರೋನ್, ಜಾಮರ್ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಶೀಲನಾ ವ್ಯವಸ್ಥೆ ಸೇರಿದಂತೆ ಐದು ಹಂತಗಳ ಭದ್ರತೆ ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಬರುತ್ತಿದ್ದಾರೆ. ನಾಳೆ ಸಂಜೆ ಅವರು ಭಾರತಕ್ಕೆ ಬಂದಿಳಿಯಲಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ಮೋದಿಯವರ ಜತೆ ರಾತ್ರಿ ಊಟ ಮತ್ತು ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜನೆಗೊಂಡಿದೆ.
.ನಾಳೆ ಭಾರತಕ್ಕೆ ರಷ್ಯಾ ಅಧ್ಯಕ್ಷ: ಇಲ್ಲಿದೆ ಪುಟಿನ್ ಭೇಟಿಯ ಪ್ರಮುಖಾಂಶಗಳು...
ಶುಕ್ರವಾರ ರಾಜ್ಘಾಟ್ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ನಂತರ ಭಾರತ ಮಂಟಪಮ್ನಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು 50ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ದೆಹಲಿಗೆ ಆಗಮಿಸಿದ್ದಾರೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.
.ಸೀಮೋಲ್ಲಂಘನ ಅಂಕಣ: ಪುಟಿನ್ ಭೇಟಿ, ಸ್ನೇಹಕ್ಕೆ ಪುಷ್ಟಿ?.
ಈ ಭದ್ರತಾ ಅಧಿಕಾರಿಗಳೊಂದಿಗೆ ದೆಹಲಿ ಪೊಲೀಸ್ ಮತ್ತು ಎನ್ಎಸ್ಜಿ ಸಿಬ್ಬಂದಿ, ಪುಟಿನ್ ಸಾಗುವ ದಾರಿಯ ನೈರ್ಮಲ್ಯದ ಬಗ್ಗೆಯೂ ನಿಗಾ ಇಡಲಿದ್ದಾರೆ. ಜತೆಗೆ ಪುಟಿನ್ ಭದ್ರತೆಗಾಗಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿ ಮತ್ತು ವಿಶೇಷ ಡ್ರೋನ್ಗಳು ಎಲ್ಲಾ ಸಮಯದಲ್ಲೂ ಅವರ ಕ್ಯಾವಲ್ಕೇಡ್ ಮೇಲೆ ಕಣ್ಣಿಟ್ಟಿರುವುದನ್ನು ಖಚಿತಪಡಿಸುತ್ತದೆ. ಸ್ನೈಪರ್ಗಳು ಅಧ್ಯಕ್ಷರ ಚಲನವಲನದ ಮಾರ್ಗವನ್ನು ನಿಗಾವಹಿಸಲಿದ್ದಾರೆ. ಜಾಮರ್ ಮತ್ತು ಎಐ ಆಧಾರಿತ ತಂತ್ರಜ್ಞಾನದ ಅಳವಡಿಕೆ, ಮುಖ ಗುರುತು ಪತ್ತೆ ಕ್ಯಾಮರಾ ಸೇರಿ ಪುಟಿನ್ ಭದ್ರತೆಗೆ ಬೃಹತ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ರಷ್ಯಾದ ಭದ್ರತಾ ಸಿಬ್ಬಂದಿಯೇ ಪುಟಿನ್ ಅವರ ಭದ್ರತೆ ಕೈಗೊಳ್ಳಲಿದ್ದಾರೆ. ಆದರೆ ಪುಟಿನ್ ಮತ್ತು ಮೋದಿ ಭೇಟಿ ವೇಳೆ ಭಾರತದ ಎನ್ಎಸ್ಜಿ ಕಮಾಂಡೊಗಳು ರಷ್ಯಾ ಭದ್ರತಾ ಅಧಿಕಾರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
.ಪುಟಿನ್ ಭಾರತ ಭೇಟಿಗೂ ಮುನ್ನ ಉಕ್ರೇನ್ ಬಗ್ಗೆ ಅಮೆರಿಕದೊಂದಿಗೆ ಜೈಶಂಕರ್ ಚರ್ಚೆ.ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ: ದೆಹಲಿಯ ಮೂಲೆ ಮೂಲೆಗಳಲ್ಲೂ ಕಣ್ಣಿಟ್ಟ ಕಾವಲುಪಡೆ.ಪುಟಿನ್ ಭಾರತ ಭೇಟಿ: ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ.ಡಿಸೆಂಬರ್ 4ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.