ಎರಡೂವರೆ ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಜೇಯ 77 ರನ್ (42ಎ, 7x4, 4x6) ಗಳಿಸಿದರು. ಅವರ ಬ್ಯಾಟಿಂಗ್ ನೆರವಿನಿಂದ ಬರೋಡಾ ತಂಡವು 7 ವಿಕೆಟ್ಗಳ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಾಗ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ, ಕಾಲಿಗೆ ಬಿದ್ದು, ಬಳಿಕ ಸೆಲ್ಫಿ ಪಡೆಯಲು ಮುಂದಾಗುತ್ತಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಮೈದಾನಕ್ಕೆ ಓಡಿ ಬಂದು ಆತನನ್ನು ಹೊರಗೆ ಕರೆದುಕೊಂಡು ಹೋಗಲು ಮುಂದಾಗುತ್ತಾರೆ.

ಆದರೆ, ಹಾರ್ದಿಕ್ ಪಾಂಡ್ಯ ಭದ್ರತಾ ಸಿಬ್ಬಂದಿಯನ್ನು ತಡೆದು ಆತನಿಗೆ ಸೆಲ್ಫಿ ಕೊಡಲು ಮುಂದಾಗುತ್ತಾರೆ. ಹಾರ್ದಿಕ್ ನೆರವಿನಿಂದ ಸೆಲ್ಫಿ ತೆಗೆದುಕೊಂಡ ಅಭಿಮಾನಿ ಸಂತೋಷದಿಂದ ಮೈದಾನಿಂದ ಹೊರಗೆ ಓಡಿ ಹೋಗುತ್ತಾನೆ.

ಅಭಿಮಾನಿಗಳು ಹತ್ತಿರ ಬಂದರೆ ದೂರ ಓಡುವ ಕಾಲದಲ್ಲಿ ಭದ್ರತಾ ಸಿಬ್ಬಂದಿಯನ್ನು ತಡೆದು ಅಭಿಮಾನಿಗೆ ಸೆಲ್ಫಿ ಕೊಟ್ಟು ಕಳಿಸಿರುವ ಹಾರ್ದಿಕ್ ನಡೆಯನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮಾತ್ರವಲ್ಲ, ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.