ನವದೆಹಲಿ: ಕೊರೊನಾ ವೈರಸ್ ಬಳಿಕ ದೇಶದಾದ್ಯಂತ ಈಗ ಎಚ್ಎಂಪಿವಿ ಆತಂಕ ಶುರುವಾಗಿದೆ. ಹ್ಯೂಮನ್ ಮೆಟಾನ್ಯೂಮೊ ವೈರಸ್(ಎಚ್ಎಂಪಿವಿ) ಜಾಗತಿಕವಾಗಿ ಗುರುತಿಸಲ್ಪಟ್ಟ ಉಸಿರಾಟ ಸಂಬಂಧಿತ ವೈರಸ್ ಇದಾಗಿದ್ದು, ಇತ್ತೀಚೆಗೆ ಚೀನಾದಲ್ಲಿ ಈ ವೈರಸ್ ಸೋಂಕಿನ ಪ್ರಕರಣಗಳು ವರದಿಯಾದ ನಂತರ ವಿಶ್ವದಾದ್ಯಂತ ಗಮನ ಸೆಳೆದಿದೆ.

ಈ ಕುರಿತಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು(ಐಸಿಎಂಆರ್) ತೀವ್ರ ಕಣ್ಗಾವಲು ಇಟ್ಟಿದ್ದು, ಕರ್ನಾಟಕದಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

HMPV ಎಂದರೇನು?

2001ರಲ್ಲಿ ಮೊದಲ ಬಾರಿಗೆ ಕಂಡುಬಂದ ವೈರಾಣು ಇದಾಗಿದ್ದು, ಇದು ಪ್ಯಾರಾಮಿಕ್ಸೊವಿರಿಡೆ(ಉಸಿರಾಟ ಸಂಬಂಧಿತ ವೈರಸ್ಗಳ ಗುಂಪು) ಕುಟುಂಬಕ್ಕೆ ಸೇರಿದೆ. ಇದು ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್(ಆರ್ಎಸ್ವಿ)ಗೆ ನಿಕಟವಾಗಿದೆ. ಕೆಮ್ಮುಅಥವಾ ಸೀನುವಿಕೆಯಿಂದ ಹೊರಚಿಮ್ಮುವ ಕಣಗಳಿಂದ ಈ ವೈರಸ್ ಹರಡುತ್ತದೆ, ಹಾಗೆಯೇ, ಸೋಂಕಿತ ಕಣಗಳು ಬಿದ್ದಿರುವ ಮೇಲ್ಮೈ ಸ್ಪರ್ಶಿಸುವ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವುದರಿಂದ ಹರಡುತ್ತದೆ.

ಈ ವೈರಸ್ ಸಣ್ಣ ಪ್ರಮಾಣದ ಉಸಿರಾಟದ ತೊಂದರೆಯಿಂದ ಹಿಡಿದು ಗಂಭೀರ ಸ್ವರೂಪದ ಕಾಯಿಲೆಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಶಿಶುಗಳು, ವೃದ್ಧರು ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚು ಪರಿಣಾಮ ಬೀರುತ್ತದೆ. ಜಾಗತಿಕವಾಗಿ ಕಂಡುಬಂದಿರುವ ಈ ವೈರಸ್, ಸಮಶೀತೋಷ್ಣ ಪ್ರದೇಶಗಳಲ್ಲಿ ಚಳಿಗಾಲದ ಕೊನೆಯಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಉತ್ತುಂಗಕ್ಕೇರುತ್ತದೆ. ಶೀತ ವಲಯಗಳಲ್ಲಿ ವರ್ಷಪೂರ್ತಿ ಬಾಧಿಸುತ್ತದೆ.

HMPV ಸೋಂಕಿನ ರೋಗಲಕ್ಷಣಗಳು

ವ್ಯಕ್ತಿಯ ವಯಸ್ಸು, ಆರೋಗ್ಯ ಸ್ಥಿತಿ, ರೋಗ ನಿರೋಧಕ ಶಕ್ತಿ ಆಧರಿಸಿ ರೋಗಲಕ್ಷಣಗಳು ಭಿನ್ನವಾಗಿರುತ್ತವೆ.

ಸಾಧಾರಣ ಪ್ರಕರಣಗಳಲ್ಲಿ ಮೂಗು ಸೋರುವಿಕೆ, ಗಂಟಲು ನೋವು, ಕೆಮ್ಮು ಮತ್ತು ಜ್ವರ, ಸಾಮಾನ್ಯ ಶೀತವನ್ನು ಹೋಲುವ ಲಕ್ಷಣಗಳಿರುತ್ತವೆ. ಮಧ್ಯಮ ರೋಗಲಕ್ಷಣಗಳಲ್ಲಿ ನಿರಂತರ ಕೆಮ್ಮು, ಉಬ್ಬಸ ಮತ್ತು ಆಯಾಸವನ್ನು ಒಳಗೊಂಡಿರಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ವಿಶೇಷವಾಗಿ ಶಿಶುಗಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಬ್ರಾಂಕೈಟಿಸ್, ಬ್ರಾಂಕಿಯೋಲೈಟಿಸ್ ಅಥವಾ ನ್ಯುಮೋನಿಯಾದಂತಹ ತೊಡಕುಗಳಿಗೆ ಕಾರಣವಾಗಬಹುದು. ಆಸ್ಪತ್ರೆಗೆ ದಾಖಲಿಸಬೇಕಾದ ತೀವ್ರ ಉಸಿರಾಟದ ಕಾಯಿಲೆ (ಎಸ್ಎಆರ್ಐ) ಸಹ ಸಂಭವಿಸಬಹುದು.

ಪ್ರಸರಣ ಮತ್ತು ತಡೆ

HMPV ವೈರಸ್, ಆರ್ಎಸ್ವಿ ಮತ್ತು ಇನ್ಫ್ಲುಯೆಂಜಾಗಳಂತಹ ಇತರೆ ಉಸಿರಾಟ ಸಂಬಂಧಿತ ವೈರಸ್ಗಳಂತೆಯೇ ಹರಡುತ್ತದೆ. ಉಸಿರಾಟದ ಮೂಲಕ ಹೊರಬರುವ ಸೋಂಕಿತ ಕಣಗಳು, ಸೀನಿದಾಗ ಚಿಮ್ಮುವ ದ್ರವ, ಸೋಂಕಿತ ಮೇಲ್ಮೈ ಮುಟ್ಟುವುದರಿಂದ ವೈರಸ್ ಹರಡುತ್ತದೆ. HMPV ವೈರಸ್ ಹರಡುವಿಕೆ ತಡೆಯಲು ಕೈಗಳ ಶುಚಿತ್ವ ಕಾಪಾಡುವುದು ಬಹಳ ಮುಖ್ಯ. ಆಗಾಗ್ಗೆ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು.

ಸೋಂಕಿತರು ಮಾಸ್ಕ್ ಧರಿಸುವುದು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದರಿಂದ ವೈರಸ್ನ ಪ್ರಸರಣ ತಡೆಯಬಹುದಾಗಿದೆ. ಸೋಂಕಿತರ ಜೊತೆ ನಿಕಟ ಸಂಪರ್ಕ ಮಾಡದಿರುವುದು, ಸೋಂಕಿತ ವ್ಯಕ್ತಿಯ ಮುಟ್ಟಿರುವ ವಸ್ತು ಅಥವಾ ಯಾವುದೇ ಮೇಲ್ಮೈಯಲ್ಲಿ ಸೋಂಕು ನಿವಾರಣೆ ಮಾಡುವುದರಿಂದ ವೈರಸ್ ಹರಡುವಿಕೆ ತಡೆಯಬಹುದು.

HMPV ರೋಗನಿರ್ಣಯ

ಕೇವಲ ರೋಗಲಕ್ಷಣಗಳ ಆಧಾರದ ಮೇಲೆ HMPV ರೋಗನಿರ್ಣಯವು ಸವಾಲಿನದ್ದಾಗಿರುತ್ತದೆ. ಏಕೆಂದರೆ, ಇದು ಆರ್ಎಸ್ಎ ಮತ್ತು ಇನ್ಫ್ಲುಯೆಂಜಾದಂತಹ ಇತರ ಉಸಿರಾಟ ಸಂಬಂಧಿತ ಸೋಂಕುಗಳನ್ನು ಹೋಲುತ್ತದೆ. ರೋಗ ಪತ್ತೆಹಚ್ಚಲು ಆರ್ಟಿಪಿಸಿಆರ್ ಪರೀಕ್ಷೆ ಪ್ರಮುಖ ಸಾಧನವಾಗಿದೆ. ಆ್ಯಂಟಿಜನ್ ಪರೀಕ್ಷೆಗಳು ತ್ವರಿತ ಫಲಿತಾಂಶಗಳನ್ನು ನೀಡುತ್ತವೆ.

ಭಾರತದಲ್ಲಿ ಐಸಿಎಂಆರ್ ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್ಪಿ)ನಿಂದ ಕಣ್ಗಾವಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

HMPV ಚಿಕಿತ್ಸೆ

ಪ್ರಸ್ತುತ, HMPVಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಚಿಕಿತ್ಸೆಯು ಸೋಂಕಿನ ತೀವ್ರತೆಯನ್ನು ಅವಲಂಬಿಸಿರುತ್ತದೆ. ಸೌಮ್ಯವಾದ ಪ್ರಕರಣಗಳಿಗೆ ಜ್ವರ ಮತ್ತು ಮೂಗು ಕಟ್ಟುವಿಕೆ ನಿರ್ವಹಿಸಲು ನೀಡುವ ಔಷಧ, ವಿಶ್ರಾಂತಿ, ಸಾಕಷ್ಟು ನೀರು ಕುಡಿದರೆ ಸಾಕಾಗುತ್ತದೆ.

ತೀವ್ರತರವಾದ ಪ್ರಕರಣಗಳಲ್ಲಿ, ವಿಶೇಷವಾಗಿ ನ್ಯುಮೋನಿಯಾ ಅಥವಾ ಬ್ರಾಂಕಿಯೋಲೈಟಿಸ್ನಲ್ಲಿ ಆಮ್ಲಜನಕ ಥೆರಪಿ ಮತ್ತು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರುತ್ತದೆ. ಗಮನಾರ್ಹವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕಾಗಬಹುದು. ಈ ವೈರಸ್ ಸೋಂಕಿತರಿಗೆ ಚಿಕಿತ್ಸೆ, ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಯುತ್ತಿವೆ.

HMPV ಸೋಂಕಿತರು ಗುಣವಾಗಲು ಎಷ್ಟು ಸಮಯ ಬೇಕು?

HMPV ಯ ಸೌಮ್ಯ ಪ್ರಕರಣಗಳು ಸಾಮಾನ್ಯವಾಗಿ ಕೆಲವು ದಿನಗಳಿಂದ ಒಂದು ವಾರದವರೆಗೆ ಇರುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಬಹುಶಃ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ತೀವ್ರ ಕೆಮ್ಮು ಮತ್ತು ಇತರೆ ಗುಣಲಕ್ಷಣಗಳಿರುವವರು ಗುಣವಾಗಲು ಬಹಳ ಸಮಯ ಬೇಕಾಗಬಹುದು.

ಜಾಗತಿಕ ಮತ್ತು ರಾಷ್ಟ್ರೀಯ ಮೇಲ್ವಿಚಾರಣೆ

ಇದು ಹೊಸ ರೋಗಕಾರಕವಲ್ಲ. ವಿಶ್ವದ ಹಲವೆಡೆ ಪತ್ತೆಯಾಗಿದೆ. ಭಾರತದಲ್ಲಿ ಐಸಿಎಂಆರ್ ಮತ್ತು ಐಡಿಎಸ್ಪಿ ಕಣ್ಗಾವಲು ನಡೆಸುತ್ತಿವೆ.

ಸರ್ಕಾರವು ತನ್ನ ಆರೋಗ್ಯ ಮೂಲಸೌಕರ್ಯ ಮತ್ತು ಕಣ್ಗಾವಲು ಜಾಲಗಳ ದೃಢತೆಯನ್ನು ಒತ್ತಿ ಹೇಳಿದೆ. ಈ ಮೂಲಕ ಹೊಸ ಸೋಂಕಿತರ ಪತ್ತೆ ಮತ್ತು ಚಿಕಿತ್ಸೆಗೆ ಸರ್ಕಾರ ಬದ್ಧವಾಗಿದೆ.

HMPV ಮತ್ತು COVID-19 ನಡುವಿನ ಹೋಲಿಕೆ ಮತ್ತು ವ್ಯತ್ಯಾಸ

ವೈರಸ್ನಿಂದಲೇ HMPV ಮತ್ತು COVID-19 ಉಂಟಾಗುತ್ತವೆ. ಎರಡೂ ಉಸಿರಾಟದ ರೋಗಕಾರಕಗಳಾಗಿವೆ. ಆದರೆ, ಅವುಗಳ ವೈರಾಲಜಿ, ಪ್ರಸರಣ ಮತ್ತು ಆರೋಗ್ಯದ ಪ್ರಭಾವದಲ್ಲಿ ಗಮನಾರ್ಹವಾಗಿ ಭಿನ್ನವಾಗಿವೆ

ಸಾಮ್ಯತೆಗಳು

ಎರಡೂ ಉಸಿರಾಟದ ಕಣಗಳು, ನೇರ ಸಂಪರ್ಕ ಮತ್ತು ಸೋಂಕಿನ ಕಣಗಳು ಬಿದ್ದಿರುವ ಮೇಲ್ಮೈಗಳ ಮೂಲಕ ಹರಡುತ್ತವೆ. ಇವೆರಡೂ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಂತಹ ಸೌಮ್ಯದಿಂದ ತೀವ್ರವಾದ ಉಸಿರಾಟದ ಸಮಸ್ಯೆಯಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಶಿಶುಗಳು, ವೃದ್ಧರು, ಮತ್ತು ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುವವರಿಗೆ ಅಪಾಯಕಾರಿ.

ವ್ಯತ್ಯಾಸ

COVID-19 ರೋಗಲಕ್ಷಣಗಳಲ್ಲಿ ರುಚಿ ಮತ್ತು ವಾಸನೆಯ ನಷ್ಟ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಬಹುಅಂಗಾಂಗ ವೈಫಲ್ಯದಂತಹ ಗಂಭೀರ ಸಮಸ್ಯೆ ಎದುರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.