ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಾಂಶದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಾದುದು ಇಂದು ಮುಖ್ಯವಾಗಿದೆ. ಇದು ರಕ್ತದಲ್ಲಿ ಸೇರಿಕೊಂಡ ಕೊಬ್ಬಿನಾಂಶವಾಗಿದ್ದು, ಎರಡು ರೀತಿಯ ಕೊಲೆಸ್ಟ್ರಾಲ್ ಇದೆ. ಮೊದಲನೆಯದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಎರಡನೆಯದು ಕೆಟ್ಟ ಕೊಬ್ಬಿನಾಂಶವೆಂದು ಹೇಳಲಾಗುತ್ತದೆ. ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಈ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಾಂಶದ ಕುರಿತು ನೀವು ತಿಳಿಯಲೇಬೇಕಾದ ಸಂಗತಿಗಳು ಇಲ್ಲಿವೆ.

ಕೊಲೆಸ್ಟ್ರಾಲ್ ಎಂದರೇನು?

ಕೊಬ್ಬಿನಾಂಶವು ಕೇವಲ ನಾವು ಸೇವಿಸುವ ಆಹಾರದಿಂದ ರಚನೆಯಾಗುವಂತದ್ದಲ್ಲ, ನಮ್ಮ ದೇಹದಲ್ಲಿ ನೈಸರ್ಗಿಕವಾಗಿಯೂ ಉತ್ಪತ್ತಿಯಾಗುವ ಅಂಶವಾಗಿದೆ. ಇದು ಹಾರ್ಮೋನ್ ಉತ್ಪಾದನೆ, ಜೀವಕೋಶ ಪೊರೆ ರಚನೆಗೆ ಇದು ಸಹಕಾರಿ. ಆದರೆ, ಕೊಲೆಸ್ಟ್ರಾಲ್ ಮಟ್ಟದಲ್ಲಿ ಹೆಚ್ಚು ಕಡಿಮೆಯಾದರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಕೊಲೆಸ್ಟ್ರಾಲ್ನಲ್ಲಿ ಎರಡು ವಿಧಗಳಿವೆ. ಅವುಗಳು ಹೀಗಿವೆ:

ಎಲ್ಡಿಎಲ್ (Low-Density Lipoprotein) ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಅಪಧಮನಿಯಲ್ಲಿ ಪ್ಲೇಕ್ ಸಂಗ್ರಹಕ್ಕೆ ಕಾರಣವಾಗಬಹುದು. ಇದು ಹೃದಯ ಮತ್ತು ಇತರ ಅಂಗಗಳಿಗೆ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೆಚ್ಡಿಎಲ್ (High-Density Lipoprotein) ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಇದು ಅಪಧಮನಿಯಲ್ಲಿರುವ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಡಿಮೆ ಮಾಡಲು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ.

ಈ ಎರಡು ರೀತಿಯ ಕೊಲೆಸ್ಟ್ರಾಲ್ ನಿಯಂತ್ರಿಸುವಿಕೆಯು ಹೃದಯ ರಕ್ತನಾಳದ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ನೆರವಾಗಲಿದೆ.

ಕೊಲೆಸ್ಟ್ರಾಲ್ ನಿಯಂತ್ರಿಸುವುದು ಹೇಗೆ? ಅನುಸರಿಸಬೇಕಾದ ಕ್ರಮಗಳು ಇಂತಿವೆ...

ವ್ಯಕ್ತಿ ತೆಳ್ಳಗಿರುವುದು ಅಥವಾ ದಪ್ಪ ಇರುವುದರ ಮೂಲಕ ದೇಹದ ಕೊಬ್ಬಿನಾಂಶ ನಿರ್ಧರಿತವಾಗುವುದಿಲ್ಲ. ಬದಲಿಗೆ ತೆಳ್ಳಗಿರುವವರಲ್ಲಿಯೂ ಕೂಡಾ ಹೆಚ್ಚಿನ ಕೊಬ್ಬಿನಾಂಶ ಕಂಡುಬರಬಹುದು. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಉತ್ತಮ ಆರೋಗ್ಯ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ದೇಹದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು ಇಲ್ಲಿ ತಿಳಿಯಿರಿ.

ಸಮತೋಲಿತ ಆಹಾರ ಕ್ರಮವನ್ನು ಪಾಲಿಸುವುದು.

ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು.

ಸಂಸ್ಕರಿಸಿದ ಮತ್ತು ಕೊಬ್ಬಿನ ಅಂಶವುಳ್ಳ ಆಹಾರ ಸೇವನೆಯನ್ನು ಬಿಡುವುದು.

ಸಂಸ್ಕರಿಸಿದ ಮಾಂಸ, ಕೊಬ್ಬಿನಾಂಶ ಪೂರಿತ ಹಾಲಿನ ಉತ್ಪನ್ನಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ನಿಲ್ಲಿಸುವುದು. ಬದಲಿಗೆ ಹಣ್ಣು, ತರಕಾರಿ, ಬೀಜಗಳು, ಆಲಿವ್ ತೈಲ ಮತ್ತು ಮೊಸರು ಸೇವನೆ ಒಳಿತು.

ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಮದ್ಯಪಾನ ಸೇವನೆಯಲ್ಲಿ ಇತಿಮಿತಿ ಇರಲಿ .

ಕೊಲೆಸ್ಟ್ರಾಲ್ ಹೆಚ್ಚಳದಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು

ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು

ಪಾರ್ಶ್ವವಾಯು

ನರ ಸಂಬಂಧಿ ಸಮಸ್ಯೆಗಳು

ರಕ್ತ ಸಂಚಾರ ಕ್ರಿಯೆಯಲ್ಲಿ ಹಾನಿ

ಈ ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸಲು ವೈದ್ಯರನ್ನು ಭೇಟಿ ಮಾಡುವುದು. ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ಮಾಡಿಸುವುದು ಹಾಗೂ ಅಗತ್ಯವಿದ್ದರೆ ಚಿಕಿತ್ಸೆಯನ್ನು ಪಡೆಯುವುದು ಅಥವಾ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಅಗತ್ಯ.

ಆರೋಗ್ಯ | ಕೊಲೆಸ್ಟ್ರಾಲ್ನ ಲಕ್ಷಣಗಳೇನು?

ಕೊಲೆಸ್ಟ್ರಾಲ್ನ ಆರಂಭಿಕ ರೋಗಲಕ್ಷಣಗಳನ್ನು ತಿಳಿಯುವುದು ಕಷ್ಟ, ಅದೊಂದು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ. ಆದರೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಅದೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಕೆಳಗೆ ನೀಡಲಾಗಿರುವ ಲಕ್ಷಣಗಳು ಕಂಡುಬಂದಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಇದೆ ಎಂದು ತಿಳಿಯಬಹುದು.

ಓಡುವಾಗ ಶಕ್ತಿ ಕಡಿಮೆಯಾಗುವುದು: ದೇಹದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತುಂಬಿರುವುದರಿಂದ ರಕ್ತದ ಹರಿವಿಗೆ ತೊಡಕಾಗುತ್ತದೆ. ಇದರಿಂದ ಶಕ್ತಿ ಕುಂದಬಹುದು.

ಪಾದಗಳಲ್ಲಿ ನೋವು: ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಇದು ಫೆರಿಫೆರಲ್ ಆರ್ಟರಿ ಡಿಸೀಸ್ನ ಸೂಚಕವಾಗಬಹುದು.

ಹೃದಯ ಸಂಬಂಧಿ ಸಮಸ್ಯೆಗಳು: ದಿಢೀರನೆ ಎದೆನೋವು, ಶ್ವಾಸಕೋಶದ ತೊಂದರೆಗಳು ಮತ್ತು ಹೃದಯಾಘಾತ ಕಾಣಿಸಿಕೊಳ್ಳುವುದು ಕೂಡ ಕೊಲೆಸ್ಟ್ರಾಲ್ನ ಪ್ರಭಾವ ಎಂದು ಹೇಳಬಹುದು.

ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸುವುದು ಹೇಗೆ?

ಸಾಮಾನ್ಯವಾಗಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ರಕ್ತ ಪರೀಕ್ಷೆಯ ಮೂಲಕವೇ ಪತ್ತೆ ಹಚ್ಚಲು ಸಾಧ್ಯ. ಈ ನಿಟ್ಟಿನಲ್ಲಿ ವೈದ್ಯರು ವಿವಿಧ ಪರೀಕ್ಷೆಗಳನ್ನು ಮಾಡಿಸಲು ಸಲಹೆ ನೀಡುತ್ತಾರೆ. ಅವುಗಳೆಂದರೆ

ಲಿಪಿಡ್ ಪ್ರೊಫೈಲ್: ಈ ಪರೀಕ್ಷೆಯ ಮೂಲಕ ಒಟ್ಟಾರೆ ಕೊಲೆಸ್ಟ್ರಾಲ್, ಎಲ್ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್), ಹೆಚ್ಡಿಎಲ್ (ಒಳ್ಳೆಯ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಪರೀಕ್ಷಿಸುತ್ತದೆ.

ಎಲ್ಡಿಎಲ್ ಪಾರ್ಟಿಕಲ್ ಟೆಸ್ಟಿಂಗ್: ಈ ಪರೀಕ್ಷೆಯು ಕೊಲೆಸ್ಟ್ರಾಲ್ ಕಣಗಳ ಗಾತ್ರ ಮತ್ತು ಸಂಖ್ಯೆಯನ್ನು ಪರಿಶೀಲಿಸುತ್ತದೆ.

ಸಿಎಟಿ ಸ್ಕ್ಯಾನ್: ಹೃದಯ ಮತ್ತು ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ನಿಂದ ತೊಂದರೆ ಉಂಟಾಗಿದಲ್ಲಿ ಈ ಪರೀಕ್ಷೆ ಉಪಯುಕ್ತವಾಗಲಿದೆ.

ಸೂಚನೆ: ಕೊಲೆಸ್ಟ್ರಾಲ್ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಒಳಿತು. ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಅಗತ್ಯ ಔಷಧಿಗಳ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುವುದು ಮುಖ್ಯ. ಮುಖ್ಯವಾಗಿ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ಅಥವಾ ಡಯಟ್ ಅನ್ನು ಅನುಸರಿಸದಿರಿ.

ಲೇಖಕರು: ತಜ್ಞರು, ವಾಸವಿ ಆಸ್ಪತ್ರೆ, ಬೆಂಗಳೂರು
.ಆರೋಗ್ಯ | ಕೊಲೆಸ್ಟ್ರಾಲ್ನ ಲಕ್ಷಣಗಳೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.