ನವದೆಹಲಿ: ಭಾರತ–ಪಾಕಿಸ್ತಾನ ನಡುವಣ ಸಂಪರ್ಕದ ಕೊಂಡಿಯಾಗಿದ್ದ ಅಟ್ಟಾರಿ– ವಾಘಾ ಗಡಿಯನ್ನು ಗುರುವಾರ ಸಂಪೂರ್ಣ ಮುಚ್ಚಲಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರದ ಕ್ರಮ ಕೈಗೊಂಡಿದ್ದ ಭಾರತ, ಪಾಕಿಸ್ತಾನದ ಪ್ರಜೆಗಳಿಗೆ ನೀಡಿದ್ದ ವೀಸಾ ರದ್ದುಗೊಳಿಸಿತ್ತು. ಏ.29ರ ಒಳಗಾಗಿ ದೇಶ ತೊರೆಯುವಂತೆಯೂ ಸೂಚಿಸಿತ್ತು. ಆ ಬಳಿಕ ಎರಡೂ ಕಡೆಯ ಜನರು ಈ ಗಡಿ ಮೂಲಕ ಸ್ವದೇಶಕ್ಕೆ ಮರಳಲು ಮುಂದಾದ ಕಾರಣ ಒಂದು ವಾರ ಗಡಿಯಲ್ಲಿ ನೂಕುನುಗ್ಗಲು ಉಂಟಾಗಿತ್ತು.

ಗಡಿಯನ್ನು ಈಗ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಗುರುವಾರ ಎರಡೂ ದೇಶಗಳ ಯಾರೂ ಇನ್ನೊಂದು ದೇಶಕ್ಕೆ ಪಯಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ 125 ಪ್ರಜೆಗಳು ವಾಘಾ ಗಡಿ ಮೂಲಕ ಭಾರತವನ್ನು ಬುಧವಾರ ತೊರೆದರು. ಇದರೊಂದಿಗೆ ಕಳೆದ ಏಳು ದಿನಗಳಲ್ಲಿ ಭಾರತ ತೊರೆದ ಪಾಕಿಸ್ತಾನಿಯರ ಸಂಖ್ಯೆ 911ಕ್ಕೆ ಏರಿಕೆಯಾಗಿದೆ. ಪಾಕಿಸ್ತಾನದ ವೀಸಾ ಹೊಂದಿರುವ ಭಾರತದ 15 ಪ್ರಜೆಗಳು ಕೂಡಾ ಬುಧವಾರ ಪಾಕಿಸ್ತಾನ ಪ್ರವೇಶಿಸಿದರು.

ಭಾರತದ 152 ಪ್ರಜೆಗಳು ಮತ್ತು ಭಾರತದಲ್ಲಿ ತಂಗಲು ದೀರ್ಘಾವಧಿ ವೀಸಾ ಹೊಂದಿರುವ ಪಾಕಿಸ್ತಾನದ 73 ಪ್ರಜೆಗಳು ಬುಧವಾರ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇದರೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದವರ ಒಟ್ಟು ಸಂಖ್ಯೆ 1,617ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.