ಬಾಬರಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಸಮುದಾಯ ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದೆ. ಈ ಪ್ರಕರಣ ನಂತರ ಮತ್ತೆ ಅಂತಹ ವ್ಯಾಜ್ಯಗಳು ಎದುರಾಗುವುದಿಲ್ಲ ಎಂದು ನಾವು ಭಾವಿಸಿದ್ದೆವು. ದುರದೃಷ್ಟವಶಾತ್ ಪದೇಪದೇ ಇಂತಹ ವಿಚಾರಗಳು ತಲೆ ಎತ್ತುತ್ತಿವೆ. ಉತ್ತರ ಪ್ರದೇಶದ ಸಂಭಲ್ ಘಟನೆ ನಮ್ಮ ಕಣ್ಣ ಮುಂದೆ. ಇದು ನಿಲ್ಲಬೇಕು
– ಸೈಯದ್ ಸರ್ವಾರ್ ಚಿಶ್ತಿ ಅಂಜುಮಾನ್ ಸೈಯದ್ ಜದ್ಗಾನ್ ಕಾರ್ಯದರ್ಶಿ
ಈ ಬೆಳವಣಿಗೆ ಆತಂಕಕಾರಿ. ಈ ರೀತಿ ಯಾಕೆ ಮಾಡಲಾಗುತ್ತಿದೆ? ರಾಜಕೀಯ ಲಾಭಕ್ಕಾಗಿ ದೇಶವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಾಗುತ್ತಿದೆ
– ಕಪಿಲ್ ಸಿಬಲ್,ರಾಜ್ಯಸಭಾ ಸಂಸದ
ಅಜ್ಮೀರ್ ದರ್ಗಾ ಸಮೀಕ್ಷೆ ಕೋರಿ ಅರ್ಜಿ ಸಲ್ಲಿಸಿರುವುದು ಪೂಜಾ ಸ್ಥಳಗಳ ಕಾಯ್ದೆಯ ಉಲ್ಲಂಘನೆ. ಉರುಸು ಸಂದರ್ಭದಲ್ಲಿ ದರ್ಗಾಕ್ಕೆ ಚಾದರ್ ಸಮರ್ಪಿಸುವ ಸಂಪ್ರದಾಯವನ್ನು ಜವಾಹರಲಾಲ್ ನೆಹರೂ ಆರಂಭಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಸಂಪ್ರದಾಯ ಪಾಲನೆ ಮಾಡುತ್ತಿದ್ದಾರೆ
–ಮುಜಾಫರ್ ಭಾರ್ತಿ, ಯುನೈಟೆಡ್ ಮುಸ್ಲಿಂ ಫೋರಂ–ರಾಜಸ್ಥಾನ (ಯುಎಂಎಫ್‌ಆರ್) ಅಧ್ಯಕ್ಷ
ಅಜ್ಮೀರ್‌ದಲ್ಲಿ 800 ವರ್ಷಗಳಿಂದ ದರ್ಗಾ ಇದೆ. ಈಗ ಪೂಜಾಸ್ಥಳಗಳ ಕಾಯ್ದೆ ಏನಾಗಲಿದೆ? ಇಂಥ ನಡೆಗಳು ಯಾವಾಗ ನಿಲ್ಲುತ್ತವೆ? ಇದು ದೇಶಕ್ಕೆ ಒಳ್ಳೆಯದಲ್ಲ. ಅರ್ಜಿ ಹಾಕುವವರು ನೇರವಾಗಿ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಆರ್‌ಎಸ್‌ಎಸ್‌ಗೆ ಸಂಬಂಧ ಹೊಂದಿದವರಾಗಿದ್ದಾರೆ
–ಅಸಾದುದ್ದೀನ್ ಒವೈಸಿ, ಎಐಎಂಐಎಂ ಸಂಸದ
ಈ ವಿಚಾರವಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದ್ದು ಸಮರ್ಥನೀಯವಲ್ಲ. ಈ ಅರ್ಜಿ ಪೂಜಾ ಸ್ಥಳಗಳ ಕಾಯ್ದೆ–1991ರಲ್ಲಿನ ಅವಕಾಶಗಳ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಬೇಕು