ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಚಳಿಯಿಂದ ಜನ ತತ್ತರಿಸಿದ್ದಾರೆ.

ಅಯನಗರ ಹಾಗೂ ಪುಸ ಪ್ರದೇಶದಲ್ಲಿ ಶೀತಗಾಳಿ ಇದ್ದು ಅಲ್ಲಿ ತಾಪಮಾನ ಕ್ರಮವಾಗಿ 3.8 ಹಾಗೂ 3.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಋತುವಿನಲ್ಲಿ ದಾಖಲಾದ ಕನಿಷ್ಠ ತಾಪಮಾನ.
.ದೆಹಲಿ ಚಳಿ; ತುಮಕೂರು ತೆಂಗಿಗೂ ನಡುಕ.
ಬುಧವಾರ ದೆಹಲಿಯ ಕನಿಷ್ಠ ತಾಪಮಾನ 4.9 ಡಿಗ್ರಿ ಸೆಲ್ಸಿಯಸ್ ಇತ್ತು. ಡಿಸೆಂಬರ್ ಆರಂಭದಲ್ಲಿ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು 14 ವರ್ಷದಲ್ಲಿ ದಾಖಲಾದ ಕನಿಷ್ಠ ತಾಪಮಾನ ಎಂದು ಭಾರತೀಯ ಹವಾಮಾನ ಕೇಂದ್ರ ತಿಳಿಸಿದೆ.

ದತ್ತಾಂಶಗಳ ಪ್ರಕಾರ 1987 ಡಿಸೆಂಬರ್ 6 ರಂದು 4.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈವರೆಗಿನ ಕನಿಷ್ಠ.

ಸೂರ್ಯ ಏರುತ್ತಿದ್ದಂತೆಯೇ ತಿಳಿಯಾಕಾಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಗರಿಷ್ಠ ತಾಪಮಾನ 23 ಡಿಗ್ರಿ ಇರಬಹುದು ಎಂದು ಅಂದಾಜಿಸಿದೆ.
.ದೆಹಲಿ, ಪಂಜಾಬ್ನಲ್ಲಿ ತೀವ್ರ ಚಳಿ, ಮಂಜು ಮುಸುಕುವ ಸಾಧ್ಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.