ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ದೇಶದ ಎಲ್ಲಾ ಬಂದರುಗಳು, ಟರ್ಮಿನಲ್ಗಳು ಮತ್ತು ಹಡಗುಗಳಲ್ಲಿ ಭದ್ರತೆ ಹೆಚ್ಚಿಸಿದೆ ಎಂದು ವರದಿಯಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವ್ಯವಸ್ಥೆಗಳ ಸುರಕ್ಷತೆಯನ್ನು ಪರಿಶೀಲಿಸಲು ಮತ್ತು ಸೈಬರ್ ದಾಳಿ ಬೆದರಿಕೆಗಳನ್ನು ತಡೆಗಟ್ಟಲು ಅಥವಾ ತಗ್ಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳಿಗೆ (ಸಿಐಎಸ್ಒ) ಡಿಜಿಸಿಎ ಸೂಚಿಸಿದೆ.

ಭದ್ರತಾ ವ್ಯವಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ MARSEC ಹಂತ-1ರಿಂದ MARSEC ಹಂತ-2ಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಷ್ಟ್ರೀಯ ಕಡಲ ಭದ್ರತೆಯ ಹಿತದೃಷ್ಟಿಯಿಂದ ಭದ್ರತಾ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಈ ನಿರ್ದೇಶನಗಳನ್ನು ಅತ್ಯಂತ ತುರ್ತು ಮತ್ತು ಆದ್ಯತೆಯೊಂದಿಗೆ ಪರಿಗಣಿಸಬೇಕು. ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಕ್ಯಾಪ್ಟನ್ ನಿತಿನ್ ಮುಖೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಕರಾವಳಿ, ಬಂದರುಗಳು, ಟರ್ಮಿನಲ್ಗಳು ಮತ್ತು ಹಡಗುಗಳಿಗೆ ಎದುರಾಗಬಹುದಾದ ಸಂಭಾವ್ಯ ಬೆದರಿಕೆಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಮುಖೇಶ್ ಹೇಳಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತದ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಗಡಿಯಲ್ಲಿ ಎರಡೂ ದೇಶಗಳ ನಡುವೆ ಸೇನಾ ಸಂಘರ್ಷ ತೀವ್ರಗೊಂಡಿದೆ.
.India-Pakistan Tensions: ಗಡಿಯಲ್ಲಿ ಸೇನಾ ಸಂಘರ್ಷ ತೀವ್ರ.India–Pak Tension |ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ: ಸರ್ಕಾರಿ ನೌಕರರ ರಜೆ ರದ್ದು.India–Pakistan Tensions | ಪಾಕ್ ದಾಳಿ ಹಿಮ್ಮೆಟ್ಟಿಸಿದ್ದೇವೆ: ಭಾರತೀಯ ಸೇನೆ.ಭಾರತದ ಮೇಲಿನ ಡ್ರೋನ್ ದಾಳಿ ಅಲ್ಲಗಳೆದ ಪಾಕ್: ಆಧಾರರಹಿತ ಆರೋಪ ಎಂದು ವಾದ.India-Pakistan Tensions: ಗಡಿ ಭದ್ರತಾ ಪಡೆಗಳ ಮುಖ್ಯಸ್ಥರ ಜತೆ ಶಾ ಮಾತುಕತೆ.India-Pakistan Tensions: ಪಾಕ್ ದಾಳಿ ಯತ್ನ: ಜಮ್ಮುವಿಗೆ ದೌಡಾಯಿಸಿದ CM ಒಮರ್.India Pakistan Tensions: ಪಾಕ್ನ ಎಫ್–16 ಹೊಡೆದುರುಳಿಸಿದ IAF.India-Pakistan tensions: ಅಮೆರಿಕ ಮಧ್ಯಸ್ಥಿಕೆ ನಯವಾಗಿ ತಿರಸ್ಕರಿಸಿದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.