ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣದಲ್ಲಿ ಉಗ್ರರು ಮಂಗಳವಾರ (ಏಪ್ರಿಲ್ 22ರಂದು) ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ, ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನತೆ ತೀವ್ರಗೊಂಡಿದೆ. ದಾಳಿಯಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 26 ಪ್ರವಾಸಿಗರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ದಾಳಿಯನ್ನು ಭಾರತ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಸಮುದಾಯವೂ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಕೃತ್ಯವೆಸಗಿದ ಹಂತಕರು ಎಲ್ಲೇ ಅಡಗಿದ್ದರೂ ಬೇಟೆಯಾಡುವುದಾಗಿ ಹೇಳಿದ್ದಾರೆ. ಹಾಗೆಯೇ, ಭಾರತವು ಉಗ್ರರನ್ನು ಹತ್ತಿಕ್ಕುವ ಪ್ರತಿಜ್ಞೆ ಮಾಡುತ್ತಿದ್ದಂತೆ, ಪಾಕಿಸ್ತಾನ ಸೇನೆ ಎಚ್ಚೆತ್ತುಕೊಂಡಿದೆ. ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ.
.Pahalgam Terror Attack: ತನಿಖೆ ಕೈಗೆತ್ತಿಕೊಂಡ ಎನ್ಐಎ.Pahalgam Terror Attack: ಮತ್ತೆ ಮೂವರು ಶಂಕಿತ ಉಗ್ರರ ಮನೆಗಳು ಧ್ವಂಸ.
ಉಭಯ ದೇಶಗಳ ನಡುವಣ ಬಿಕ್ಕಟ್ಟು ಬಿಗಡಾಯಿಸುತ್ತಿರುವ ಹೊತ್ತಿನಲ್ಲಿ, ಎರಡೂ ರಾಷ್ಟ್ರಗಳ ಸೇನೆಗಳ ಬಲಾಬಲ ಹೇಗಿದೆ ಎಂಬುದನ್ನು ನೋಡೋಣ.

* ಮಿಲಿಟರಿ ಶ್ರೇಯಾಂಕ
'ಗ್ಲೋಬಲ್ ಫೈರ್ಪವರ್ ಇಂಡೆಕ್ಸ್' ಮಾಹಿತಿ ಪ್ರಕಾರ, ಯಾವುದೇ ದೇಶದ ಯುದ್ಧ ಸಾಮರ್ಥ್ಯವನ್ನು ನಿರ್ಧರಿಸಲು 60 ವಿವಿಧ ಅಂಶಗಳನ್ನು ಪರಿಗಣಿಸಲಾಗುತ್ತದೆ. ಆ ಎಲ್ಲ ಅಂಶಗಳನ್ನು ಪರಿಗಣಿಸಿ ನೋಡುವುದಾದರೆ, ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ, 12ರಲ್ಲಿದೆ.

* ವಾಯು ಸೇನೆ ಸಾಮರ್ಥ್ಯ
ಒಟ್ಟು 2,223 ಮಿಲಿಟರಿ ವಿಮಾನಗಳನ್ನು ಹೊಂದಿರುವ ಭಾರತವು, ಬಲಿಷ್ಠ ವಾಯುಸೇನೆಯುಳ್ಳ ರಾಷ್ಟ್ರಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಅಮೆರಿಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

1,399 ವಿಮಾನಗಳನ್ನು ಹೊಂದಿರುವ ಪಾಕಿಸ್ತಾನ, ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಭಾರತದ ಬಳಿ 513 ಯುದ್ಧ ವಿಮಾನಗಳಿದ್ದು, ಪಾಕಿಸ್ತಾನ 328 ಯುದ್ಧ ವಿಮಾನಗಳನ್ನು ಹೊಂದಿದೆ.

* ನೌಕಾಪಡೆ ಸಾಮರ್ಥ್ಯ
239 ನೌಕೆಗಳ ಬಲದೊಂದಿಗೆ ಭಾರತವು ಬಲಿಷ್ಠ ನೌಕಾಪಡೆಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, 121 ನೌಕೆಗಳನ್ನು ಹೊಂದಿರುವ ಪಾಕಿಸ್ತಾನ 27ನೇ ಸ್ಥಾನದಲ್ಲಿದೆ.

ಭಾರತದ ಬಳಿಕ ಎರಡು ಯುದ್ಧವಿಮಾನವಾಹಕ ನೌಕೆಗಳೂ ಇವೆ. ಪಾಕಿಸ್ತಾನದ ಬಳಿ ಈ ಸಾಮರ್ಥ್ಯವಿಲ್ಲ. ಅದೇರೀತಿ, ಪಾಕ್ ಬಳಿ ಯಾವುದೇ ವಿಧ್ವಂಸಕ ನೌಕೆಗಳೂ ಇಲ್ಲ. ಆದರೆ, ಭಾರತದ ಬಳಿ ಇಂತಹ 13 ನೌಕೆಗಳಿವೆ.

ಭಾರತವು 18 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಪಾಕ್ ಬಳಿ 8 ಇವೆ.
.Pahalgam Terror Attack | ಭದ್ರತೆ, ಸಹಜಸ್ಥಿತಿ: ನೂರಾರು ಪ್ರಶ್ನೆ.Pahalgam Terror Attack | ಪಾಕ್ ಪ್ರಜೆಗಳಿಗೆ ನೀಡಿದ್ದ 14 ಬಗೆಯ ವೀಸಾ ರದ್ದು.
* ಸೈನಿಕರು
14.55 ಲಕ್ಷ ಯೋಧರನ್ನು ಹೊಂದಿರುವ ಭಾರತ ಜಾಗತಿಕವಾಗಿ ಹೆಚ್ಚು ಸೈನಿಕರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 6.54 ಲಕ್ಷ ಸೈನಿಕರನ್ನು ಹೊಂದಿರುವ ಪಾಕಿಸ್ತಾನ 7ನೇ ಸ್ಥಾನದಲ್ಲಿದೆ.

ಭಾರತದ ಅರೆಸೇನಾ ಪಡೆಗಳಲ್ಲಿ 25.27 ಲಕ್ಷ ಯೋಧರಿದ್ದು, ಪಾಕ್ ಕೇವಲ 5 ಲಕ್ಷ ಸೈನಿಕರನ್ನು ಹೊಂದಿದೆ.

* ರಕ್ಷಣಾ ಬಜೆಟ್
ಭಾರತವು 2025–26ನೇ ಸಾಲಿನ ಬಜೆಟ್ನಲ್ಲಿ ರಕ್ಷಣೆಗೆ ₹ 6,81,210 ಕೋಟಿ ಮೀಸಲಿಟ್ಟಿದೆ. ಪಾಕಿಸ್ತಾನ ಈ ವರ್ಷ ₹ 2,28,100 ಕೋಟಿ ಮೀಸಲಿಟ್ಟಿದೆ ಎನ್ನಲಾಗಿದೆ.

* ಶಸ್ತ್ರಾಸ್ತ್ರ ಪೂರೈಕೆದಾರ ದೇಶಗಳು
ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರ ರಷ್ಯಾ. ದೇಶದ ಸೇನೆಯಲ್ಲಿ ಬಳಸುವ ಶಸ್ತ್ರಾಸ್ತ್ರಗಳು ಹೆಜ್ಜಾಗಿ ರಷ್ಯಾ ಮತ್ತು ಸೋವಿಯತ್ ಮೂಲದವು. ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ದೇಶೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳೂ ಬಳಕೆಯಲ್ಲಿವೆ. ಫ್ರಾನ್ಸ್, ಇಸ್ರೇಲ್ ಮತ್ತು ಅಮೆರಿಕದಿಂದಲೂ ಶ್ರಸ್ತ್ರಾಸ್ತ್ರ ಪೂರೈಕೆಯಾಗುತ್ತವೆ.

ಪಾಕಿಸ್ತಾನಕ್ಕೆ ಚೀನಾ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿದ್ದು, ಫ್ರಾನ್ಸ್, ರಷ್ಯಾ, ಟರ್ಕಿ ಮತ್ತು ಕೆನಡಾದಿಂದಲೂ ಶಸ್ತ್ರಾಸ್ತ್ರ ರವಾನೆಯಾಗುತ್ತವೆ. ಪಾಕಿಸ್ತಾನದಲ್ಲೂ ರಕ್ಷಣಾ ಸಾಧನಗಳ ತಯಾರಿಕಾ ಉದ್ಯಮಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.