ನವದೆಹಲಿ: ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ಮತ್ತು ಛತ್ತೀಸಗಢದ 70 ಸ್ಥಾನಗಳಿಗೆ 2ನೇ ಹಂತದ ಚುನಾವಣೆಗೆ ಇಂದು (ಶುಕ್ರವಾರ) ಮತದಾನ ನಡೆಯಲಿದೆ. ಹಿಂದಿ ಹೃದಯಭಾಗದ ಈ ಎರಡೂ ರಾಜ್ಯಗಳಲ್ಲಿ, ಬಹುತೇಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ಇದೆ.

ಮತದಾನ ಆರಂಭ:

ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಆದರೆ, ಬಾಲಾಘಾಟ್ ಜಿಲ್ಲೆಯ ಬೈಹಾರ್, ಲಾಂಜಿ ಮತ್ತು ಪಾರ್ಸ್ವರ ವಿಧಾನಸಭಾ ಕ್ಷೇತ್ರಗಳು ಮತ್ತು ಮಂಡ್ಲಾ ಮತ್ತು ದಿಂಡೋರಿ ಜಿಲ್ಲೆಗಳ ಕೆಲ ಬೂತ್ಗಳಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಮತದಾನ ನಡೆಯಲಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸೇರಿದಂತೆ ಉಭಯ ಪಕ್ಷಗಳ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ.
.Madhya Pradesh Elections: ಮಧ್ಯಪ್ರದೇಶ ಕೇಂದ್ರ ಭಾಗದಲ್ಲಿ ಯಾರಿಗೆ ಮಣೆ?.
ಸುಮಾರು 5.59 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಇದರಲ್ಲಿ 2.87 ಕೋಟಿ ಪುರುಷ ಮತ್ತು 2.71 ಕೋಟಿ ಮಹಿಳಾ ಮತದಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2ನೇ ಹಂತದ ಮತದಾನ:

ಛತ್ತೀಸಗಢ ವಿಧಾನಸಭೆ ಚುನಾವಣೆಗೆ ಎರಡನೇ ಹಂತದಲ್ಲಿ 70 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ರಾಜ್ಯದ ಒಟ್ಟು 90 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ನ.7 ರಂದು ಮತದಾನ ನಡೆಯಿತು.
.ಛತ್ತೀಸಗಢ ಚುನಾವಣೆ | ಬಿಜೆಪಿ ಅಭ್ಯರ್ಥಿಯ ವಾಹನದಿಂದ ₹11.50 ಲಕ್ಷ ನಗದು ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.