ಮುಂಬೈ: ‘ಮುಂಬೈ ಕರಾವಳಿಯಲ್ಲಿ ಎಂಜಿನ್ ತಪಾಸಣೆ ನಡೆಸುತ್ತಿದ್ದ ನೌಕಾಪಡೆಯ ಗಸ್ತು ದೋಣಿಯು ಪ್ರವಾಸಿಗರಿದ್ದ ದೋಣಿಗೆ ಡಿಕ್ಕಿ ಹೊಡೆದ ಘಟನೆ ನಡೆದು ದಿನಕಳೆದಿದ್ದರೂ ವ್ಯಕ್ತಿ ಹಾಗೂ ಮಗು ಸೇರಿ ಇಬ್ಬರು ಪ್ರವಾಸಿಗರು ಇದುವರೆಗೂ ಪತ್ತೆಯಾಗಿಲ್ಲ’ ಎಂದು ಪೊಲೀಸರು ಗುರುವಾರ ತಿಳಿಸಿದರು.

‘ಪ್ರವಾಸಿಗರ ದೋಣಿಯಲ್ಲಿ ಒಟ್ಟು 113 ಮಂದಿ ಇದ್ದರು. ಇವರಲ್ಲಿ 13 ಮಂದಿ ಮೃತಪಟ್ಟರು, ಗಾಯಗೊಂಡ ಇಬ್ಬರು ಸೇರಿ ಒಟ್ಟು 98 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ, ಇನ್ನೂ ಇಬ್ಬರು ಪತ್ತೆಯಾಗಿಲ್ಲ. ಇವರನ್ನು 43 ವರ್ಷದ ಹಂಸರಾಜ್ ಭಾಟಿ ಹಾಗೂ 7 ವರ್ಷದ ಜೊಹಾನ್ ಮೊಹಮ್ಮದ್ ನಿಸಾರ್ ಅಹಮ್ಮದ್ ಪಠಾಣ್ ಎಂದು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ನೌಕಾಪಡೆ ಹಾಗೂ ಕರವಾಳಿ ಪಡೆಗಳ ಸಹಕಾರದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.