ಪ್ರಜಾಪ್ರಭುತ್ವವನ್ನು ರಕ್ಷಿಸಿದೆ
ಸುಪ್ರೀಂ ಕೋರ್ಟ್‌ನ ಈ ತೀರ್ಪು ಚುನಾವಣಾ ಅಕ್ರಮದಲ್ಲಿ ತೊಡಗಿರುವ ‘ನಿರಂಕುಶ ಪ್ರಭುತ್ವ’ದ ಬಿಜೆಪಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಿದೆ. ಚಂಡೀಗಢ ಮೇಯರ್ ಆಯ್ಕೆ ಚುನಾವಣೆಯು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಮೋದಿ–ಶಾ ಅವರ ಸಂಚಿನ ತುಣುಕಷ್ಟೆ. ಪ್ರಜಾಪ್ರಭುತ್ವ ಕವಲುದಾರಿಯಲ್ಲಿದೆ. ಸಂವಿಧಾನವನ್ನು ರಕ್ಷಿಸಲು ಎಲ್ಲ ಭಾರತೀಯರು ಒಟ್ಟಾಗಿ ಹೋರಾಡಬೇಕಿದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ‘ಸಂಕಷ್ಟದ ಸಂದರ್ಭ’ದಲ್ಲಿ ಸುಪ್ರಿಂ ಕೋರ್ಟ್ ಪ್ರಜಾಪ್ರಭುತ್ವವನ್ನು ರಕ್ಷಿಸಿದೆ. ಇದೊಂದು ಐತಿಹಾಸಿಕ ತೀರ್ಪು. ವಿರೋಧಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ಗೆ ದೊರೆತ ಅತಿದೊಡ್ಡ ಗೆಲುವು. ‘ಇಂಡಿಯಾ’ ಮೈತ್ರಿಪಕ್ಷಗಳು ಒಟ್ಟಾಗಿದ್ದು ಚುನಾವಣೆ ಎದುರಿಸಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಸಂದೇಶವನ್ನು ಈ ಚುನಾವಣೆಯು ಸಾರಿದೆ ಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ ದೆಹಲಿ ಮುಖ್ಯಮಂತ್ರಿ ಸತ್ಯಕ್ಕೆ ಕಡೆಗೂ ಗೆಲುವು ಲಭಿಸಿದೆ. ಈ ತೀರ್ಪು ಪ್ರಜಾಪ್ರಭುತ್ವ ಹಾಗೂ ಚಂಡೀಗಢ ನಿವಾಸಿಗಳಿಗೆ ದೊರೆತಿರುವ ಗೆಲುವಾಗಿದೆ. ಕುಲದೀಪ್ ಕುಮಾರ್ ಮೇಯರ್ ಆಗಿ ಘೋಷಿಸಲಾದ ಎಎಪಿ ಅಭ್ಯರ್ಥಿ