ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜ. 14ರಿಂದ ಕುಂಭಮೇಳ ಆರಂಭವಾಗಲಿದೆ. ಆದರೆ ಜ. 9ರಿಂದ ಈ ಪ್ರದೇಶದಲ್ಲಿ ತಾಪಮಾನ ಕುಸಿಯುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ.

‘ಪ್ರಯಾಗ್ರಾಜ್ನಲ್ಲಿ ಸಾಮಾನ್ಯ ಹಾಗೂ ತುಸು ಮೇಲ್ಮಟ್ಟದ ತಾಪಮಾನ ಸಧ್ಯ ಇದ್ದು, ಜ. 9ರ ನಂತರ ಇದು ಸಾಮಾನ್ಯಕ್ಕಿಂತ ಕೆಳಕ್ಕೆ ಕುಸಿಯಲಿದೆ’ ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.

‘ಫೆ. 26ರವರೆಗೂ ಕುಂಭಮೇಳ ನಡೆಯಲಿದೆ. ಅಲ್ಲಿಯವರೆಗೂ ಈ ಪ್ರದೇಶದ ಹವಾಮಾನ ವರದಿಯನ್ನು ಕಾಲಕಾಲಕ್ಕೆ ಇಲಾಖೆ ಬಿಡುಗಡೆ ಮಾಡಲಿದೆ’ ಎಂದೂ ಅವರು ಹೇಳಿದ್ದಾರೆ.

‘ನಿಖರ ಹವಾಮಾನ ವರದಿ ನೀಡುವ ಉದ್ದೇಶದೊಂದಿಗೆ ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರದೊಂದಿಗೂ ಇಲಾಖೆ ಕೆಲಸ ಮಾಡುತ್ತಿದೆ. ಕುಂಭಮೇಳಕ್ಕಾಗಿಯೇ ಹವಾಮಾನ ಮಾಹಿತಿಯುಳ್ಳ ಅಂತರ್ಜಾಲ ಪುಟವನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.