ಮನಃಶಾಂತಿಗೆ ದೇವಾಲಯ ಭೇಟಿ, ಪೂಜೆ:
‘ಟೆಂಪಲ್ ರನ್ ಮಾಡುತ್ತಿದ್ದು, ಏನು ಸಂಕಲ್ಪ ಮಾಡಿದ್ದೀರಿ’ ಎಂದು ಕೇಳಿದಾಗ, ‘ನಾವು ನಮ್ಮ ಬದುಕಿನಲ್ಲಿ ನಮ್ಮದೇ ಆದ ಆಚರಣೆ ಹಿಂದಿರುತ್ತೇವೆ. ನಮ್ಮ ಮನಶಾಂತಿಗಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ದೇವಾಲಯ, ಮಸೀದಿ, ಚರ್ಚ್, ಜೈನ ಬಸದಿಗೆ ಹೋಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇದನ್ನು ಟೆಂಪಲ್ ರನ್ ಎನ್ನುವ ಅಗತ್ಯವೇನು? ನಮ್ಮ ಹಿರಿಯರು ಕೊಟ್ಟ ಮಾರ್ಗದರ್ಶನದ ಪ್ರಕಾರ ನಾನು ನಿತ್ಯ ಬೆಳಗ್ಗೆ ಪೂಜೆ ಮಾಡದೇ ಮನೆಯಿಂದ ಆಚೆ ಬರುವುದಿಲ್ಲ. ಸರ್ಕಾರ ದೇವಾಲಯ ಮುಚ್ಚಲು ಸಾಧ್ಯವೇ? ಗ್ರಾಮೀಣ ಭಾಗದ ದೇವಾಲಯ ಅಭಿವೃದ್ಧಿಗೆ ಬಂಗಾರಪ್ಪನವರ ಕಾಲದಲ್ಲಿ ಆರಾಧನಾ ಯೋಜನೆ ಜಾರಿಗೆ ತಂದಿದ್ದರು’ ಎಂದರು.