ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರ ಯೋಗಾಭ್ಯಾಸ
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರ ಯೋಗಾಭ್ಯಾಸ
ಕೊಬ್ಬಿನ ಪ್ರಮಾಣ ಹೆಚ್ಚಿರುವ 30 ಪೊಲೀಸ್ ಸಿಬ್ಬಂದಿಗೆ 10 ದಿನ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಪೊಲೀಸರ ತೂಕದಲ್ಲಿ ಇಳಿಮುಖವಾಗಿದೆ. ತರಬೇತಿ ಮುಗಿದ ಬಳಿಕ ಪರಿಣಾಮವನ್ನು ಗಮನಿಸಿ ಅವಶ್ಯಕತೆ ಇರುವವರುಗೆ ತರಬೇತಿ ಮುಂದುವರಿಸುವ ಬಗ್ಗೆ ಚಿಂತಿಸುತ್ತಿದ್ದೇವೆ
ಕೆ.ಎಸ್.ಸುಂದರ್ರಾಜ್, ಮೈಸೂರು ನಗರ ಡಿಸಿಪಿ
ಕೆ.ಎಸ್.ಸುಂದರ್ರಾಜ್
‘ಅಡ್ಡ ಪರಿಣಾಮ ಇರದು’
‘ಔಷಧಿಗಳನ್ನು ನೀಡದೆ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದಿದ್ದೇವೆ. ಪ್ರಕೃತಿ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮ ಇರುವುದಿಲ್ಲ. ಶಿಬಿರದಲ್ಲಿ ಭಾಗವಹಿಸಿದವರು 5–6 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ’ ಎಂದು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಡಾ.ಎಸ್. ಸಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪೊಲೀಸರಿಗಿರುವ ಕೆಲಸದ ಒತ್ತಡ ಆಹಾರ ಪದ್ಧತಿಯಲ್ಲಿ ಅಶಿಸ್ತು ಆಯಾಸ ಸ್ಥೂಲಕಾಯ ಸಮಸ್ಯೆ ಹೆಚ್ಚಲು ಕಾರಣ. ಅದರಿಂದ ಮಧುಮೇಹ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಸಕ್ತಿಯುಳ್ಳ ಪೊಲೀಸರು ಸಂಪರ್ಕಿಸಿದರೆ ಚಿಕಿತ್ಸೆ ನೀಡಲಾಗುವುದು’ ಎಂದರು.