ಬೆಳಗಾವಿ: 'ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಆಂತರಿಕ ಜಗಳದಿಂದಾಗಿ ರಾಜ್ಯ ಸರ್ಕಾರ ಮೃತದೇಹದಂತಾಗಿದೆ' ಎಂದು ಸಂಸದ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರಕ್ಕೆ ವರದಿ ಕಳುಹಿಸಬೇಕು. ಕಾಂಗ್ರೆಸ್ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಜಗಳ ಇತ್ಯರ್ಥವಾದ ನಂತರ ಅದನ್ನು ರದ್ದುಗೊಳಿಸಬಹುದು' ಎಂದರು.

'ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ಜಗಳ ಆರಂಭವಾಗಿ ಹಲವು ತಿಂಗಳಾಗಿದೆ. ಅತ್ತ ಸಿದ್ದರಾಮಯ್ಯ ರಾಜೀನಾಮೆ ನೀಡಲು ಸಿದ್ಧರಿಲ್ಲ. ಇತ್ತ ಶಿವಕುಮಾರ್ ಪಟ್ಟು ಸಡಿಲಿಸುತ್ತಿಲ್ಲ. ಈಗ ವಿಷಯಗಳು ಬಹಿರಂಗಗೊಂಡಿದ್ದು, ಇಬ್ಬರೂ ಪರಸ್ಪರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ' ಎಂದು ಆಪಾದಿಸಿದರು.

'ರಾಜ್ಯದಲ್ಲಿ ಆಡಳಿತ ಸರಿಯಾದ ಹಾದಿಗೆ ಬರುವಂತೆ ನೋಡಿಕೊಳ್ಳಲು ರಾಷ್ಟ್ರಪತಿ ಆಳ್ವಿಕೆಯ ಅಗತ್ಯವಿದೆ. ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು' ಎಂದು ಆಗ್ರಹಿಸಿದರು.

'ರಾಜ್ಯ ರಾಜಕಾರಣದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಬಿಜೆಪಿ ಪಾತ್ರವಿಲ್ಲ. ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚಿಸುವುದು ನಮಗೆ ಅಗತ್ಯವಿಲ್ಲ. ನಾವು ಚುನಾವಣೆಗೆ ಹೋಗಲು ಬಯಸುತ್ತೇವೆ' ಎಂದು ಹೇಳಿದರು.
.ಮುಖ್ಯಮಂತ್ರಿ ಬದಲಾವಣೆ: ಡಿಕೆಶಿ ಪರ ‘ಒಕ್ಕಲಿಗರ’ ಸ್ವರ.Karnataka Politics: ಬೀದಿಗೆ ಬಂತು ಕುರ್ಚಿ ಜಗಳ!.
'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಹಾಯಕರಾಗಿರುವಂತೆ ತೋರುತ್ತಿದೆ. ರಾಜ್ಯದಲ್ಲಿನ ಅಧಿಕಾರದ ಜಗಳದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳುತ್ತಾರೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಹೈಕಮಾಂಡ್ ಆಗಿಲ್ಲದಿದ್ದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದರು.

'ಅಧಿಕಾರದ ಕಿತ್ತಾಟವು ರಾಜ್ಯದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ. ಆರ್ಥಿಕ ಅಭಿವೃದ್ಧಿಗೂ ಅಡ್ಡಿಯಾಗಿದೆ. ಹೊಸ ಯೋಜನೆಗಳಿಗೆ ಹಣವಿಲ್ಲ. ರೈತರು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ ನಡೆಸಿದ ಪ್ರತಿಭಟನೆಗಳಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ದೂರಿದರು.

'ಭ್ರಷ್ಟಾಚಾರ ಅತಿರೇಕವಾಗಿದೆ. ಮಂಜೂರು ಮಾಡಿದ ಯೋಜನೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಕಳುಹಿಸಿದ ಪ್ರಸ್ತಾವಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಿಲ್ಲೆಯಲ್ಲಿ ಕೇಂದ್ರದ ಅನುದಾನಿತ ಯೋಜನೆಗಳು ಸಹ ಭೂಸ್ವಾಧೀನಕ್ಕೆ ಹಣ ಬಿಡುಗಡೆಯಾಗದೆ ಸ್ಥಗಿತಗೊಂಡಿವೆ. ಈಗ ಬಾಕಿ ಇರುವ ಯೋಜನೆಗಳ ಕುರಿತು ನಾನೇ ಸಿದ್ದರಾಮಯ್ಯ ಅವರಿಗೆ ಮುಕ್ತ ಪತ್ರ ಬರೆದಿದ್ದೇನೆ' ಎಂದು ಶೆಟ್ಟರ್ ಹೇಳಿದರು.

'ಮೆಕ್ಕೆಜೋಳ, ಹೆಸರುಕಾಳು ಮತ್ತು ಇತರ ಬೆಳೆಗಳಿಗೆ ಕೇಂದ್ರವು ಕನಿಷ್ಠ ಬೆಂಬಲ ಬೆಲೆ ಪ್ರಕಟಿಸಿದ್ದರೂ ಸಹ ರಾಜ್ಯ ಸರ್ಕಾರ ರೈತರ ನೆರವಿಗೆ ಬಂದಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ರೈತರಿಗೆ ಪಾವತಿಸಲು ರಾಜ್ಯವು ತನ್ನ ಕಾರ್ಪಸ್ ನಿಧಿಯನ್ನು ಬಳಸಬೇಕಾಗುತ್ತದೆ. ಕೇಂದ್ರವು ಅವರಿಗೆ ಮರುಪಾವತಿ ಮಾಡುತ್ತದೆ. ಆದರೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಅದರ ಖಜಾನೆ ಖಾಲಿಯಾಗಿರುವುದರಿಂದ ರಾಜ್ಯದಲ್ಲಿ ಕಾರ್ಪಸ್ ನಿಧಿ ಇಲ್ಲ ಎಂದು ಕಾಣಿಸುತ್ತದೆ' ಎಂದು ಅವರು ಹೇಳಿದರು.
.ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ: ಕುತೂಹಲ ಮೂಡಿಸಿದ ಡಿಕೆಶಿ ಪೋಸ್ಟ್.ರಾಜ್ಯದ ಜನರಿಗೆ ಕೊಟ್ಟ ಮಾತು ಘೋಷಣೆಯಷ್ಟೇ ಅಲ್ಲ; ಅದೇ ನಮಗೆ ಪ್ರಪಂಚ: ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.