ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೊ ರೈಲು ದರ ಏರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, 'ದರ ನಿಗದಿ ಅಧಿಕಾರ ಇವರಿಗಿದೆಯೋ (ರಾಜ್ಯ) ಅಥವಾ ಅವರಿಗಿದೆಯೋ (ಕೇಂದ್ರ)' ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, 'ರಾಜ್ಯ ಸರ್ಕಾರ ಎರಡೂವರೆ ವರ್ಷಗಳಿಂದ ಮಾಡುತ್ತಿರುವ ತಪ್ಪು ನಿರ್ಣಯ ಹಾಗೂ ಜನ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸುವುದನ್ನು ಚಾಳಿ ಮಾಡಿದೆ' ಎಂದು ಆರೋಪಿಸಿದ್ದಾರೆ.

'ಮೆಟ್ರೊ ದರ ಏರಿಕೆ ಕುರಿತಂತೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚಿನ ಬಂಡವಾಳ ಹೂಡಿದೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಪಾಲು ಶೇ 20 ಮಾತ್ರ ಇದ್ದಾಗ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಹಾಗಿದ್ದರೆ ಬೇರೆ ರಾಜ್ಯಗಳಲ್ಲಿ ಯಾಕೆ ಮೆಟ್ರೊ ದರ ಪದೇ ಪದೇ ಏರಿಕೆ ಆಗ್ತಾ ಇಲ್ಲ. ಕರ್ನಾಟಕದಲ್ಲಿ ಮಾತ್ರ ಏಕೆ ಮಾಡಲಾಗುತ್ತಿದೆ. ಜನರು ಎಚ್ಚೆತ್ತುಕೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.

ಜನರ ಪರಿಸ್ಥಿತಿ ಬಗ್ಗೆ ಕೇಳಿದಾಗ, 'ರಾಜ್ಯ ಸರ್ಕಾರ ಗ್ಯಾರಂಟಿ ಸ್ಕೀಮ್ ಕೊಡ್ತಿದ್ದರಲ್ಲಾ. ಅವರನ್ನೆಲ್ಲ ಆರ್ಥಿಕವಾಗಿ ಶಕ್ತಿ ತುಂಬಿದ್ದೇವೆ ಅಂತಿದ್ದರಲ್ಲ. ಸ್ವಾಭಿಮಾನದ ಬದುಕನ್ನು ಗ್ಯಾರಂಟಿಯಿಂದ ಕೊಟ್ಟಿದ್ದೇವೆ ಅಂತಾ ಹೇಳ್ತಿದ್ದಾರೆ. ಪದೇ ಪದೇ ಜಾಹೀರಾತು ಕೊಡುತ್ತಿದ್ದಾರೆ. ಜನರಿಗೆ ತೊಂದರೆ ಇಲ್ಲ. ಆರ್ಥಿಕವಾಗಿ ಚೆನ್ನಾಗಿದ್ದಾರೆ ಅನ್ನೋದು ರಾಜ್ಯ ಸರ್ಕಾರದ ಭಾವನೆ. ಆದ್ದರಿಂದ ಅವರು ಏನೇ ದರ ನಿಗದಿ ಮಾಡಿದರೂ ಜನ ಸಂತೋಷವಾಗಿ ಕೊಡುತ್ತಾರೆ ಅಂತಾ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ಭ್ರಮೆಯಲ್ಲಿದ್ದಾರೆ. ಈ ಕುರಿತು ಜನರು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಸಿಎಂ ಬದಲಾವಣೆ ವಿಚಾರ ಕೇಳಿದಾಗ, ಟಅವರ ಹೊಡೆದಾಟ ಕಾಂಗ್ರೆಸ್ಗೆ ಬಿಟ್ಟಿದ್ದು, ನಾನು ಯಾಕೆ ತಲೆಕೆಡಿಸಿಕೊಳ್ಳಲಿಟ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.