ಬೆಂಗಳೂರು: ‘ನಾನು ಅಧಿಕೃತ ಪ್ರವಾಸದ ಮೇಲೆ ಅಮೆರಿಕಕ್ಕೆ ತೆರಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅನುಮತಿ ನಿರಾಕರಿಸಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ಯಾರಿಸ್ನಲ್ಲಿ ನಡೆಯುತ್ತಿರುವ ‘ವೈವಾಟೆಕ್–2025’, ‘ಪ್ಯಾರಿಸ್ ಏರ್ ಶೋ’ನಲ್ಲಿ ಭಾಗಿಯಾಗಿದ್ದ ಅವರು ಅಲ್ಲಿಂದಲೇ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊಗೆ ತೆರಳಬೇಕಿತ್ತು. ಆದರೆ ವಿದೇಶಾಂಗ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್, ‘ನಾನು ಈಗ ಯಾವುದೇ ಹೇಳಿಕೆ ನೀಡುವುದಿಲ್ಲ. ಬೆಂಗಳೂರಿಗೆ ಬಂದ ನಂತರ, ಅನುಮತಿ ನಿರಾಕರಣೆಗೆ ಕಾರಣಗಳೇನು ಎಂದು ಸಚಿವಾಲಯದಿಂದ ವಿವರಣೆ ಕೇಳುತ್ತೇನೆ’ ಎಂದಿದ್ದಾರೆ.

‘ಪ್ರಿಯಾಂಕ್ ಖರ್ಗೆ ಅವರು ಮಾನ್ಯತೆ ಇರುವ ವೀಸಾ ಹೊಂದಿದ್ದಾರೆ. ಜತೆಗೆ ಅಧಿಕೃತ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಭಾಗಿಯಾಗುತ್ತಿದ್ದಾರೆ. ಯಾವ ಕಾರಣಕ್ಕಾಗಿ ಅನುಮತಿ ನಿರಾಕರಿಸಲಾಗಿದೆ ಎಂಬುದು ಗೊತ್ತಿಲ್ಲ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.