ರಾಷ್ಟ್ರೀಯ ಹೆದ್ದಾರಿ–206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಬಿರೂರು–ತಾಳಗುಪ್ಪ ಹಾಗೂ ಅರಸೀಕೆರೆ–ಚಿಕ್ಕಜಾಜೂರು ನಡುವೆ ರೈಲ್ವೆ 'ಲೈನ್ ಬ್ಲಾಕ್' ಇರುವುದರಿಂದ. ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ರೈಲುಗಳ ಸಂಚಾರ ರದ್ದು:

ತುಮಕೂರು–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ (16567) ಫೆಬ್ರವರಿ 16, 19, 23, 24 ಹಾಗೂ ಮಾರ್ಚ್ 2 ರಿಂದ 5ರವರೆಗೆ ಸಂಚರಿಸುವುದಿಲ್ಲ.

ಶಿವಮೊಗ್ಗ ಟೌನ್–ತುಮಕೂರು ಎಕ್ಸ್ಪ್ರೆಸ್ (16568) ರೈಲು ಫೆ. 17, 20, 24, 25 ಹಾಗೂ ಮಾರ್ಚ್ 3 ರಿಂದ 6ರವರೆಗೆ ರದ್ದಾಗಲಿದೆ.

ಹುಬ್ಬಳ್ಳಿ–ಅರಸೀಕೆರೆ ಎಕ್ಸ್ಪ್ರೆಸ್ (16214) ಫೆ. 23, 24 ಹಾಗೂ ಅರಸೀಕೆರೆ–ಹುಬ್ಬಳ್ಳಿ ಎಕ್ಸ್ಪ್ರೆಸ್ (16213) ಫೆ. 24, 25 ರಂದು ರದ್ದಾಗಿವೆ.

ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ-ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್ (12089/12090) ರೈಲುಗಳು ಫೆ.24 ಮತ್ತು 25 ರಂದು ರದ್ದಾಗಿವೆ.

ತಡವಾಗಿ ಹೊರಡುವ ರೈಲುಗಳು:

ಶಿವಮೊಗ್ಗ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (12090) ಫೆ. 17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಹೊರಡಲಿದೆ.

ಅದೇ ರೀತಿ, ಅರಸೀಕೆರೆ–ಹುಬ್ಬಳ್ಳಿ ರೈಲು (16213) ಫೆ. 17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಅರಸೀಕೆರೆಯಿಂದ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.

ರೈಲುಗಳ ನಿಯಂತ್ರಣ:

ಫೆ. 25 ರಂದು ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ (20661) ಮಾರ್ಗಮಧ್ಯೆ 35 ನಿಮಿಷ ನಿಯಂತ್ರಣವಾಗಲಿದೆ.

ತಾಳಗುಪ್ಪ– ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (20652) ಫೆ. 24 ಮತ್ತು 25 ರಂದು 75 ನಿಮಿಷಗಳ ಕಾಲ ಹಾಗೂ ಚಿಕ್ಕಮಗಳೂರು–ಶಿವಮೊಗ್ಗ ಪ್ಯಾಸೆಂಜರ್ (56272) ರೈಲು ಅರ್ಧ ಗಂಟೆ ಕಾಲ ಮಾರ್ಗಮಧ್ಯೆ ವಿಳಂಬವಾಗಿ ಸಂಚರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.