ಬೆಂಗಳೂರು: ಸೋಮವಾರ ಮೃತರಾದ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
.ಕೇರಳ ಮಾಜಿ ಸಿಎಂ, ಕಮ್ಯುನಿಸ್ಟ್ ನಾಯಕ ಅಚ್ಯುತಾನಂದನ್ ನಿಧನ.
ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಎಡಪಕ್ಷದ ಹಿರಿಯ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ.

‘ಅಚ್ಯುತಾನಂದನ್ ಸಾರ್ವಜನಿಕ ಜೀವನದಲ್ಲಿ ನ್ಯಾಯ ಮತ್ತು ಜನ ಸಾಮಾನ್ಯರ ಹಿತದ ಪರವಾಗಿ ದೃಢವಾದ ಧ್ವನಿಯಾಗಿದ್ದರು. ಹೋರಾಟದ ವೇಳೆಯಲ್ಲಿ, ಕೇರಳದ ಮುಖ್ಯಮಂತ್ರಿಯಾಗಿಯೂ ಸೇರಿದಂತೆ ಅಧಿಕಾರದ ಸ್ಥಾನಗಳಲ್ಲಿ ಅವರು ತಮ್ಮ ತತ್ವಗಳಿಗೆ ನಿಷ್ಠರಾಗಿದ್ದರು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅವರ ನಿಧನವು ದೊಡ್ಡ ನಷ್ಟವಾಗಿದೆ. ಅವರ ಕುಟುಂಬ, ಕೇರಳದ ಜನತೆ ಮತ್ತು ಅವರ ಜೀವನದಿಂದ ಶಕ್ತಿ ಪಡೆದ ಎಲ್ಲರಿಗೂ ಸಂತಾಪಗಳು. ಮಾದರಿಯೋಗ್ಯವಾಗಿ ಬದುಕಿದ್ದ ಜೀವಕ್ಕೆ ನಮನಗಳು ಎಂದು ಅವರು ಬರೆದುಕೊಂಡಿದ್ದಾರೆ.
.ಕೇರಳ: ಅಚ್ಯುತಾನಂದನ್ ಕೈಬಿಟ್ಟ ಸಿಪಿಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.