ತಿರುವನಂತಪುರ: ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ದೇಶದ ಅತ್ಯಂತ ಹಿರಿಯ ಸಿಪಿಎಂ ನಾಯಕ, ಶತಾಯುಷಿ ವಿ.ಎಸ್.ಅಚ್ಯುತಾನಂದನ್ ಅವರು ಸೋಮವಾರ ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಕೆಲ ವರ್ಷಗಳಿಂದ ಅವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಸಕ್ರಿಯ ರಾಜಕೀಯದಿಂದ ದೂರವಿದ್ದರು. ಜೂನ್ 23ರಂದು ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ತಿರುವನಂತರಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿಟ್ಟು ಆರೈಕೆ ಮಾಡಲಾಗುತ್ತಿತ್ತು. ಅವರು ಸೋಮವಾರ ಮಧ್ಯಾಹ್ನ ನಿಧನರಾದರು.

ಮೃತರಿಗೆ ಪತ್ನಿ ಕೆ. ವಸುಮತಿ, ಮಗಳು ವಿ.ವಿ.ಆಶಾ ಮತ್ತು ಮಗ ವಿ.ಎ.ಅರುಣ್ ಕುಮಾರ್ ಇದ್ದಾರೆ.

ಅವಿಭಜಿತ ಕಮ್ಯುನಿಸ್ಟ್ ಪಕ್ಷದಿಂದ ಹೊರಬಂದು 1964ರಲ್ಲಿ ಸಿಪಿಎಂ ಸ್ಥಾಪಿಸಿದ 32 ಜನರಲ್ಲಿ ಅವರೂ ಒಬ್ಬರು. ಇಷ್ಟು ಜನರ ಪೈಕಿ ದೀರ್ಘಕಾಲ ಬದುಕಿದ್ದ ನಾಯಕ ಅಚ್ಯುತಾನಂದನ್.

ರಾಜಕೀಯ ಜೀವನ: ವಿ.ಎಸ್. ಎಂದೇ ಜನಪ್ರಿಯರಾಗಿದ್ದ ಅವರು, 2006ರಿಂದ 2011ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. 1992–1996, 2001ರಿಂದ 2006 ಮತ್ತು 2011ರಿಂದ 2016ರವರೆಗೂ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. 1980ರಿಂದ 1992ರವರೆಗೆ ಅವರು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಎದುರಿಸಿದ 10 ಚುನಾವಣೆಗಳ ಪೈಕಿ ಅವರು ಕೇವಲ ಮೂರರಲ್ಲಿ ಸೋತಿದ್ದರು.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಮತ್ತು ಬದ್ಧತೆಯ ರಾಜಕಾರಣಿ ಆಗಿದ್ದ ವಿ.ಎಸ್, ಕೇರಳದಲ್ಲಿ ಅಪಾರವಾದ ಜನಬೆಂಬಲ ಹೊಂದಿದ್ದರು. 2006ರಲ್ಲಿ ಅಚ್ಯುತಾನಂದನ್ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಪಿಣರಾಯಿ ವಿಜಯನ್ ನೇತೃತ್ವದ ವಿರೋಧಿ ಬಣ ತೀವ್ರ ಪ್ರಯತ್ನ ಮಾಡಿತ್ತು. ಇದರ ನಡುವೆಯೂ ಅವರು ಮುಖ್ಯಮಂತ್ರಿಯಾದರು.

ಆ ನಂತರ ಇಬ್ಬರೂ ನಾಯಕರ ನಡುವೆ ದ್ವೇಷ ತೀವ್ರವಾಯಿತು. ಇದು ಕೇರಳ ರಾಜಕೀಯದಲ್ಲಿ ಭಾರಿ ತಲ್ಲಣ ಮೂಡಿಸಿತ್ತು. ಉಭಯ ನಾಯಕರು ಹಲವು ಬಾರಿ ಬಹಿರಂಗವಾಗಿ ಪರಸ್ಪರರನ್ನು ಟೀಕಿಸಿದ್ದರು. ಇದರಿಂದ ಪಕ್ಷವು, ಪಾಲಿಟ್ಬ್ಯೂರೊದಿಂದ ತೆಗೆಯುವುದೂ ಸೇರಿದಂತೆ ಹಲವು ರೀತಿಯ ಶಿಸ್ತುಕ್ರಮಗಳನ್ನು ತೆಗೆದುಕೊಂಡಿತ್ತು. ಕ್ರಮೇಣ ಪಕ್ಷದಲ್ಲಿ ವಿಜಯನ್ ಮೇಲುಗೈ ಸಾಧಿಸಿದರು.

ಇಡುಕ್ಕಿಯಲ್ಲಿನ ಪರಿಸರ ಸೂಕ್ಷ್ಮ ಗಿರಿಧಾಮವಾದ ಮುನ್ನಾರ್ನಲ್ಲಿ ತಲೆಯೆತ್ತಿದ್ದ ಹಲವು ಅಕ್ರಮ ಕಟ್ಟಡಗಳ ನೆಲಸಮ, ಕೇರಳದಲ್ಲಿ ಪ್ರವರ್ಧಮಾನಕ್ಕೆ ಬಂದ ಇತರ ರಾಜ್ಯಗಳ ಲಾಟರಿ ಮಾಫಿಯಾಗಳ ವಿರುದ್ಧ ಕಾರ್ಯಾಚರಣೆ, ಚಲನಚಿತ್ರ ಪೈರಸಿ ವಿರುದ್ಧ ಅಭಿಯಾನಗಳನ್ನು ವಿ.ಎಸ್ ಸಮರ್ಥವಾಗಿ ಕೈಗೊಂಡಿದ್ದರು. ಇವು ಅವರ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ.

ಕಾರ್ಮಿಕ ಸಂಘದಿಂದ ಸಕ್ರಿಯ: ಅಲಪ್ಪುಳ ಜಿಲ್ಲೆಯ ಪುನ್ನಪ್ರಾದಲ್ಲಿ 1923ರ ಅಕ್ಟೋಬರ್ 20ರಂದು ಅಚ್ಯುತಾನಂದನ್ ಜನಿಸಿದರು. ತಂದೆ ಶಂಕರನ್ ಮತ್ತು ತಾಯಿ ಅಕ್ಕಮ್ಮ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಅವರು ಕಳೆದುಕೊಂಡರು. ಏಳನೇ ತರಗತಿಯಲ್ಲಿದ್ದಾಗ ಅಧ್ಯಯನ ತ್ಯಜಿಸಿ ಅಣ್ಣನೊಂದಿಗೆ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಆರಂಭಿಸಿದರು.

ಬಳಿಕ ಕಾರ್ಮಿಕ ಸಂಘದ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶಿಸಿದರು. 1940ರಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ ಅವರು, 1946ರಲ್ಲಿ ಬ್ರಿಟಿಷ್ ರಾಜಪ್ರಭುತ್ವದ ವಿರುದ್ಧದ ಪ್ರಮುಖ ಕಮ್ಯುನಿಸ್ಟ್ ದಂಗೆಯಾದ ಪುನ್ನಪ್ರಾ– ವಯಲಾರ್ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಆಂದೋಲನಗಳಿಗೆ ಸಂಬಂಧಿಸಿದಂತೆ ವಿ.ಎಸ್ ಅವರು ಹಲವು ಬಾರಿ ಜೈಲು ಸೇರಿದ್ದರು. ಅಲ್ಲದೆ ಸೆರೆವಾಸದಲ್ಲಿ ಚಿತ್ರಹಿಂಸೆಯನ್ನೂ ಅನುಭವಿಸಿದ್ದರು.

ರಾಜ್ಯದಲ್ಲಿ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. ವಿಶಿಷ್ಟ ವಾಕ್ಚಾತುರ್ಯ ಹೊಂದಿದ್ದ ಅವರು ತಮ್ಮ ತೀಕ್ಷ್ಣ ಭಾಷಣಗಳಿಂದ ಕೇರಳದಲ್ಲಿ ಅತಿದೊಡ್ಡ ಜನ ಸಮೂಹವನ್ನು ಆಕರ್ಷಿಸುವಂತಹ ಮಹಾ ನಾಯಕರಾಗಿದ್ದರು.

ರಾಹುಲ್ ವಿರುದ್ಧ ‘ಅಮುಲ್ ಬೇಬಿ’ ಅಸ್ತ್ರ: 2011ರಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿ.ಎಸ್ ಅವರನ್ನು ವಯಸ್ಸಿನ ಕಾರಣಕ್ಕೆ ಅಪಹಾಸ್ಯ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಅಚ್ಯುತಾನಂದನ್ ಅವರು ರಾಹುಲ್ ಅವರನ್ನು ‘ಅಮುಲ್ ಬೇಬಿ’ ಎಂದು ವ್ಯಂಗ್ಯವಾಗಿ ಕರೆದಿದ್ದರು. ಅದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.

‘2011ರಲ್ಲಿ ಕೇರಳದಲ್ಲಿ ಸಿಪಿಎಂ ಅಧಿಕಾರಕ್ಕೆ ಬಂದರೆ 93 ವರ್ಷದ ವ್ಯಕ್ತಿ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ರಾಹುಲ್ ಟೀಕಿಸಿದ್ದರು. ಆದಕ್ಕೆ ‘ಕಾಂಗ್ರೆಸ್ ಪಕ್ಷವು ಕೆಲವು ಅಮುಲ್ ಬೇಬಿಗಳನ್ನು ಕಣಕ್ಕಿಳಿಸಿದೆ’ ಎಂದು ವ್ಯಂಗ್ಯವಾಡಿದ್ದರು.

84ನೇ ವಯಸ್ಸಿನಲ್ಲಿ ಶಬರಿಮಲೆ ಯಾತ್ರೆ: 2006ರಲ್ಲಿ ಮುಖ್ಯಮಂತ್ರಿಯಾದಾಗ ವಿ.ಎಸ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಈ ಅವಧಿಯಲ್ಲಿ ಅವರು ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಂಡು ಜನರ ಹುಬ್ಬೇರುವಂತೆ ಮಾಡಿದ್ದರು. ಅಲ್ಲದೆ, ಅವರು ತಮ್ಮ 84ನೇ ವಯಸ್ಸಿನಲ್ಲಿ ಶಬರಿಮಲೆ ಬೆಟ್ಟಗಳನ್ನು ಪಾದಯಾತ್ರೆ ಮೂಲಕ ಏರಿದ್ದರು. ಈ ಮೂಲಕ ಅವರು, ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಉತ್ತರ ನೀಡಿದ್ದರು. ಅದಾಗ್ಯೂ, ಅಯ್ಯಪ್ಪ ದೇಗುಲಕ್ಕೆ ಪವಿತ್ರ ಬೆಟ್ಟಗಳನ್ನು ಪಾದಯಾತ್ರೆ ಮೂಲಕ ಹತ್ತಿದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿ ಎಂಬ ಖ್ಯಾತಿಗೂ ವಿ.ಎಸ್ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.