ಜಿನೀವಾ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಿಧಿಸಿರುವ ನಿರ್ಬಂಧಗಳಿಂದಾಗಿ, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಜೀವಕ್ಕೆ ಆಪತ್ತು ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ವಿಶೇಷ ವರದಿಗಾರರಾಗಿ ನಿಯೋಜನೆಗೊಂಡಿರುವ ಮಾನವ ಹಕ್ಕು ತಜ್ಞ ರಿಚರ್ಡ್ ಬೆನೆಟ್ ಅವರು, ಈ ಕುರಿತು ಜಿನೀವಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಮಹಿಳೆಯರು ಅನಾರೋಗ್ಯ ಇಲ್ಲವೇ ಗಾಯಗೊಂಡ ಪರಿಸ್ಥಿತಿಯಲ್ಲೂ ವಸ್ತ್ರಸಂಹಿತೆ ಪಾಲಿಸಬೇಕು ಹಾಗೂ ಅವರೊಂದಿಗೆ ಪುರುಷ ಇರುವುದು ಕಡ್ಡಾಯವಾಗಿದೆ. ಪುರುಷ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಇರುವುದರಿಂದಾಗಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಸಿಗದಂತಾಗುತ್ತಿದೆ. ಜೊತೆಯಲ್ಲಿ ಪುರುಷರಿಲ್ಲ ಎಂಬ ಕಾರಣಕ್ಕೆ ಆಂಬ್ಯುಲೆನ್ಸ್ ಸೇವೆ ನಿರಾಕರಿಸಿದ ಸಾಕಷ್ಟು ಉದಾಹರಣೆಗಳು ಇವೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಇದೇ ವಾರ ವರದಿ ಸಲ್ಲಿಸಿರುವ ಬೆನೆಟ್, ಪುರುಷರು ಜೊತೆಗಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ, ಅವರಿಗೆ ಬಾಗಿಲಲ್ಲೇ ಹೆರಿಗೆಯಾಗಿತ್ತು. ಮತ್ತೊಬ್ಬ ಮಹಿಳೆಯು ಜೊತೆಯಲ್ಲಿ ಬರಲು ಪುರಷರಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ಹೋಗಲಾಗದೆ, ತಮ್ಮ ನಾಲ್ಕು ವರ್ಷದ ಮಗುವನ್ನು ಕಳೆದುಕೊಳ್ಳಬೇಕಾಗಿತ್ತು ಎಂದು ವಿವರಿಸಿದ್ದಾರೆ.

'ಈ ನಿರ್ಬಂಧಗಳು, ಮಹಿಳೆಯರು, ಬಾಲಕಿಯರು ತಮ್ಮ ದೇಹ, ಆರೋಗ್ಯ ಹಾಗೂ ಭವಿಷ್ಯದ ಮೇಲೆ ಸ್ವಾಯತ್ತತ್ತೆಯನ್ನೇ ಕಳೆದುಕೊಳ್ಳುವಂತೆ ಮಾಡುವ ಲಿಂಗ ತಾರತಮ್ಯದ ಸಾಂಸ್ಥಿಕ ವ್ಯವಸ್ಥೆಯನ್ನೇ ರೂಪಿಸುತ್ತವೆ' ಎಂದು ಒತ್ತಿ ಹೇಳಿದ್ದಾರೆ.

ಮಹಿಳಾ ವೈದ್ಯರ ಕೊರತೆ
ವರದಿಯನ್ನು ತಾಲಿಬಾನ್ ಆಡಳಿತಾಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೆನೆಟ್ ತಿಳಿಸಿದ್ದಾರೆ.

ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ತಾಲಿಬಾನ್ ಹೇಳುತ್ತದೆ. 2021ರಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ, ಅಭಿವ್ಯಕ್ತಿ ಸ್ವಾತಂತ್ರ್ಯ, ಉದ್ಯೋಗಕ್ಕೆ ಮಿತಿ ಹೇರುವಂತಹ ಹಲವು ನೈತಿಕ ಕಾನೂನುಗಳನ್ನು ನಿರಂತರವಾಗಿ ಹೇರುತ್ತಿರುವ ತಾಲಿಬಾನ್, ಮಹಿಳೆಯರ ಚಲನವಲನದ ಮೇಲೂ ನಿರ್ಬಂಧಗಳನ್ನು ಹೇರಿದೆ. ಬಾಲಕಿಯರು ಪ್ರಾಥಮಿಕ ಶಿಕ್ಷಣದ ಬಳಿಕ, ವಿದ್ಯಾಭ್ಯಾಸ ಮುಂದುವರಿಸದಂತೆಯೂ ನಿರ್ಬಂಧಗಳಿವೆ.

ಕಳೆದ ವರ್ಷದ ಮಾಹಿತಿಗಳ ಪ್ರಕಾರ, ಅಫ್ಗಾನಿಸ್ತಾನದ ವೈದ್ಯಕೀಯ ಕಾರ್ಯಕರ್ತರಲ್ಲಿ ನಾಲ್ಕನೇ ಒಂದರಷ್ಟು ಮಾತ್ರವೇ ಮಹಿಳೆಯರಿದ್ದಾರೆ. ಹೆಣ್ಣು ಮಕ್ಕಳ ವೈದ್ಯಕೀಯ ಶಿಕ್ಷಣದ ಮೇಲೆ ಹೇರಿರುವ ಕಡಿವಾಣಗಳು, ಭವಿಷ್ಯದಲ್ಲಿ ಮತ್ತಷ್ಟು ಕುಸಿತಕ್ಕೆ ಕಾರಣವಾಗಬಹುದು. ಸ್ತ್ರೀಯರಿಗೆ ಚಿಕಿತ್ಸೆ ನೀಡಲು ಮಹಿಳಾ ವೈದ್ಯಕೀಯ ಸಿಬ್ಬಂದಿಯೇ ಇಲ್ಲದಂತಾಗಬಹುದು ಎಂಬುದನ್ನು ಬೆನೆಟ್ ಬೊಟ್ಟು ಮಾಡಿ ಹೇಳಿದ್ದಾರೆ.

'ಈ ಪರಿಸ್ಥಿತಿಯು ಆರೋಗ್ಯ ವ್ಯವಸ್ಥೆಯನ್ನೇ ಅಪಾಯಕ್ಕೆ ದೂಡುತ್ತದೆ. ತಾಲಿಬಾನ್ ಆಡಳಿತವು ಇಂತಹ ನಿರ್ಬಂಧಗಳನ್ನು ಹಿಂಪಡೆಯದಿದ್ದರೆ, ಅನಗತ್ಯ ಸಾವುಗಳು ಮುಂದುರಿಯುತ್ತದೆ. ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತವೆ' ಎಂದು ಎಚ್ಚರಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದ ಅಫ್ಗಾನಿಸ್ತಾನ ಆರೋಗ್ಯ ಇಲಾಖೆಯ ಮಾಜಿ ಸಚಿವೆ ಸುರಯಾ ದಲೀಲ್ ಅವರು, ಹೆರಿಗೆ ಸಂದರ್ಭದಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣಗಳ ಕಳವಳ ವ್ಯಕ್ತಪಡಿಸಿದ್ದಾರೆ. 'ಭವಿಷ್ಯದಲ್ಲಿ ತಾಯಂದಿರು ಹಾಗೂ ಶಿಶು ಮರಣ ದರ ಹೆಚ್ಚುವ ಅಪಾಯವಿದೆ' ಎಂದು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.