ವಾಷಿಂಗ್ಟನ್: ವ್ಯಕ್ತಿಯ ಸಮ್ಮತಿಯಿಲ್ಲದೆ ಆಪ್ತಕ್ಷಣಗಳ ಚಿತ್ರಗಳನ್ನು ಆನ್ಲೈನ್ನಲ್ಲಿ ಪ್ರಕಟಿಸುವ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸುವ ‘ಟೇಕ್ ಇಟ್ ಡೌನ್’ ಕಾಯ್ದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ನಿ ಮೆಲನಿಯಾ ಅವರ ಸಮ್ಮುಖದಲ್ಲಿ ಸಹಿ ಹಾಕಿದರು.

ಟ್ರಂಪ್ ಅಧ್ಯಕ್ಷರಾದ ಬಳಿಕ ಇಂತಹ ಕಾಯ್ದೆಯನ್ನು ರೂಪಿಸಲು ಮೆಲನಿಯಾ ಮುತುವರ್ಜಿ ವಹಿಸಿದ್ದರು. ಕ್ಯಾಪಿಟಲ್ ಹಿಲ್ಗೆ ತೆರಳಿ ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ, ಇಂತಹ ಕಾಯ್ದೆ ರೂಪಿಸುವ ಅಗತ್ಯದ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೊಲಿನಾ ಲೀವಿಟ್ ಅವರು, ‘ಮಹತ್ವದ ಈ ಕಾಯ್ದೆ ರಚನೆಗೆ ಮೆಲನಿಯಾ ಟ್ರಂಪ್ ಮುಖ್ಯ ಕಾರಣಕರ್ತರು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯ ಸಮ್ಮತಿಯಿಲ್ಲದೆ ಆಪ್ತ ಕ್ಷಣಗಳ ಚಿತ್ರಗಳು, ಎ.ಐ, ಡೀಪ್ಫೇಕ್ಸ್ ಬಳಸಿ ರಚಿಸಿದ ಚಿತ್ರಗಳನ್ನು ಆನ್ಲೈನ್ನಲ್ಲಿ ಪ್ರಕಟಿಸುವುದು ಅಥವಾ ಪ್ರಕಟಿಸುವುದಾಗಿ ಬೆದರಿಕೆ ಒಡ್ಡುವುದು ಗಂಭೀರ ಅಪರಾಧ. ಸಂತ್ರಸ್ತರಿಂದ ಕೋರಿಕೆ ಬಂದ 48 ಗಂಟೆಗಳಲ್ಲಿ ಸಂಬಂಧಿಸಿದ ಸಂಸ್ಥೆಯು ಜಾಲತಾಣಗಳಿಂದ ಇಂತಹ ಚಿತ್ರಗಳನ್ನು ತೆಗೆಯುವುದು ಕಡ್ಡಾಯವಾಗಿದೆ.

ಮಸೂದೆಯನ್ನು ಜನಪ್ರತಿನಿಧಿಗಳ ಸಭೆಯು ಕಳೆದ ಏಪ್ರಿಲ್ನಲ್ಲಿ 409–2 ಮತಗಳಿಂದ ಅಂಗೀಕರಿಸಿದ್ದು, ಬಳಿಕ ಸೆನೆಟ್ ಅವಿರೋಧವಾಗಿ ಒಪ್ಪಿಗೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.