ಬೆಂಗಳೂರಿನಲ್ಲಿರುವ ಸಂಸ್ಥೆಗಳ ನಡುವೆ ಸಮನ್ವಯ ಇಲ್ಲ. ಹೀಗಾಗಿ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿಲ್ಲ. ನಿಷ್ಕ್ರಿಯಗೊಂಡಿರುವ ಸಮನ್ವಯಕ್ಕೆ ಜೀವ ತುಂಬುವ ಉದ್ದೇಶ ಜಿಬಿಎ ಸ್ಥಾಪನೆಯ ಹಿಂದಿದೆ. ಜಿಬಿಜಿ ಮಸೂದೆ ಪರಿಪೂರ್ಣ ಅಲ್ಲದಿರಬಹುದು. ಆದರೆ, ಸದ್ಯಕ್ಕೆ ಅದು ನಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ

ಬೆಂಗಳೂರಿನಲ್ಲಿ ಕುಸಿಯುತ್ತಿದ್ದ ಜೀವನದ ಗುಣಮಟ್ಟದಿಂದ ವಿಚಲಿತಗೊಂಡ ಕರ್ನಾಟಕ ಸರ್ಕಾರವು ನಗರದ ಆಡಳಿತವನ್ನು ಸುಧಾರಿಸುವ ದಾರಿಗಳ ಬಗ್ಗೆ ಸಲಹೆ ನೀಡುವುದಕ್ಕಾಗಿ 2014ರಲ್ಲಿ ಮೂರು ಸದಸ್ಯರ ಪುನರ್ರಚನಾ ಸಮಿತಿ ರಚಿಸಿತು. ಸಾವಿರದಷ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿ ಮತ್ತು ತಜ್ಞರ ಜೊತೆ ಸಭೆಗಳನ್ನು ನಡೆಸಿದ ನಂತರ 2014–18ರ ನಡುವೆ 10 ವರದಿಗಳು ಮತ್ತು ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಜಿ) ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದುದರಿಂದ ಸಮಿತಿಯ ವರದಿಗಳು, ಮಸೂದೆ ‘ಡಿಜಿಟಲ್ ದೂಳು’ ಹಿಡಿಯುತ್ತಾ ಬಿದ್ದವು.
.ಚರ್ಚೆ | ಜನರ ಬಳಿಯ ಅಧಿಕಾರ ಕಿತ್ತು ಸರ್ಕಾರಕ್ಕೆ ನೀಡುವ ಪ್ರಯತ್ನ: ಕಾತ್ಯಾಯಿನಿ.
2023ರಲ್ಲಿ ಈ ಸಮಿತಿಯು ನಾಲ್ಕು ಸದಸ್ಯರನ್ನೊಳಗೊಂಡ ಬ್ರ್ಯಾಂಡ್ ಬೆಂಗಳೂರು ಸಮಿತಿಯಾಗಿ ಬದಲಾಯಿತು. 2024ರ ಮಧ್ಯದಲ್ಲಿ ಸಮಿತಿಯು ಜಿಬಿಜಿ ಮಸೂದೆಯನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿತು. ಕಳೆದ ವರ್ಷದ ಜುಲೈನಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಪ್ರಾಥಮಿಕ ಜಿಬಿಜಿ ಮಸೂದೆಯನ್ನು ಮತ್ತಷ್ಟು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸಲಾಯಿತು. ಈ ಸಮಿತಿಯು ಸರಣಿ ಸಭೆಗಳನ್ನು ನಡೆಸಿ ಮಸೂದೆಯ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಪರಿಷ್ಕೃತ ಜಿಬಿಜಿ ಮಸೂದೆಯನ್ನು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ. ಮಸೂದೆಯನ್ನು ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ಈಗ ವಾಪಸ್ ಕಳುಹಿಸಿದ್ದಾರೆ. ಈ ಮಸೂದೆಯ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿವೆ. ಮಸೂದೆಯ ನಿಬಂಧನೆಗಳಲ್ಲಿರುವ ತರ್ಕಬದ್ಧತೆಯನ್ನು ಅರಿಯಲು ಇದು ಅತ್ಯಂತ ಸೂಕ್ತ ಸಮಯ.

ಬೆಂಗಳೂರಿನ ಆಡಳಿತ ನಿರ್ವಹಿಸಲು ಮೂರು ಹಂತಗಳ ಆಡಳಿತ ವ್ಯವಸ್ಥೆ ಇರಬೇಕು ಎಂದು ಸಮಿತಿ ಸಲಹೆ ನೀಡಿತ್ತು. ಅದರ ಪ್ರಕಾರ, ಕೆಳ ಹಂತದಲ್ಲಿ ವಾರ್ಡ್ಗಳು, ಮಧ್ಯದ ಹಂತದಲ್ಲಿ ಹಲವು ಪಾಲಿಕೆಗಳು ಇದ್ದರೆ, ಮೇಲಿನ ಹಂತದಲ್ಲಿ ಹೊಸದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಚಿಸಬೇಕು. ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಯ ಅಡಿಯಲ್ಲಿ (ಸಂವಿಧಾನದ 74ನೇ ತಿದ್ದುಪಡಿಯ ಆಧಾರ) ಈ ಶಿಫಾರಸನ್ನು ಸಮಿತಿ ಮಾಡಿದೆ. ಮೇಲಿನ ಹಂತದಲ್ಲಿ ಜಿಬಿಎ ಸ್ಥಾಪನೆಯು ವಿವಿಧ ಪಾಲಿಕೆಗಳು ಮತ್ತು ಜಲಮಂಡಳಿ, ಬೆಸ್ಕಾಂ, ಬಿಡಿಎ, ಬಿಎಂಟಿಸಿ, ಬಿಎಂಆರ್ಸಿಎಲ್ ಮತ್ತು ಪೊಲೀಸ್ ಇಲಾಖೆಯಂತಹ ಸರ್ಕಾರಿ ನಿಯಂತ್ರಿತ ವ್ಯವಸ್ಥೆಗಳೊಂದಿಗೆ ಯೋಜನೆ ರೂಪಿಸಲು, ಸಮನ್ವಯ ಸಾಧಿಸಲು ನೆರವಾಗಲಿದೆ. ಶಾಸನ ಸಭೆ ಅಂಗೀಕರಿಸಿರುವ ಮಸೂದೆ ಈ ರೀತಿಯ ಆಡಳಿತ ರಚನೆಯನ್ನು ಉಳಿಸಿಕೊಂಡಿದೆ. ಆದರೆ, ಅದರಲ್ಲಿನ ವಿವರಗಳು ಭಿನ್ನವಾಗಿವೆ.

ಮಸೂದೆಯಲ್ಲಿರುವ ಪಾಲಿಕೆಗಳು/ವಾರ್ಡ್ಗಳ ರಚನೆ ಪ್ರಸ್ತಾವವು ಈಗಾಗಲೇ ಜಾರಿಯಲ್ಲಿರುವ 2020ರ ಬಿಬಿಎಂಪಿ ಕಾಯ್ದೆಯನ್ನು ಆಧರಿಸಿದೆ. ಹೆಚ್ಚು ಉತ್ತರದಾಯಿತ್ವಕ್ಕಾಗಿ, ಮೇಯರ್ ಇನ್ ಕೌನ್ಸಿಲ್/ ಪಾಲಿಕೆ ಆಡಳಿತ ಸಂಪುಟದ ಮಾದರಿ ರಚನೆಯಾಗಬೇಕು. ಆಡಳಿತದಲ್ಲಿ ಶಾಸಕರಿಗಿಂತ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಇರಬೇಕು. ಈ ಸಮಿತಿಗಳು ಗಮನಾರ್ಹವಾದ ಅಧಿಕಾರ ಹೊಂದಿರಬೇಕು, ಈ ಸಮಿತಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಹೆಚ್ಚಳವಾಗುವ ಆಸ್ತಿ ತೆರಿಗೆಯಲ್ಲಿ ಒಂದು ಪಾಲು ಅವುಗಳಿಗೆ ನೀಡಬೇಕು ಎಂಬುದೂ ಸೇರಿದಂತೆ ಹಲವು ಸಲಹೆಗಳನ್ನು ಬ್ರ್ಯಾಂಡ್ ಬೆಂಗಳೂರು ಸಮಿತಿ ನೀಡಿತ್ತು (ಅಂತಿಮ ಜಿಬಿಜಿ ಮಸೂದೆಯು ಇವುಗಳನ್ನು ಒಳಗೊಂಡಿಲ್ಲ). ಇವುಗಳು ಸ್ಥಳೀಯ ಆಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಆದರೆ, ಪಾಲಿಕೆ/ವಾರ್ಡ್ಗಳ ರಚನೆಗೆ ಸಂಬಂಧಿಸಿದ ಸಮಿತಿಯ ಸಲಹೆಗಳ ಬಗ್ಗೆ ಯಾವುದೇ ನಾಗರಿಕ ಗುಂಪುಗಳು, ಸಂಘಟನೆಗಳು ಜಂಟಿಸಮಿತಿ ಅಭಿಪ್ರಾಯ ಸಂಗ್ರಹಿಸುವಾಗ ಮಾತನಾಡಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಪರಿಣಾಮವಾಗಿ, ಈ ಸಲಹೆಗಳು ಮಸೂದೆಯ ಭಾಗವಾಗುವಂತೆ ಒತ್ತಡ ಸೃಷ್ಟಿಯಾಗಲಿಲ್ಲ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸ್ಥಾಪನೆ ಮತ್ತು ಅದರ ರಚನೆಯು ಸಂವಿಧಾನದ 74ನೇ ತಿದ್ದುಪಡಿಯ (ಮಹಾನಗರ ಯೋಜನಾ ಸಮಿತಿ–ಎಂಪಿಸಿಯೂ ಸೇರಿದಂತೆ) ಉಲ್ಲಂಘನೆಯಾಗುತ್ತದೆ ಎಂಬುದು ಈಗ ಅಂಗೀಕಾರವಾಗಿರುವ ಮಸೂದೆಯ ಬಗೆಗೆ ಕೇಳಿಬರುತ್ತಿರುವ ಪ್ರಮುಖ ಆಕ್ಷೇಪಗಳು. ಜಿಬಿಎ ಎನ್ನುವುದು ಒಂದು ವಿನೂತನ ಪರಿಕಲ್ಪನೆ. ಸದ್ಯ ಬೆಂಗಳೂರಿನಲ್ಲಿರುವ ಹಲವು ಸಂಸ್ಥೆಗಳು ತಮ್ಮ ಪಾಡಿಗೆ ತಾವೇ ಕಾರ್ಯಾಚರಿಸುತ್ತಿವೆ. ಅವುಗಳ ನಡುವೆ ಸಮನ್ವಯ ಇಲ್ಲ. ಹೀಗಾಗಿ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಿಷ್ಕ್ರಿಯಗೊಂಡಿರುವ ಸಮನ್ವಯಕ್ಕೆ ಜೀವ ತುಂಬುವ ಉದ್ದೇಶ ಜಿಬಿಎಯ ಹಿಂದಿದೆ. ದಶಕಗಳಿಂದ ಹಲವು ಸರ್ಕಾರಿ ಸಂಸ್ಥೆಗಳನ್ನು ಹುಟ್ಟುಹಾಕುತ್ತಾ, ನಗರ ಪಾಲಿಕೆಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಬಂದ ದೊಡ್ಡ ಪರಂಪರೆಯೇ ನಮಗಿದೆ. ಪರಸ್ಪರ ಸಮನ್ವಯದ ವ್ಯವಸ್ಥೆಯೇ ನಮ್ಮಲ್ಲಿಲ್ಲ.

ಜಿಬಿಎ ಪ್ರಕರಣ: ನಗರದಲ್ಲಿರುವ ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ನಗರಕ್ಕೆ ಸಂಬಂಧಿಸಿದ ಯೋಜನೆ ರೂಪಿಸಲು, ಸಂಯೋಜಿಸಲು ಮತ್ತು ಸಮನ್ವಯ ಸಾಧಿಸಲು ಒಂದು ವೇದಿಕೆಯನ್ನು ಒದಗಿಸುವ ಪ್ರಮುಖವಾದ ಕೆಲಸವನ್ನು ಜಿಬಿಎ ಮಾಡುತ್ತದೆ. ಆ ಪ್ರತಿಯೊಂದು ಸಂಸ್ಥೆಯೂ ತನ್ನದೇ ಆದ ಸ್ವಾಯತ್ತತೆ ಮತ್ತು ಪಾತ್ರವನ್ನು ಹೊಂದಿರುತ್ತದೆ. ಈ ವ್ಯವಸ್ಥೆಯನ್ನು ಸಂಗೀತ ನಿರ್ದೇಶಕನೊಂದಿಗೆ ಹೋಲಿಸಿ ನೋಡಿ. ಸಂಗೀತ ನಿರ್ದೇಶಕನ ಮೂಲಕ ನೀವು ಸಂಗೀತವನ್ನು ಕೇಳುತ್ತೀರಿ. ಇಲ್ಲದಿದ್ದರೆ, ಈಗ ಇರುವಂತೆ ಬರೀ ಗದ್ದಲವನ್ನೇ ನೀವು ಕೇಳಬೇಕಾಗುತ್ತದೆ. ಜಿಬಿಎಯ ಉಪಸ್ಥಿತಿಯು ಅಗತ್ಯವಿರುವಾಗ ಅನುದಾನವನ್ನು ನೀಡುವುದರ ಮೂಲಕ ನಗರ ಪಾಲಿಕೆಗಳಲ್ಲಿನ ಅಸಮಾನತೆಗಳನ್ನು ಪರಿಹರಿಸಲು ನೆರವಾಗುತ್ತದೆ.

ರಾಜ್ಯ ಸರ್ಕಾರವು ದಶಕಗಳಿಂದ ವ್ಯವಸ್ಥೆಯನ್ನು ಮುರಿಯುತ್ತಾ ಬಂದಿದೆ. ಈಗ ಮತ್ತೆ ಅದನ್ನು ಕಟ್ಟುವ ಹೊಣೆಗಾರಿಕೆಯೂ ಸರ್ಕಾರದ ಮೇಲೆ ಇದೆ. ಮುಖ್ಯಮಂತ್ರಿ ಅವರು ಜಿಬಿಎಯ ಮುಖ್ಯಸ್ಥರಾಗಿದ್ದರೆ ಮಾತ್ರ ಇದು ಸಾಧ್ಯ. ಯಾಕೆಂದರೆ ಜಿಬಿಎಗೆ ಸಂಬಂಧಿಸಿದ ಇಲಾಖೆಗಳ ಉಸ್ತುವಾರಿ ನೋಡಿಕೊಳ್ಳಲು ಬೇರೆ ರಾಜಕೀಯ ಪ್ರತಿನಿಧಿ ಇಲ್ಲ. ಸಮಿತಿಯ ವರದಿಯು ಮುಂದಿನ 5–10 ವರ್ಷಗಳಲ್ಲಿ ಜಿಬಿಎಯ ಮುಖ್ಯಸ್ಥರ ಹುದ್ದೆಯನ್ನು ಮೇಯರ್ ಅವರೇ ಅಲಂಕರಿಸುವಂತಾಗಬೇಕು ಎಂದು ಶಿಫಾರಸು ಮಾಡಿದೆ. ಪಾಲಿಕೆಗಳ ಆಡಳಿತ ವಿಚಾರದಲ್ಲಿ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗುತ್ತದೆ ಎಂಬರ್ಥದಲ್ಲಿ ಜಿಬಿಎ ಪ್ರಕರಣವನ್ನು ಪರಿಗಣಿಸಬಾರದು. ಬದಲಿಗೆ, ಪರಿಣಾಮಕಾರಿ ವ್ಯವಸ್ಥೆಯೊಂದನ್ನು ರೂಪಿಸುವ ಪ್ರಯತ್ನವಾಗಿ ನೋಡಬೇಕು. ದೀರ್ಘಾವಧಿಯಲ್ಲಿ ಪರಿವರ್ತನೆಯೊಂದರ ಅಗತ್ಯವಿದೆ. ಈಗಿನ ಸನ್ನಿವೇಶದಲ್ಲಿ ಜಿಬಿಎ ರೂಪದಲ್ಲಿ ಮಾತ್ರ ಅದನ್ನು ಸಾಧಿಸಬಹುದು. ಇದು ಖಂಡಿತವಾಗಿ ಸಂವಿಧಾನ ವಿರೋಧಿ ಅಲ್ಲ ಅಥವಾ 74ನೇ ತಿದ್ದುಪಡಿಯ ಉಲ್ಲಂಘನೆಯೂ ಅಲ್ಲ.

ನಗರದ ಉದ್ಧಾರಕ ಎಂದು ‘ಕರೆಸಿಕೊಳ್ಳುತ್ತಿರುವ’ ಮಹಾನಗರ ಯೋಜನಾ ಸಮಿತಿಯ (ಎಂಪಿಸಿ) ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅದನ್ನೂ ರಚಿಸಿದರೆ ನಮ್ಮ ನಗರದ ಸಮಸ್ಯೆಗಳಿಗೆಲ್ಲಾ ಮೋಕ್ಷ ಸಿಗುವುದೇ? ಹಾಗೇನೂ ಆಗುವುದಿಲ್ಲ. ಅದರ ಬಗ್ಗೆ ಇನ್ನೊಮ್ಮೆ ಚರ್ಚಿಸೋಣ. ಎಂಪಿಸಿಯು ಖಂಡಿತವಾಗಿಯೂ ಅಗತ್ಯವಿದೆ (ಆದರೆ, ಎಂಪಿಸಿಯು ಈ ದೇಶದ ಎಲ್ಲಿಯೂ ಪರಿಣಾಮಕಾರಿಯಾದ ಉದಾಹರಣೆ ಇಲ್ಲ) ಮತ್ತು ಜಿಬಿಜಿ ಮಸೂದೆಯಲ್ಲಿ ಅದಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದೆ. ತನ್ನ ಘಟಕಗಳು ನೀಡಿದ ಯೋಜನಾ ಮಾಹಿತಿಗಳ ಆಧಾರದಲ್ಲಿ ತನ್ನ ವ್ಯಾಪ್ತಿಗೆ ಬರುವ (ಜಿಬಿಜಿ ಪ್ರದೇಶಕ್ಕಿಂತಲೂ ಹೆಚ್ಚಿನ ವ್ಯಾಪ್ತಿ) ಪ್ರದೇಶದ ಅಭಿವೃದ್ಧಿಯ ಕರಡು ಯೋಜನೆಯನ್ನು ಅದು ರೂಪಿಸುತ್ತದೆ. ಎಂಪಿಸಿ ರೂಪಿಸಿದ ಯೋಜನೆಯನ್ನು ಸಂಬಂಧಿಸಿದ ಎಲ್ಲ ಪಾಲುದಾರರೊಂದಿಗೆ ಸೇರಿ ಕಾರ್ಯಗತಗೊಳಿಸಲು ಜಿಬಿಎ (ಬಿಡಿಎ ಬದಲಿಗೆ) ಇರುವುದು ನಗರಕ್ಕೆ ಅನುಕೂಲ.

ಈಗ ನಾವು ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಯ ಕವಲುದಾರಿಯಲ್ಲಿದ್ದೇವೆ. ಅಲ್ಲಿ ನಿಂತುಕೊಂಡು ಸಂವಿಧಾನ ಉಲ್ಲಂಘನೆಯ ಆರೋಪದ ಬಗ್ಗೆ ಪ್ರಲಾಪಿಸುತ್ತಲೇ ಇರಬಹುದು ಮತ್ತು ಈಗಿರುವ ಪರಿಸ್ಥಿತಿಯಲ್ಲೇ ಉಳಿಯಬಹುದು ಅಥವಾ ಜಿಬಿಜಿ ಮಸೂದೆಯಲ್ಲಿರುವ ‘ಭರವಸೆಯ ಬೆಳ್ಳಿ’ಯನ್ನು ಸ್ವೀಕರಿಸುತ್ತಾ ಸಂಬಂಧಿಸಿದ ಪಾಲುದಾರರೊಂದಿಗೆ ಒಂದೇ ರೈಲಿನಲ್ಲಿ ಕುಳಿತು ಅತ್ಯುತ್ತಮ ನಾಳೆಗಾಗಿ ಆ ರೈಲನ್ನು ಒಟ್ಟಾಗಿ ಎಳೆಯಬಹುದು. ಜಿಬಿಜಿ ಮಸೂದೆಯು ಪರಿಪೂರ್ಣವಾಗಿಲ್ಲದಿರಬಹುದು. ಆದರೆ, ಸದ್ಯಕ್ಕೆ ಅದು ನಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ.

ಲೇಖಕ: ಬ್ರ್ಯಾಂಡ್ ಬೆಂಗಳೂರು ಸಮಿತಿಯ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.