ವರದಕ್ಷಿಣೆ ಕಿರುಕುಳದಂಥ ಪ್ರಕರಣಗಳ ವಿಚಾರಣೆ ವೇಳೆ ‘ನ್ಯಾಯಾಲಯಗಳು ಎಚ್ಚರಿಕೆಯನ್ನು ವಹಿಸಬೇಕು’ ಎಂಬ ಸಂದೇಶವನ್ನು ಸುಪ್ರಿಂ ಕೋರ್ಟ್ ನೀಡಿದೆ. ಆ ಎಚ್ಚರಿಕೆಯು ಸಕಾಲಿಕ ಹಾಗೂ ವಿವೇಕಯುತ ಎಂದು ಪರಿಗಣಿಸಬಹುದಾದರೂ, ನಿಜವಾಗಿಯೂ ವರದಕ್ಷಿಣೆ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ಮುಂದಿನ ದಾರಿ ಏನು ಎಂಬ ಆತಂಕ, ನೋವು ಮತ್ತು ಅಧೈರ್ಯ ಕಾಡುತ್ತವೆ.