ಬುಲವಾಯೊ, ಜಿಂಬಾಬ್ವೆ: ದಕ್ಷಿಣ ಆಫ್ರಿಕಾ ತಂಡದ ನಾಯಕ ಮತ್ತು ಬ್ಯಾಟರ್ ವಿಯಾನ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶವನ್ನು ತ್ಯಜಿಸಿದರು.

ಜಿಂಬಾಬ್ವೆ ಎದುರು ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಜೇಯ 367 (334ಎಸೆತ, 4X49, 6X4) ರನ್ ಗಳಿಸಿದ ಅವರು ದಶಕಗಳ ಹಿಂದೆ ವೆಸ್ಟ್ ಇಂಡೀಸ್ನ ಬ್ರಯನ್ ಲಾರಾ ನಿರ್ಮಿಸಿದ್ದ 400 ರನ್ ದಾಖಲೆಯನ್ನು ಮುರಿಯಬಹುದಿತ್ತು. ಆದರೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.

ಅವರ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 114 ಓವರ್ಗಳಲ್ಲಿ 5 ವಿಕೆಟ್ಗಳಿಗೆ 626 ರನ್ಗಳ ಬೃಹತ್ ಮೊತ್ತ ಪೇರಿಸಿತು.

ದುರ್ಬಲ ತಂಡವಾಗಿರುವ ಜಿಂಬಾಬ್ವೆ ದಕ್ಷಿಣ ಆಫ್ರಿಕಾ ದಾಳಿಯ ಎದುರು ಕುಸಿಯಿತು. 43 ಓವರ್ಗಳಲ್ಲಿ 170 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಮಲ್ದರ್ ಬಳಗವು ಆತಿಥೇಯರ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್ನಲ್ಲಿಯೂ ಜಿಂಬಾಬ್ವೆ ಆರಂಭಿಕ ಆಘಾತ ಎದುರಿಸಿತು. ಎರಡನೇ ದಿನದಾಟ ಮುಗಿದಾಗ 16 ಓವರ್ಗಳಲ್ಲಿ 1 ವಿಕೆಟ್ಗೆ 51 ರನ್ ಗಳಿಸಿತ್ತು. ಟಾಕುಚಾವಾಂಶೆ ಕೈಟ್ಯಾನೊ (ಬ್ಯಾಟಿಂಗ್ 34) ಮತ್ತು ನಿಕ್ ವೆಲ್ಚ್ (ಬ್ಯಾಟಿಂಗ್ 6) ಕ್ರೀಸ್ನಲ್ಲಿದ್ದಾರೆ.

ವಿಯಾನ್ ಆರ್ಭಟ: ದಕ್ಷಿಣ ಆಫ್ರಿಕಾ ತಂಡಕ್ಕೆ ಇದೇ ಮೊದಲ ಬಾರಿ ನಾಯಕತ್ವ ವಹಿಸಿರುವ 27 ವರ್ಷದ ವಿಯಾನ್ ಅವರು ಜಿಂಬಾಬ್ವೆಯ ದಾಳಿಯನ್ನು ಪುಡಿಗಟ್ಟಿದರು. ಸೋಮವಾರ ಅವರು ತ್ರಿಶತಕದ ಗಡಿ ದಾಟಿದರು. ಅವರು 311 ರನ್ ಗಳಿಸಿದ ಸಂದರ್ಭದಲ್ಲಿ ತಮ್ಮ ತಂಡದ ಮಾಜಿ ಆಟಗಾರ ಹಾಶೀಂ ಆಮ್ಲಾ ಅವರ ದಾಖಲೆಯನ್ನು ಮೀರಿದರು. ಆಮ್ಲಾ ಅವರು 2012ರಲ್ಲಿ ದಿ ಓವಲ್ ಮೈದಾನದಲ್ಲಿ ತ್ರಿಶತಕ ಸಾಧನೆ ಮಾಡಿದ್ದರು.

ಮಲ್ದರ್ ಅವರು ವೇಗದ ತ್ರಿಶತಕ ದಾಖಲಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 297 ಎಸೆತಗಳಲ್ಲಿ 300ರ ಗಡಿ ದಾಟಿದರು. 2007–08ರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ ಅವರು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ನಲ್ಲಿ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು. ವಿಯಾನ್ ಬೌಲಿಂಗ್ನಲ್ಲಿಯೂ ಮಿಂಚಿದರು. ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 114 ಓವರ್ಗಳಲ್ಲಿ 5ಕ್ಕೆ626 ಡಿಕ್ಲೇರ್ಡ್: ವಿಯಾನ್ ಮಲ್ದರ್ ಔಟಾಗದೇ 367, ಡೇವಿಡ್ ಬೆಡಿಂಗಾಮ್ 82, ಲುವಾನ್ ಡ್ರೆ ಪ್ರಿಟೋರಿಯಸ್ 78, ಡಿವಾಲ್ಡ್ ಬ್ರೆವಿಸ್ 30, ಕೈಲ್ ವೆರೆಯನ್ ಔಟಾಗದೇ 42, ತನಾಕಾ ಚಿವಾಂಗಾ 112ಕ್ಕೆ2, ಕುಂದಲ್ ಮ್ಯಾಟಿಗಿಮು 124ಕ್ಕೆ2) ಜಿಂಬಾಬ್ವೆ: 43 ಓವರ್ಗಳಲ್ಲಿ 170 (ವೆಸ್ಲಿ ಮದೇವೆರೆ 25, ಸೀನ್ ವಿಲಿಯಮ್ಸ್ ಔಟಾಗದೇ 83, ಕೊಡಿ ಯೂಸುಫ್ 20ಕ್ಕೆ2, ವಿಯಾನ್ ಮಲ್ದರ್ 20ಕ್ಕೆ2, ಪ್ರಿನೆಲನ್ ಸುಬ್ರಾಯನ್ 42ಕ್ಕೆ4) ಫಾಲೋಆನ್ ಜಿಂಬಾಬ್ವೆ: 16 ಓವರ್ಗಳಲ್ಲಿ 1 ವಿಕೆಟ್ಗೆ 51 (ಡಿಯಾನ್ ಮೇಯರ್ಸ್ 11, ಕಾರ್ಬಿನ್ ಬಾಷ್ 21ಕ್ಕೆ1)
.ಟೆಸ್ಟ್ ಕ್ರಿಕೆಟ್: 400 ರನ್ ಹೊಡೆದಿದ್ದ ಲಾರಾ ದಾಖಲೆಗೆ ಬಂತಾ ಕುತ್ತು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.