ಸಿಡ್ನಿ: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬೂಮ್ರಾ, ಗಾಯಗೊಂಡು ಕ್ರೀಡಾಂಗಣದಿಂದ ಹೊರನಡೆದಿದ್ದಾರೆ. ಅವರ ಬದಲು, ವಿರಾಟ್ ಕೊಹ್ಲಿ ತಂಡದ ಹೊಣೆ ಹೊತ್ತುಕೊಂಡಿದ್ದಾರೆ.

ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯವು ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಿದೆ.

ಟೂರ್ನಿಯುದ್ದಕ್ಕೂ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 32 ವಿಕೆಟ್ಗಳನ್ನು ಉರುಳಿಸಿರುವ ಬೂಮ್ರಾ, ಸಿಡ್ನಿ ಟೆಸ್ಟ್ನಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಮೊದಲ ದಿನವೇ ಉಸ್ಮಾನ್ ಖ್ವಾಜಾ ವಿಕೆಟ್ ಪಡೆದಿದ್ದ ಅವರು, ಇಂದು ದಿನದಾಟದ ಆರಂಭದಲ್ಲೇ ಮಾರ್ನಸ್ ಲಾಬುಷೇನ್ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದರು.

ಊಟದ ವಿರಾಮದ ಬಳಿಕ ಒಂದು ಓವರ್ ಬೌಲಿಂಗ್ ಮಾಡಿದ ಬೂಮ್ರಾ ಅವರಿಗೆ, ಅಸ್ವಸ್ಥತೆಯಿಂದ ಬಳಲಿದರು. ನಂತರ ಕೊಹ್ಲಿಯೊಂದಿಗೆ ಮಾತನಾಡಿ, ಮೈದಾನದಿಂದ ಹೊರನಡೆದರು. ತಂಡದ ವೈದ್ಯರೊಂದಿಗೆ ಸ್ಥಳದಿಂದ ಹೊರಡುತ್ತಿರುವುದು ಅಧಿಕೃತವಾಗಿ ಪ್ರಸಾರವಾಗಿದೆ.

ಬೂಮ್ರಾ ಅವರು ಸ್ಟೇಡಿಯಂನಿಂದ ಎಸ್ಯುವಿ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿರುವುದನ್ನು ಫಾಕ್ಸ್ ಕ್ರೀಡಾ ವಾಹಿನಿ ಪ್ರಸಾರ ಮಾಡಿದೆ. ಅವರು ಸ್ಕ್ಯಾನಿಂಗ್ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.