ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

IND vs ENG T20: ಅಭಿಷೇಕ್ ಬಿರುಸಿನ ಶತಕ; ಇಂಗ್ಲೆಂಡ್ ಗೆಲುವಿಗೆ 248 ರನ್ ಗುರಿ

Published : 2 ಫೆಬ್ರುವರಿ 2025, 15:24 IST
Last Updated : 2 ಫೆಬ್ರುವರಿ 2025, 15:24 IST
ಫಾಲೋ ಮಾಡಿ
Comments
ಮೊದಲ ಎಸೆತದಲ್ಲಿ ಸಿಕ್ಸರ್‌
ಭಾರತ ಪರ ಟಿ20 ಪಂದ್ಯದಲ್ಲಿ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ನಾಲ್ಕನೇ ಬ್ಯಾಟರ್‌ ಅಭಿಷೇಕ್‌ ಶರ್ಮಾ. ಈ ಹಿಂದೆ ರೋಹಿತ್‌ ಶರ್ಮಾ (2021ರಲ್ಲಿ) ಇಂಗ್ಲೆಂಡ್‌ ಎದುರು, ಯಶಸ್ವಿ ಜೈಸ್ವಾಲ್‌ (2024ರಲ್ಲಿ) ಜಿಂಬಾಬ್ವೆ ಎದುರು ಮತ್ತು ಸಂಜು ಸ್ಯಾಮ್ಸನ್‌ (2025ರಲ್ಲಿ) ಇದೇ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದರು.
ವೇಗದ ಶತಕ
ಟಿ20 ಅಂ.ರಾ. ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಇರುವುದು ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಹಾಗೂ ಭಾರತದ ರೋಹಿತ್‌ ಶರ್ಮಾ ಹೆಸರಲ್ಲಿ. ಮಿಲ್ಲರ್‌ 2017ರಲ್ಲಿ ಬಾಂಗ್ಲಾದೇಶದ ಎದುರು ಹಾಗೂ ರೋಹಿತ್ 2017ರಲ್ಲಿ ಶ್ರೀಲಂಕಾ ಎದುರು ತಲಾ 37 ಎಸೆತಗಳಲ್ಲಿ ಮೂರಂಕಿ ದಾಟಿದ್ದರು. ನಂತರದ ಸ್ಥಾನಕ್ಕೆ ಇದೀಗ ಅಭಿಷೇಕ್‌ ಶರ್ಮಾ ಏರಿದ್ದಾರೆ.
4ನೇ ಗರಿಷ್ಠ ಮೊತ್ತ
ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಕಲೆಹಾಕಿದ ನಾಲ್ಕನೇ ಗರಿಷ್ಠ ಮೊತ್ತವಿದು. ಕಳೆದ ವರ್ಷ (2024ರಲ್ಲಿ) ಬಾಂಗ್ಲಾದೇಶ ಎದುರು 6 ವಿಕೆಟ್‌ಗೆ 297 ರನ್‌ ಹಾಗೂ ದಕ್ಷಿಣ ಆಫ್ರಿಕಾ ಎದುರು 1 ವಿಕೆಟ್‌ಗೆ 283 ರನ್‌ ಗಳಿಸಿರುವುದು ಸದ್ಯ ಅತ್ಯುತ್ತಮ ಸಾಧನೆಯಾಗಿವೆ. ಶ್ರೀಲಂಕಾ ಎದುರು 2017ರಲ್ಲಿ 5 ವಿಕೆಟ್‌ಗೆ 260 ರನ್‌ ಕಲೆಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT